ಬ್ರೂಕ್ಲಿನ್ ಸೇತುವೆಗೆ ಮೆಕ್ಸಿಕನ್ ನೌಕಾಪಡೆಯ ತರಬೇತಿ ಹಡಗು ಢಿಕ್ಕಿ : ಇಬ್ಬರು ಸಾವು, 19 ಜನರಿಗೆ ಗಾಯ
ವಿದ್ಯುತ್ ಕಡಿತಗೊಂಡು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ, ಹಡಗಿನಲ್ಲಿದ್ದ 277 ಜನರಲ್ಲಿ 19 ಜನರಿಗೆ ಗಾಯಗಳಾಗಿದೆ.
ನ್ಯೂಯಾರ್ಕ್: 277 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮೆಕ್ಸಿಕನ್ ನೌಕಾಪಡೆಯ ಹಡಗು ವಿದ್ಯುತ್ ಕಡಿತಗೊಂಡು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು 19 ಜನರು ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ತಿಳಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ನಡೆದ ಘಟನೆಯ ವಿವರಗಳನ್ನು ಹಂಚಿಕೊಂಡ ನ್ಯೂಯಾರ್ಕ್ ನಗರದ ಮೇಯರ್, "ಸ್ಥಳೀಯ ಕಾಲಮಾನ ಇಂದು ನಸುಕಿನ ಜಾವ ಮೆಕ್ಸಿಕನ್ ನೌಕಾಪಡೆಯ ಎತ್ತರದ ಹಡಗು ಕ್ಯುಹ್ಟೆಮೊಕ್ ವಿದ್ಯುತ್ ಕಡಿತಗೊಂಡು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದಿದೆ.
ಈ ಸಮಯದಲ್ಲಿ, ಹಡಗಿನಲ್ಲಿದ್ದ 277 ಜನರಲ್ಲಿ 19 ಜನರಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಇನ್ನೂ ಇಬ್ಬರು ಮೃತಪಟ್ಟಿದ್ದಾರೆ ಎಂದಿದ್ದಾರೆ.
ಇದಕ್ಕೂ ಮೊದಲು, ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಮುಖ್ಯಸ್ಥ ವಿಲ್ಸನ್ ಅರಾಂಬೋಲ್ಸ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ಹಡಗು ರಾತ್ರಿ 8:20 ರ ಸುಮಾರಿಗೆ ವಿದ್ಯುತ್ ಕಡಿತಗೊಂಡಿದೆ ಎಂದು ಹೇಳಿದರು, ಕ್ಯಾಪ್ಟನ್ ಹಡಗನ್ನು ಕುಶಲತೆಯಿಂದ ನಡೆಸುತ್ತಿದ್ದರು, ಇದು ಹಡಗನ್ನು ಸೇತುವೆಯ ಕಂಬದ ಕಡೆಗೆ ತಳ್ಳಿ ಹಡಗಿನ ಮಾಸ್ಟ್ ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ಸಿಎನ್ಎನ್ ವರದಿ ಮಾಡಿದೆ.