ಕಸ ತುಂಬಿದ ಬಲೂನ್ 
ವಿದೇಶ

ಸರ್ವಾಧಿಕಾರಿಯ ಹುಚ್ಚಾಟ; ದಕ್ಷಿಣ ಕೊರಿಯಾಗೆ ಕಸ ತುಂಬಿದ ಬಲೂನ್ ರವಾನಿಸಿದ North Korea

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಂದು ಹುಚ್ಚಾಟ ಮೆರೆದಿದ್ದು, ಸೆಣಸಾಟದ ಭಾಗವಾಗಿ ಉತ್ತರ ಕೊರಿಯಾವು ದಕ್ಷಿಣ ಕೊರಿಯಾಗೆ ಕಸ ತುಂಬಿದ ಬಲೂನ್ ಗಳನ್ನು ರವಾನೆ ಮಾಡಿದೆ.

ಪ್ಯೋಗ್ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಂದು ಹುಚ್ಚಾಟ ಮೆರೆದಿದ್ದು, ಸೆಣಸಾಟದ ಭಾಗವಾಗಿ ಉತ್ತರ ಕೊರಿಯಾವು ದಕ್ಷಿಣ ಕೊರಿಯಾಗೆ ಕಸ ತುಂಬಿದ ಬಲೂನ್ ಗಳನ್ನು ರವಾನೆ ಮಾಡಿದೆ.

ಬೃಹತ್‌ ಬಲೂನ್‌ಗಳನ್ನು ಬಳಸಿಕೊಂಡು ‘ಕಸ’ ತುಂಬಿದ ಚೀಲಗಳನ್ನು ದಕ್ಷಿಣ ಕೊರಿಯಾದ ಗಡಿಯುದ್ದಕ್ಕೂ ಬಿಸಾಡಲಾಗಿದ್ದು, ಈ ಬಲೂನ್ ಗಳಲ್ಲಿ ಎಲ್ಲ ರೀತಿಯ ಕಸ ತುಂಬಲಾಗಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ ಎಂದು ದಕ್ಷಿಣ ಕೊರಿಯಾ ಮಾಧ್ಯಮಗಳು ಆರೋಪಿಸಿವೆ.

ಉತ್ತರ ಕೊರಿಯಾದಿಂದ ಕಳುಹಿಸಲಾದ ಸುಮಾರು 260 ಬಲೂನ್‌ಗಳನ್ನು ಪತ್ತೆಹಚ್ಚಲಾಗಿದ್ದು, ಸೋಲ್‌ನ ಗಡಿ ಪ್ರದೇಶ ಸೇರಿದಂತೆ ದಕ್ಷಿಣ ಕೊರಿಯಾದ ವಿವಿಧ ಸ್ಥಳಗಳಲ್ಲಿ ‘ಕಸ’ ತುಂಬಿದ ಚೀಲಗಳನ್ನು ಎಸೆಯಲಾಗಿದೆ. ಚೀಲಗಳಲ್ಲಿ ಹಾನಿಗೊಳಗಾದ ವಸ್ತುಗಳು, ಕಾಗದದ ಹಾಳೆಗಳು, ಪ್ಲಾಸ್ಟಿಕ್ ಬಾಟಲಿಗಳು, ಬ್ಯಾಟರಿಗಳು, ಗೊಬ್ಬರ, ಶೂಗಳ ಬಿಡಿಭಾಗ ಸೇರಿದಂತೆ ವಿವಿಧ ಕಸವನ್ನು ತುಂಬಿರುವುದು ಕಂಡುಬಂದಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ಹೇಳಿದ್ದಾರೆ.

ಇದುವರೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಬಲೂನ್‌ ಹಾಗೂ ಕಸ ತುಂಬಿರುವ ಚೀಲಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಜಿಪಿಎಸ್ ಸಿಗ್ನಲ್‌ಗಳನ್ನು ಸತತ ಎರಡನೇ ದಿನಕ್ಕೆ ಜಾಮ್ ಮಾಡುವ ಪ್ರಯತ್ನಗಳನ್ನು ಉತ್ತರ ಕೊರಿಯಾ ಮಾಡಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!