ವಿದೇಶ

ಪಾಕಿಸ್ತಾನ: ಮೃತ ಶ್ರೀಲಂಕಾ ಪ್ರಜೆಯ ಬಹುತೇಕ ಮೂಳೆಗಳು ಮುರಿತ: ಪ್ರಧಾನಿ ಇಮ್ರಾನ್ ಖಾನ್ ನ್ಯಾಯದ ಭರವಸೆ

Harshavardhan M

ಕರಾಚಿ: ಕಟ್ಟರ್ ಇಸ್ಲಾಮಿಸ್ಟ್ ಪಕ್ಷ 'ತೆಹ್ರೀಕ್ ಇ ಲಬ್ಬೈಕ್- ಪಾಕಿಸ್ತಾನ್' ಕಾರ್ಯಕರ್ತರು ಲಾಹೋರ್ ನಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆ ಮೇಲೆ ದಾಳಿ ನಡೆಸಿ ಅದರ ಮ್ಯಾನೇಜರ್ ಶ್ರೀಲಂಕಾ ಪ್ರಜೆ ದಿಯವದನ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದಾಗಿ ಆತ ಮೃತಪಟ್ಟಿದ್ದರು.

ದೇಹದ ಎಲ್ಲಾ ಭಾಗಗಳ ಮೂಳೆಗಳು ಮುರಿದಿರುವ ಮಾಹಿತಿ ಮರಣೋತ್ತರ ವರದಿಯಿಂದ ಬಹಿರಂಗವಾಗಿದೆ. ತಲೆಬುರುಡೆ ಮತ್ತು ದವಡೆ ಮೂಳೆಗಳು ಮುರಿತಕ್ಕೊಳಗಾಗಿದ್ದೇ ಸಾವಿಗೆ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. 

ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಶ್ರೀಲಂಕಾ ಪ್ರಜೆ ಮೈಮೇಲೆ ಬೆಂಕಿ ಹಚ್ಚಿದ್ದರು. ಅದರ ಪರಿಣಾಮ ದೇಹದ ಶೇ.99 ಭಾಗ ಸುಟ್ಟು ಹೋಗಿತ್ತು. 

ಮೃತರ ಸಂಬಂಧಿಕರು ಹತ್ಯೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಿಸಬೇಕಾಗಿ ಆಗಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

SCROLL FOR NEXT