ಜಲಾಂತರ್ಗಾಮಿ ಪ್ರವಾಸೋದ್ಯಮ 
ಪ್ರವಾಸ

ಮಹಾರಾಷ್ಟ್ರದಲ್ಲಿ ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ: ಆರಂಭ ಯಾವಾಗ ಗೊತ್ತಾ..?

2018–19ರಲ್ಲಿ ಅನುಮೋದನೆ ಪಡೆದ ಈ ಸಬ್‌ಮರಿನ್ ಪ್ರವಾಸೋದ್ಯಮ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದ್ದು, ಸಮುದ್ರದ ಒಳಜಗತ್ತನ್ನು ಸಮೀಪದಿಂದ ನೋಡುವ ಅವಕಾಶವನ್ನು ಒದಗಿಸಲಿದೆ.

ಒಂದು ಕಾಲದಲ್ಲಿ ಪ್ರವಾಸೋದ್ಯಮ ಎಂದರೆ ಬ್ಯಾಗ್ ಪ್ಯಾಕ್ ಮಾಡುವುದು, ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗುವುದು ಎಂದು ತಿಳಿಯಲಾಗುತ್ತಿತ್ತು. ಆದರೆ, ಇಂದಿನ ದಿನಗಳಲ್ಲಿ ಪ್ರವಾಸೋದ್ಯಮವು ಹೊಸ ಹೊಸ ರೂಪಗಳನ್ನು ಪಡೆದುಕೊಂಡಿದೆ.

ಆಧ್ಯಾತ್ಮಿಕ ಪ್ರವಾಸೋದ್ಯಮ, ಪರಂಪರಾ ಪ್ರವಾಸೋದ್ಯಮ, ಏಕಾಂಗಿ ಪ್ರವಾಸ, ವೈನ್ ಪ್ರವಾಸೋದ್ಯಮ ಮುಂತಾದ ಹಲವು ಆಯ್ಕೆಗಳು ಈಗ ಜನಪ್ರಿಯವಾಗಿವೆ. ಶೀಘ್ರದಲ್ಲೇ ಈ ಪಟ್ಟಿಗೆ ಮತ್ತೊಂದು ಹೊಸ ಪದ ಸೇರ್ಪಡೆಯಾಗಲಿದೆ. ಅದು, ಸಬ್‌ಮರಿನ್ ಪ್ರವಾಸೋದ್ಯಮ. ಅಂದರೆ, ಜಲಾಂತರ್ಗಾಮಿ ಪ್ರವಾಸೋದ್ಯಮ.

ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮವನ್ನು ಮಹಾರಾಷ್ಟ್ರದಲ್ಲಿ ಆರಂಭವಾಗುತ್ತಿದೆ. ಎಲ್ಲವೂ ಯೋಜನೆಯಂತೆ ನಡೆದಿದ್ದೇ ಆದರೆ, ಮೊದಲ ಬುಕಿಂಗ್ 2026 ರಿಂದಲೇ ಪ್ರಾರಂಭವಾಗುತ್ತದೆ.

ಮಹಾರಾಷ್ಟ್ರವು ಪರಿಚಯಿಸಲು ಸಿದ್ಧವಾಗಿರುವ ಜಲಾಂತರ್ಗಾಮಿ ಪ್ರವಾಸೋದ್ಯಮ ಯಾವುದು?

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೊಂಕಣ ಕರಾವಳಿಯಲ್ಲಿ ಈ ಜಲಾಂತರ್ಗಾಮಿ ಪ್ರವಾಸೋದ್ಯಮ ಆರಂಭವಾಗುತ್ತಿದ್ದು, ಯೋಜನೆ ಜಾರಿಗೆ ಸಿದ್ಧತೆಗಳು ಭರದಿಂದ ಸಾಗಿದೆ.

2018–19ರಲ್ಲಿ ಅನುಮೋದನೆ ಪಡೆದ ಈ ಸಬ್‌ಮರಿನ್ ಪ್ರವಾಸೋದ್ಯಮ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದ್ದು, ಸಮುದ್ರದ ಒಳಜಗತ್ತನ್ನು ಸಮೀಪದಿಂದ ನೋಡುವ ಅವಕಾಶವನ್ನು ಒದಗಿಸಲಿದೆ.

ಬ್ಯಾಟರಿ ಚಾಲಿತ ಸಬ್‌ಮರಿನ್‌ಗಳಲ್ಲಿ ಒಂದೇ ಸಮಯದಲ್ಲಿ ಸುಮಾರು 24 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಈ ಸಬ್‌ಮರಿನ್ ಮೂಲಕ ಸಮುದ್ರದ ಒಳಗಿನ ಅದ್ಭುತ ಜಗತ್ತನ್ನು ನೇರವಾಗಿ ಕಾಣುವ ಅವಕಾಶ ಸಿಗುತ್ತದೆ. ವಿವಿಧ ಬಗೆಯ ಮೀನುಗಳು, ಜಲಸಸ್ಯಗಳು ಹಾಗೂ ಇತರೆ ಜಲಚರ ಜೀವಿಗಳನ್ನು ಪರದೆಯ ಮೂಲಕವಲ್ಲದೆ ನೈಜವಾಗಿ ನೋಡುವ ಅನುಭವ ಸಿಗಲಿದೆ. ಯೋಜನೆಯ ಭಾಗವಾಗಿ Artificial Reefs ಹಾಗೂ ಒಂದು ಅಂಡರ್‌ವಾಟರ್ ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ.

ಈ ಯೋಜನೆ ಪ್ರವಾಸಿಗರಿಗೆ ಕೇವಲ ರೋಮಾಂಚಕ ಅನುಭವವನ್ನು ಮಾತ್ರವಲ್ಲದೆ, ಸಬ್‌ಮರಿನ್ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಒಳಜಗತ್ತನ್ನು ಪರಿಚಯಿಸುವ ಉದ್ದೇಶವನ್ನೂ ಹೊಂದಿದೆ.

ಸಾಮಾನ್ಯವಾಗಿ ಸಬ್‌ಮರಿನ್‌ಗಳು ನೌಕಾಪಡೆಯ ಬಳಕೆಗೆ ಮಾತ್ರ ಸೀಮಿತವಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿತವಾಗಿರುತ್ತದೆ. ಕೆಲವು ಮ್ಯೂಸಿಯಂಗಳು ಅಥವಾ ಡಾಕ್ಯುಮೆಂಟರಿಗಳ ಮೂಲಕ ಮಾತ್ರ ಅವುಗಳ ಪರಿಚಯ ಸಾಧ್ಯವಾಗುತ್ತದೆ. ಆದರೆ, ಇದೀಗ ಇದೇ ಮೊದಲ ಬಾರಿಗೆ ದೇಶದಲ್ಲಿ ಸಬ್‌ಮರಿನ್‌ಗಳು ಪ್ರವಾಸಿಗರ ಸಾರಿಗೆಗಾಗಿ ಬಳಕೆಯಾಗಲಿವೆ.

ಇದಲ್ಲದೆ, ಈ ಯೋಜನೆಯು ಸಮುದ್ರದ ಪರಿಸರ ವ್ಯವಸ್ಥೆಯ ಮಹತ್ವವನ್ನು ಜನರಿಗೆ ತಿಳಿಸುವುದು, ಜಲಜಗತ್ತಿನ ಸಂರಕ್ಷಣೆ ಮತ್ತು ಸಂವರ್ಧನೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನೂ ಹೊಂದಿದೆ.

ಸಬ್‌ಮರಿನ್ ಪ್ರವಾಸೋದ್ಯಮ ಸೇವೆ ಆರಂಭವಾಗುವ ನಿಖರ ದಿನಾಂಕ ಇನ್ನೂ ಪ್ರಕಟಿಸಲಾಗಿಲ್ಲವಾದರೂ, ಈ ವರ್ಷ ಅಥವಾ ಮುಂದಿನ ವರ್ಷದಲ್ಲಿ ಸೇವೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಚುನಾವಣೆ: ಸ್ಪಷ್ಟ ಬಹುಮತ ಪಡೆದ BNP, ಇವರೇನಾ ಮುಂದಿನ ಪ್ರಧಾನ ಮಂತ್ರಿ ?

Karnataka Budget 2026- ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿ, ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿವು...

ತಿಹಾರ್ ಜೈಲಿನಲ್ಲಿದ್ದಾಗ 'ಹಿತ' ಕಾಯುವ ಭರವಸೆ ನೀಡಿದ್ದೀರಿ- ಸೋನಿಯಾ ಮುಂದೆ ಡಿಕೆಶಿ ಅಳಲು: ರಾಹುಲ್ ಭೇಟಿ ಬಳಿಕ ಹಸನ್ಮುಖರಾಗಿ ಹೊರಬಂದ DCM!

ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ: ಸ್ಥಳದಲ್ಲೇ 7 ಮಂದಿ ಸಾವು

ತುಮಕೂರು: ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ಮಗಳು!

SCROLL FOR NEXT