ಬರ್ಲಿನ್ ವಾಯುನೆಲೆಯಲ್ಲಿ ತಾಯಿ ಮಗುವನ್ನು ಬರಮಾಡಿಕೊಂಡ ವೈದ್ಯಕೀಯ ತಂಡ 
ವಿದೇಶ

ಅಮೆರಿಕ ಯುದ್ಧವಿಮಾನದಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತ ಆಫ್ಘನ್ ಮಹಿಳೆ

ವಿಮಾನ ಮೇಲಕ್ಕೇರಿದ ಸ್ವಲ್ಪ ಸಮಯದಲ್ಲೇ ಗರ್ಭಿಣಿಯಲ್ಲಿ ನೋವು ಕಾಣಿಸಿಕೊಂಡಿತ್ತು. ಈ ವಿಷಯ ತಿಳಿದು ವಿಮಾನ ಚಾಲಕ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಕೆಳಮಟ್ಟದಲ್ಲಿ ಹಾರಾಟ ನಡೆಸಲು ಶುರುಮಾಡಿದ್ದ.

ವಾಷಿಂಗ್ಟನ್: ಅಫ್ಘಾನಿಸ್ತಾನದ ಕಾಬೂಲಿನಿಂದ ಹಾರಿದ್ದ ಅಮೆರಿಕದ ಯುದ್ಧವಿಮಾನ ಸಿ-17 ರಲ್ಲಿ ಪ್ರಯಾಣಿಸಿದ್ದ ಆಫ್ಘನ್ ಮಹಿಳೆಯೋರ್ವಳು ಮಗುವಿಗೆ ಜನ್ಮವಿತ್ತಿರುವುದಾಗಿ ಅಮೆರಿಕ ವಾಯುಪಡೆ ವರದಿ ಮಾಡಿದೆ. ಕಾಬೂಲಿನಿಂದ ಹೊರಟ ವಿಮಾನ ಜರ್ಮನಿಯ ಬರ್ಲಿನ್ ನಲ್ಲಿ ಇಳಿದಿತ್ತು. ಅಫ್ಘಾನಿಸ್ತಾನದಿಂದ ಸ್ಥಳಾಂತರ ಕಾರ್ಯಾಚರಣೆಗಳಿಗಾಗಿ ಬರ್ಲಿನ್ ಸೇನಾ ನೆಲೆಯನ್ನು ಅಮೆರಿಕ ಬಳಸಿಕೊಳ್ಳುತ್ತಿದೆ. 

ವಿಮಾನ ಮೇಲಕ್ಕೇರಿದ ಸ್ವಲ್ಪ ಸಮಯದಲ್ಲೇ ಗರ್ಭಿಣಿಯಲ್ಲಿ ನೋವು ಕಾಣಿಸಿಕೊಂಡಿತ್ತು. ಈ ವಿಷಯ ತಿಳಿದು ವಿಮಾನ ಚಾಲಕ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಕೆಳಮಟ್ಟದಲ್ಲಿ ಹಾರಾಟ ನಡೆಸಲು ಶುರುಮಾಡಿದ್ದಾಗಿ ತಿಳಿದುಬಂದಿದೆ. ಏಕೆಂದರೆ ನೆಲಮಟ್ಟದಿಂದ ಮೇಲಕ್ಕೆ ಹಾರಾಟ ನಡೆಸುವ ಸಂದರ್ಭ ಒತ್ತಡ ಕಂಡುಬರುತ್ತದೆ. ಇದನ್ನು ತಡೆಯಲು ವಿಮಾನವನ್ನು ಎಂದಿಗಿಂತ ಕೆಳಮಟ್ಟಕ್ಕೆ ಇಳಿಸಲಾಗಿತ್ತು. ಇದರಿಂದಾಗಿ ತಾಯಿಯ ಆರೋಗ್ಯ ತಹಬದಿಗೆ ಬಂದು ಆಕೆಯ ಜೀವ ಉಳಿಯಲು ಕಾರಣವಾಯಿತು ಎಂದು ಅಮೆರಿಕ ಸೇನಾ ವಕ್ತಾರರು ತಿಳಿಸಿದ್ದಾರೆ. 

ವಿಮಾನ ಬರ್ಲಿನ್ ನಲ್ಲಿ ಇಳಿಯುತ್ತಲೇ ಅಮೆರಿಕ ಸೇನೆಯ ವೈದ್ಯಕೀಯ ಸಿಬ್ಬಂದಿ ತಾಯಿ ಮತ್ತು ಮಗುವನ್ನು ಕರೆದೊಯ್ಯಲು ಸಿದ್ಧರಿದ್ದರು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿರುವುದಾಗಿ ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT