ವಿದೇಶ

ಇಸ್ರೇಲ್ ನ ಟೆಲ್ ಅವಿವ್ ವಿಶ್ವದ ನಂ.1 ದುಬಾರಿ ನಗರ: ನಂತರದ ಸ್ಥಾನಗಳಲ್ಲಿ ಪ್ಯಾರಿಸ್, ಸಿಂಗಪೂರ್

Harshavardhan M

ಜೆರುಸಲೆಂ: ವಿಶ್ವದ ಅತಿ ದುಬಾರಿ ನಗರ ಎನ್ನುವ ಖ್ಯಾತಿಗೆ ಇಸ್ರೇಲಿನ ಟೆಲ್ ಅವಿವ್ ನಗರ ಪಾತ್ರವಾಗಿದೆ. ಜೆರುಸಲೆಂ ಇಸ್ರೇಲಿನ ರಾಜಧಾನಿಯಾಗಿದ್ದರೂ, ದೇಶದ ಆರ್ಥಿಕ ಮತ್ತು ತಂತ್ರಜ್ನಾನ ಕೇಂದ್ರ ಟೆಲ್ ಅವಿವ್ ಆಗಿದೆ. 

ಇದೇ ಮೊದಲ ಬಾರಿಗೆ ಈ ಹೆಸರಿಗೆ ಇಸ್ರೇಲ್ ಪಾತ್ರವಾಗಿದೆ. ಹಣದುಬ್ಬರ ಏರಿಕೆ ಅದಕ್ಕೆ ಕಾರಣ ಎನ್ನಲಾಗುತ್ತಿದೆ. ಟೆಲ್ ಅವಿವ್ ನಂತರದ ಸ್ಥಾನಗಳಲ್ಲಿ ಪ್ಯಾರಿಸ್, ಸಿಂಗಪೂರ್ ಇದೆ. ಅಮೆರಿಕದ ನ್ಯೂಯಾರ್ಕ್ 6ನೇ ಸ್ಥಾನ ಪಡೆದಿದೆ.

ಕಳೆದ ವರ್ಷ ಪ್ಯಾರಿಸ್ ಮೊದಲ ಸ್ಥಾನ ಪಡೆದಿತ್ತು. ಇದೇ ವೇಳೆ ಯುದ್ಧಪೀಡಿತ ರಾಷ್ಟ್ರವಾದ ಸಿರಿಯ, ಡಮಸ್ಕಸ್, ವಾಸಿಸಲು ಅತಿ ಅಗ್ಗದ ನಗರ ಎನ್ನುವ ಹೆಸರಿಗೆ ಪಾತ್ರವಾಗಿದೆ. Economist Intelligence Unit ಸಂಸ್ಥೆ ನಡೆಸಿದ ಜಾಗತಿಕ ಸಮೀಕ್ಷೆಯಿಂದ ಈ ಮಾಹಿತಿ ಹೊರಬಂದಿದೆ.

SCROLL FOR NEXT