ಆಪಲ್ ಸಂಸ್ಥೆಯ ಚಿನ್ಹೆ 
ವಿದೇಶ

ಗೂಢಚರ್ಯೆಗೆ ಐಫೋನ್ ಬಳಸಿದ್ದ ಇಸ್ರೇಲಿ ಸಂಸ್ಥೆ: ಭದ್ರತಾ ಲೋಪ ಸರಿಪಡಿಸಿದ ಆಪಲ್!

ಅಂತಾರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರ ಐಫೋನುಗಳನ್ನು ಹ್ಯಾಕ್ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಜಗತ್ತಿನಲ್ಲೇ ಅತ್ಯಂತ ಸುರಕ್ಷಿತವಾದ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ ಸಂಸ್ಥೆಗೆ ಘಟನೆಯಿಂದ ಮುಜುಗರ ಉಂಟಾಗಿತ್ತು.

ವಾಷಿಂಗ್ಟನ್: ಐಫೋನಿನಲ್ಲಿ ಪತ್ತೆಯಾಗಿದ್ದ ಭದ್ರತಾಲೋಪವನ್ನು ಸರಿಪಡಿಸಿರುವುದಾಗಿ ಆಪಲ್ ಸಂಸ್ಥೆ ತಿಳಿಸಿದೆ. ಈ ಹಿಂದೆ ಸೌದಿ ಅರೇಬಿಯಾದ ಸಾಮಾಜಿಕ ಕಾರ್ಯಕರ್ತರು ಹಾಗೂ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರ ಐಫೋನುಗಳನ್ನು ಹ್ಯಾಕ್ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು. 

ಇಸ್ರೇಲ್ ಮೂಲದ ಹ್ಯಾಕಿಂಗ್ ಸಂಸ್ಥೆ ಎನ್ ಎಸ್ ಒ ಈ ಕೃತ್ಯದ ಹಿಂದೆ ಇದೆ ಎನ್ನುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಸೌದಿ ಸರ್ಕಾರದ ಸೂಚನೆ ಮೇರೆಗೆ ಇಸ್ರೇಲ್ ಸಂಸ್ಥೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿತ್ತು. 

ಜಗತ್ತಿನಲ್ಲೇ ಅತ್ಯಂತ ಸುರಕ್ಷಿತವಾದ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ ಸಂಸ್ಥೆಗೆ ಘಟನೆಯಿಂದ ಮುಜುಗರ ಉಂಟಾಗಿತ್ತು. ಐಫೋನ್ ನಲ್ಲಿ ಇದ್ದ ಒಂದು ಲೋಪವನ್ನು ಇಸ್ರೇಲಿ ಸಂಸ್ಥೆ ಪತ್ತೆಹಚ್ಚಿತ್ತು. ಆ ಲೋಪದ ಸಹಾಯದಿಂದ ಸಂಸ್ಥೆ ಗೂಡಚರ್ಯೆ ತಂತ್ರಾಂಶವನ್ನು ಬಳಕೆದಾರರಿಗೆ ತಿಳಿಯದಂತೆಯೇ ಅವರ ಐಫೋನುಗಳಲ್ಲಿ ಇನ್ ಸ್ಟಾಲ್ ಮಾಡಿತ್ತು.

ಆ ತಂತ್ರಾಂಶ ಬಳಕೆದಾರರ ಮೊಬೈಲಿನಲ್ಲಿ ದಾಖಲಾಗಿದ್ದ ಮಾಹಿತಿಯನ್ನು ಕದ್ದು ಗೌಪ್ಯವಾಗಿ ರವಾನೆ ಮಾಡುತ್ತಿತ್ತು. ಇದೀಗ ಆ ಲೋಪವನ್ನು ಸರಿಪಡಿಸಲಾಗಿದೆಯೆಂದು ಆಪಲ್ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT