ಅಮೆರಿಕ ಸೇನಾ ವಾಹನಗಳಲ್ಲೇ ತಾಲಿಬಾನ್ ಪರೇಡ್ 
ವಿದೇಶ

ಬಳಸಲಾಗದಂತೆ ನಿಷ್ಕ್ರಿಯಗೊಳಿಸಿ ಬಿಟ್ಟು ಹೋಗಿದ್ದ ಅಮೆರಿಕ ಸೇನಾ ವಾಹನಗಳಲ್ಲೇ ತಾಲಿಬಾನಿಗಳ ಪರೇಡ್!

ಆಫ್ಘಾನಿಸ್ತಾನ ತೊರೆಯುವಾಗ ತಾವು ತಂದಿದ್ದ ಸೇನಾ ವಾಹನಗಳನ್ನು ಬಳಕೆ ಮಾಡದಂತೆ ನಿಷ್ಕ್ರಿಯಗೊಳಿಸಿದ್ದೇವೆ ಎಂದು ಹೇಳಿದ್ದ ಅಮೆರಿಕ ಸೇನೆಯ ಹೇಳಿಕೆ ಬೆನ್ನಲ್ಲೇ ಅದೇ ವಾಹನಗಳಲ್ಲಿ ತಾಲಿಬಾನ್ ಪಡೆ ಕಾಬೂಲ್ ನಲ್ಲಿ ಪರೇಡ್ ನಡೆಸಿವೆ.

ಕಾಬೂಲ್: ಆಫ್ಘಾನಿಸ್ತಾನ ತೊರೆಯುವಾಗ ತಾವು ತಂದಿದ್ದ ಸೇನಾ ವಾಹನಗಳನ್ನು ಬಳಕೆ ಮಾಡದಂತೆ ನಿಷ್ಕ್ರಿಯಗೊಳಿಸಿದ್ದೇವೆ ಎಂದು ಹೇಳಿದ್ದ ಅಮೆರಿಕ ಸೇನೆಯ ಹೇಳಿಕೆ ಬೆನ್ನಲ್ಲೇ ಅದೇ ವಾಹನಗಳಲ್ಲಿ ತಾಲಿಬಾನ್ ಪಡೆ ಕಾಬೂಲ್ ನಲ್ಲಿ ಪರೇಡ್ ನಡೆಸಿವೆ.

ಹೌದು.. ಅಮೆರಿಕ ಸೇನೆ ನಿಷ್ಕ್ರಿಯಗೊಳಿಸಿ ಹೋಗಿದ್ದ ಸೇನಾ ವಾಹನಗಳಲ್ಲೇ ತಾಲಿಬಾನ್ ಪಡೆಗಳು ರಾಜಧಾನಿ ಕಾಬೂಲ್ ಮತ್ತು ಕಾಂದಾಹಾರ್ ನಲ್ಲಿ ಪರೇಡ್ ನಡೆಸುವ ಮೂಲಕ ಮತ್ತೆ ಅಮೆರಿಕಕ್ಕೆ ತೀವ್ರ ಮುಜುಗರವನ್ನುಂಟು ಮಾಡಿವೆ. ಈ ಕುರಿತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿದ್ದು, ಅಮೆರಿಕ ಸೇನೆ ಬಳಕೆ ಮಾಡುತ್ತಿದ್ದ ಹಮ್ವೀರ್ ಜೀಪುಗಳು ಮತ್ತು ಶಸ್ತ್ರಸಜ್ಜಿತ ಎಸ್ ಯುವಿ ವಾಹನಗಳ ಒಳಗೆ ಮತ್ತು ಹೊರಗೆ ಮೇಲ್ಪಾಗದಲ್ಲಿ ಶಸ್ತ್ರಸಜ್ಜಿತ ತಾಲಿಬಾನ್ ಬಂಡುಕೋರರು ನಿಂತು ಪರೇಡ್ ನಡೆಸಿದ್ದಾರೆ.

ಮೇಲ್ನೋಟಕ್ಕೆ ಅಮೆರಿಕ ಸೇನೆ ಹೇಳಿಕೆಯಂತೆ ಈ ಜೀಪುಗಳಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಬದಲಿಗೆ ಕಾರ್ಯಾಚರಣೆಗೆ ಈ ಜೀಪುಗಳು ಸರ್ವಸನ್ನದ್ಧವಾಗಿರುವಂತೆ ತೋರುತ್ತಿದೆ. ಅಲ್ಲದೆ ಕಾಂದಾಹಾರ್ ನಲ್ಲಿದ್ದ ಆಮೆರಿಕ ಸೇನೆ ಶಸ್ತ್ರಾಗಾರಗಳನ್ನು ತಾಲಿಬಾನಿಗರು ಸಂಪೂರ್ಣವಾಗಿ ವಶಕ್ಕೆ ಪಡೆದಿದ್ದಾರೆ. 

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ತಾಲಿಬಾನ್ ಪಡೆ ಅಮೆರಿಕ ಸೇನೆ ಬಿಟ್ಟು ಹೋಗಿದ್ದ ಬ್ಲಾಕ್ ಹಾಕ್ ಸೇನಾ ಹೆಲಿಕಾಪ್ಟರ್ ನಲ್ಲಿ ಕಾಬೂಲ್ ನಲ್ಲಿ ಹಾರಾಟ ನಡೆಸಿತ್ತು. ತಾಲಿಬಾನ್ ನ ಬಿಳಿ ಧ್ವಜವನ್ನು ಹೆಲಿಕಾಪ್ಟರ್ ಗೆ ಅಳವಡಿಸಿ ಹಾರಾಟ ನಡೆಸಲಾಗಿತ್ತು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಮತ್ತೊಂದು ವಿಡಿಯೋದಲ್ಲಿ ತಾಲಿಬಾನ್ ಬಂಡುಕೋರನೋರ್ವ ಅಮೆರಿಕ ಸೇನೆಯ ಸೇನಾ ಸಮವಸ್ತ್ರ ಧರಿಸಿ ಸಿಎಚ್46 ಸೀನೈಟ್ ಹೆಲಿಕಾಪ್ಟರ್ ಮುಂದೆ ನಿಂತು ಅದನ್ನು ಪರಿಶೀಲಿಸುತ್ತಿದ್ದ ಮತ್ತು ಕಾಕ್ ಪೀಟ್ ನಲ್ಲಿ ಕುಳಿತು ಕಾಪ್ಟರ್ ಚಾಲನೆ ಮಾಡುವ ರೀತಿ ಪೋಸ್ ನೀಡುತ್ತಿದ್ದ ವಿಡಿಯೋ ಕೂಡ ಹರಿದಾಡಿತ್ತು. 

ತದ್ವಿರುದ್ಧ ಹೇಳಿಕೆ ನೀಡಿದ ಅಮೆರಿಕ
ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆ ತನ್ನ ಸೇನೆಯ ಬೆಂಬಲಕ್ಕೆ ಅಮೆರಿಕ ನಿಂತಿದ್ದು, ತಮ್ಮ ಸೈನಿಕರು ಆಪ್ಘನ್ ತೊರೆಯುವಾಗ ಅಲ್ಲಿದ್ದ ಸೇನಾ ವಾಹನಗಳು, ಸೇನಾ ಯಂತ್ರೋಪಕರಣಗಳನ್ನು ಬಳಸಲಾಗದ ರೀತಿಯಲ್ಲಿ ನಿಷ್ಕ್ರಿಯಗೊಳಿಸಿದ್ದಾರೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಪೆಂಟಗನ್ ಕಾರ್ಯದರ್ಶಿ ಜಾನ್ ಕಿರ್ಬಿ ಅವರು, ತಾಲಿಬಾನಿಗಳು ಅಮೆರಿಕ ಸೇನೆಯ ಸೇನಾವಾಹನಗಳು, ಕಾಪ್ಟರ್ ಗಳು, ಯುದ್ಧ ವಿಮಾನಗಳನ್ನು ಬಳಕೆ ಮಾಡಲು ಯತ್ನಿಸಬಹುದು. ಅವರು ಅವುಗಳ ಮುಂದೆ ಹೋಗಿ ನೋಡಬಹುದು. ಒಳಗೆ ಕುಳಿತುಕೊಳ್ಳಬಹುದು. ಪೋಟೋಗೆ ಪೋಸ್ ನೀಡಬಹುದು. ಆದರೆ ಅವರು ಅವುಗಳನ್ನು ಬಳಕೆ ಮಾಡಲು ಸಾಧ್ಯವಿಲ್ಲ. ರಿಪೇರಿ ಕೂಡ ಮಾಡಲಾಗದಂತೆ ಅಷ್ಟರ ಮಟ್ಟಿಗೆ ಅವುಗಳನ್ನು ಸೈನಿಕರು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಹೇಳಿದ್ದಾರೆ. 

ಇಷ್ಟಕ್ಕೂ ಅಮೆರಿಕ ಸೇನೆ ಬಿಟ್ಟುಹೋದದ್ದೇನು?
ಅಮೆರಿಕ ಸೈನಿಕರು ನಿಷ್ಕ್ರಿಯಗೊಳಿಸಿದ್ದೇವೆ ಎಂದು ಹೇಳಲಾದ ಸೇನಾ ಸಾಮಗ್ರಿಗಳಲ್ಲಿ 73 ಯುದ್ಧವಿಮಾನಗಳು, 70 ಸೇನಾ ಲಾರಿಗಳು, 27 ಹಮ್ಮರ್ ಜೀಪುಗಳು ಸೇರಿವೆ. ಇದಲ್ಲದೆ ಮೂಲಗಳ ಪ್ರಕಾರ ಆಫ್ಘಾನಿಸ್ತಾನದಾದ್ಯಂತ ಅಮೆರಿಕ 2 ಸಾವಿರ ಸೇನಾವಾಹನಗಳಿದ್ದು, ಈ ಪೈಕಿ ಯುಎಸ್ ಹಮ್ವೀಸ್, 74 ಯುದ್ಧ ವಿಮಾನಗಳು, ಎಂ16 ಅಸಾಲ್ಟ್ ವೆಪನ್ ಸೇರಿದಂತೆ 6 ಲಕ್ಷ ಇನ್ ಫ್ಯಾಂಟ್ರಿ ವೆಪನ್ ಗಳು, 1.62ಲಕ್ಷ ಸೇನಾ ಸಂವಹನ ಸಂಪರ್ಕ ಯಂತ್ರಗಳು, 16 ಸಾವಿರ ನೈಟ್ ವಿಷನ್ ಕನ್ನಡಕಗಳು ಸೇರಿದಂತೆ ಹಲವು ಉಪಕರಣಗಳಿವೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?