ಸೆಂಟ್ ಮೊರಿಟ್ಜ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಕ್ರಿಕೆಟ್ ಸಂಬಂಧ ಕಟ್ ಆಗಿದೆ. ಆದರೆ ಇದರಿಂದ ಕ್ರಿಕೆಟಿಗರ ವೈಯಕ್ತಿಕ ಸಂಬಂಧಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬೂಮ್ ಬೂಮ್ ಖ್ಯಾತಿಯ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಸ್ವಿಟ್ಜರ್'ಲ್ಯಾಂಡ್'ನಲ್ಲಿ ನಡೆಯುತ್ತಿರುವ ಐಸ್ ಕ್ರಿಕೆಟ್ ಟೂರ್ನಿಯ ವೇಳೆ ತಮ್ಮ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಸ್ನೇಹದ ಬಗ್ಗೆ ಮಾತನಾಡಿರುವ ಅಫ್ರಿದಿ, ಭಾರತ ಮತ್ತು ಪಾಕಿಸ್ತಾನ ನಡುವೆ ರಾಜಕೀಯ ವೈರತ್ವ ಇರಬಹುದು. ಆದರೆ ಇದರಿಂದ ನನ್ನ ಮತ್ತು ಕೊಹ್ಲಿ ಸ್ನೇಹ ಸಂಬಂಧಕ್ಕೆ ಯಾವುದೇ ಧಕ್ಕೆಯಾಗಲ್ಲ ಎಂದಿದ್ದಾರೆ.
ವ್ಯಕ್ತಿ ಸಂಬಂಧ ಮತ್ತು ದೇಶದ ರಾಜಕೀಯ ಸಂಬಂಧಗಳ ನಡುವೆ ತುಂಬಾ ವ್ಯತ್ಯಾಸವಿದೆ. ಅವೆರಡೂ ಬೇರೆ ಬೇರ. ಹಾಗಾಗಿ ನಮ್ಮ ಸ್ನೇಹವನ್ನು ರಾಜಕೀಯದಿಂದ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಅಫ್ರಿದಿ ಹೇಳಿದ್ದಾರೆ.