ಕ್ಯಾಮರಾ (ಸಂಗ್ರಹ ಚಿತ್ರ) 
ವಿದೇಶ

ಆಸ್ಟ್ರೇಲಿಯಾದ ರಕ್ಷಣಾ ಪ್ರದೇಶಗಳಿಂದ ಚೀನಾ ಮೇಡ್ ಕ್ಯಾಮರಾಗಳಿಗೆ ಗೇಟ್ ಪಾಸ್!

ಸರ್ಕಾರಿ ಕಟ್ಟಡಗಳು, ರಕ್ಷಣಾ ಪ್ರದೇಶಗಳ ಸುರಕ್ಷತೆಯ ದೃಷ್ಟಿಯಿಂದ ಆಸ್ಟ್ರೇಲಿಯಾ ಅಲ್ಲಿ ಅಳವಡಿಸಲಾಗಿರುವ ಚೀನಾ ಮೇಡ್ ಕ್ಯಾಮರಾಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

ಕ್ಯಾನ್ಬೆರಾ: ಸರ್ಕಾರಿ ಕಟ್ಟಡಗಳು, ರಕ್ಷಣಾ ಪ್ರದೇಶಗಳ ಸುರಕ್ಷತೆಯ ದೃಷ್ಟಿಯಿಂದ ಆಸ್ಟ್ರೇಲಿಯಾ ಅಲ್ಲಿ ಅಳವಡಿಸಲಾಗಿರುವ ಚೀನಾ ಮೇಡ್ ಕ್ಯಾಮರಾಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

ರಕ್ಷಣಾ ಸಚಿವ ಈ ಬಗ್ಗೆ ಮಾಹಿತಿ ನೀಡಿದ್ದು, ಇದೇ ಮಾದರಿಯ ಕ್ರಮಗಳನ್ನು ಬ್ರಿಟನ್, ಅಮೇರಿಕಾ ಸರ್ಕಾರಗಳೂ ಕೈಗೊಳ್ಳುತ್ತಿವೆ. 

ಸೂಕ್ಷ್ಮ ಪ್ರದೇಶಗಳಿಂದ ಚೀನಾ ಮೇಡ್ ಕ್ಯಾಮರಾಗಳಿಗೆ ಗೇಟ್ ಪಾಸ್ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಚೀನಾ ಕಂಪನಿಗಳಿಗೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವಂತೆ ಬೀಜಿಂಗ್ ಭದ್ರತಾ ಸೇವೆಗಳು ಒತ್ತಡ ಹೇರುತ್ತಿರುವುದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಆಸ್ಟ್ರೇಲಿಯಾದ 200 ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳಲ್ಲಿ ಚೀನಾದ ಭದ್ರತಾ ಕ್ಯಾಮರಾಗಳಿವೆ. ಈ ಪೈಕಿ ಇತ್ತೀಚೆಗೆ ರಕ್ಷಣಾ ಇಲಾಖೆ ಸಹ ಚೀನಾದ ಕ್ಯಾಮರಾಗಳನ್ನು ಅವಳಡಿಸಿಕೊಂಡಿತ್ತು.
 
ಆಸ್ಟ್ರೆಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಈ ಬಗ್ಗೆ ಮಾತನಾಡಿ, ರಕ್ಷಣಾ ಇಲಾಖೆಯಲ್ಲಿರುವ ಚೀನಾ ಮೇಡ್ ಕ್ಯಾಮರಾಗಳನ್ನು ಹುಡುಕಿ ಅದನ್ನು ತೆಗೆಯಲಿದ್ದಾರೆ ಎಂದು ತಿಳಿಸಿದ್ದಾರೆ. ಮಹತ್ವವಾದ ಸಂಗತಿ ನಮ್ಮ ಗಮನಕ್ಕೆ ಬಂದಿದ್ದು, ನಾವು ಅದನ್ನು ಸರಿಪಡಿಸುತ್ತೇವೆ ಎಂದು ರಾಷ್ಟ್ರೀಯ ಪ್ರಸಾರ ವಾಹಿನಿ ಎಬಿಸಿ ಗೆ ಹೇಳಿದ್ದಾರೆ. ಚೀನಾ ಕ್ಯಾಮರಾಗಳನ್ನು ತೆಗೆಯುವ ಅಭಿಯಾನ ಪೂರ್ಣಗೊಳಿಸಿ ನಮ್ಮ ಕಟ್ಟಡಗಳನ್ನು ಸಂಪೂರ್ಣ ಸುರಕ್ಷಿತವಾಗಿರಿಸುತ್ತೇವೆ" ಎಂದು ಆಸ್ಟ್ರೇಲಿಯಾ ರಕ್ಷಣಾ ಸಚಿವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!