ವಿದೇಶ

ದೇಶದ ಆರ್ಥಿಕ ಪ್ರಗತಿಗಾಗಿ ಎಲ್ಲಾ ಕ್ಷೇತ್ರದ ಉದ್ಯೋಗಿಗಳಿಗೆ ಸಂಬಳ ಏರಿಕೆ: ಭಾವೀ ಜಪಾನಿ ಸಿಎಂ ಘೋಷಣೆ

Harshavardhan M

ಟೊಕಿಯೊ: ಜಪಾನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಫುಮಿಯೊ ಕಿಶಿಡಾ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಉದ್ಯೋಗಿಗಳ ಸಂಬಳ ಹೆಚ್ಚಿಸುವುದೇ ಪರಿಹಾರ ಎಂದು ಹೇಳಿದ್ದಾರೆ. 

ಈ ಹಿಂದಿನ ಪ್ರಧಾನಿ ಶಿಂಜೊ ಅಬೆ ಅವರು 'ಮೇಕ್ ಜಪಾನ್ ಗ್ರೇಟ್ ಅಗೇನ್' ಎನ್ನುವ ಅಭಿಯಾನದಡಿ ಹಲವು ಆರ್ಥಿಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪ್ರಗತಿ ಹಳ್ಳ ಹಿಡಿದಿತ್ತು.

ದೇಶದ ಎಲ್ಲಾ ಸಮಸ್ಯೆಗಳಿಗೆ ಸಂಬಳ ಏರಿಕೆಯೇ ಪರಿಹಾರ ಎಂದು ನಂಬಿರುವ ಫುಮಿಯೊ ಕಿಶಿಡಾ ತಾವು ಅಧಿಕಾರ ವಹಿಸಿಕೊಂಡ ಕೂಡಲೆ ಅದರತ್ತ ಗಮನಹರಿಸುವುದಾಗಿ ಹೇಳಿದ್ದಾರೆ.

SCROLL FOR NEXT