ಮೃತದೇಹಗಳ ಸ್ಥಳಾಂತರಿಸುತ್ತಿರುವ ಅಧಿಕಾರಿಗಳು. 
ವಿದೇಶ

ದಕ್ಷಿಣ ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ 17 ಮಂದಿ ಶವವಾಗಿ ಪತ್ತೆ!

ದಕ್ಷಿಣ ಆಫ್ರಿಕಾದ ಪೂರ್ವ ಲಂಡನ್ ನಗರದ ಎನೋಬೆನಿ ಟಾವೆರ್ನ್‌ನಲ್ಲಿ 17 ಜನರು ನಿಗೂಢವಾಗಿ ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಭೀತಿ ಸೃಷ್ಟಿ ಮಾಡಿದೆ.

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಪೂರ್ವ ಲಂಡನ್ ನಗರದ ಎನೋಬೆನಿ ಟಾವೆರ್ನ್‌ನಲ್ಲಿ 17 ಜನರು ನಿಗೂಢವಾಗಿ ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಭೀತಿ ಸೃಷ್ಟಿ ಮಾಡಿದೆ.

ಮಾಧ್ಯಮಗಳು ಭಾನುವಾರ ಈ ವರದಿ ನೀಡಿವೆ. ನ್ಯೂಸ್‌ರೂಮ್ ಆಫ್ರಿಕಾ ಟೆಲಿವಿಷನ್ ಚಾನೆಲ್ ಉಲ್ಲೇಖಿಸಿದಂತೆ “ಘಟನೆಯ ಸುತ್ತಲಿನ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ವಕ್ತಾರರು ಬಿಬಿಸಿಗೆ ತಿಳಿಸಿದ್ದಾರೆ. ಅಲ್ಲದೆ, ಮಾಧ್ಯಮ ವರದಿಗಳ ಪ್ರಕಾರ ಮೃತರ ಸಂಬಂಧಿಕರಿಗೆ ಮೃತ ದೇಹಗಳನ್ನು ನೋಡಲು ಅವಕಾಶ ನೀಡುತ್ತಿಲ್ಲ ಎಂದು ವರದಿ ಮಾಡಿವೆ.

“ದೇಹಗಳು ಕ್ಲಬ್ ನಲ್ಲಿ ನೆಲದ ಮೇಲೆ ಬಿದ್ದಿವೆ” ಎಂದು ಡೈಲಿ ಡಿಸ್ಪ್ಯಾಚ್ ಪತ್ರಿಕೆಯಲ್ಲಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಈಸ್ಟರ್ನ್ ಕೇಪ್ ಪೊಲೀಸ್ ಕಮಿಷನರ್ ನೊಮ್ಥೆಲ್ ಲಿಲಿಯನ್ ಮೇನೆ, ಬಾರ್‌ನೊಳಗೆ ಕಾಲ್ತುಳಿತ ಸಂಭವಿಸಿದೆ ಎಂದು SABC ನ್ಯೂಸ್‌ಗೆ ತಿಳಿಸಿದ್ದಾರೆ. ಇನ್ನು ಮೃತಪಟ್ಟವರ ಪೈಕಿ ಹೆಚ್ಚಿನವರು 18 ರಿಂದ 20 ವರ್ಷದ ಒಳಗಿನವರು ಎಂದು ಬ್ರಿಗೇಡಿಯರ್ ಕಿನಾನಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?