ಡೊನಾಲ್ಡ್ ಟ್ರಂಪ್ 
ವಿದೇಶ

'ಹೇಳಿ ಇಲ್ಲದಿದ್ದರೆ ಜೈಲಿಗೆ ಹೋಗಿ': F-15 ಜೆಟ್‌ ಸೂಕ್ಷ್ಮ ಮಾಹಿತಿ 'ಸೋರಿಕೆದಾರನ' ಪತ್ತೆಗೆ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ, ಮಾಧ್ಯಮಗಳಿಗೆ ಬೆದರಿಕೆ!

ಕಾಣೆಯಾದ ಪೈಲಟ್ ಅನ್ನು ಸೆರೆಹಿಡಿದವರಿಗೆ ಬಹುಮಾನ ನೀಡುವುದಾಗಿ ಇರಾನ್ ಘೋಷಿಸಿದೆ. ಇದು ಶೋಧ ಮತ್ತು ರಕ್ಷಣಾ ಪ್ರಯತ್ನವನ್ನು ಮತ್ತಷ್ಟು ಜಟಿಲಗೊಳಿಸಿತು ಎಂದು ಟ್ರಂಪ್ ಹೇಳಿದರು.

ಇರಾನ್‌ನಲ್ಲಿ ಪತನಗೊಂಡ ಎಫ್-15 ಜೆಟ್‌ನ ಎರಡನೇ ಸಿಬ್ಬಂದಿ ಇರಾನ್‌ನಲ್ಲಿ ಕಾಣೆಯಾಗಿದ್ದರು ಮತ್ತು ಮೊದಲಿಗೆ, ನಮ್ಮ ಇನ್ನೊಬ್ಬ ಏರ್‌ಮ್ಯಾನ್ ಇನ್ನೂ ಅಲ್ಲಿಯೇ ಇದ್ದಾರೆ ಎಂದು ಇರಾನ್‌ಗೆ ತಿಳಿದಿರಲಿಲ್ಲ. ಆದರೆ, ಒಬ್ಬ 'ಮೋಲ್' (ಮಾಹಿತಿ ಸೋರಿಕೆ ಮಾಡುವ ಒಳಗಿನವ) ಕಾಣೆಯಾದ ಏರ್‌ಮ್ಯಾನ್ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಈ ಸುದ್ದಿ ಸಾರ್ವಜನಿಕಗೊಂಡ ನಂತರ, ಇರಾನ್ ಕೂಡ ಜಾಗೃತಗೊಂಡು ಅವನನ್ನು ಹುಡುಕಲು ಪ್ರಾರಂಭಿಸಿತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

'ಅವರಿಗೆ ಮೊದಲು ಈ ಬಗ್ಗೆ ತಿಳಿದಿರಲಿಲ್ಲ'

ಸೋಮವಾರ ಶ್ವೇತಭವನದ ಬ್ರೀಫಿಂಗ್ ಕೊಠಡಿಯಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದ ಪಡೆಗಳು ಒಬ್ಬ ಎಫ್-15 ಸಿಬ್ಬಂದಿಯನ್ನು ರಕ್ಷಿಸಿವೆ. ಆದರೆ, ಮತ್ತೊಬ್ಬ ಸಿಬ್ಬಂದಿಗಾಗಿ ಹುಡುಕುತ್ತಿವೆ ಎಂದು ಬಹಿರಂಗಪಡಿಸಿದ ಮಾಧ್ಯಮ ವರದಿಯಿಂದ ಇರಾನ್‌ ಎಚ್ಚೆತ್ತುಕೊಂಡಿತು. ಇದು ರಕ್ಷಣಾ ಕಾರ್ಯಾಚರಣೆಯನ್ನು ಸಂಕೀರ್ಣಗೊಳಿಸಿದೆ ಎಂದು ಹೇಳಿದರು.

'ಆ ಸೋರಿಕೆದಾರರನ್ನು ಹುಡುಕಲು ನಾವು ತುಂಬಾ ಕಷ್ಟಪಡುತ್ತಿದ್ದೇವೆ. ಅವರು ಮೂಲತಃ ನಮ್ಮಲ್ಲಿ ಒಬ್ಬರಾಗಿದ್ದಾರೆ. ಈ ಸೋರಿಕೆದಾರ ಎಫ್-15 ನಲ್ಲಿದ್ದ ಮತ್ತೊಬ್ಬರು ಕಾಣೆಯಾಗಿದ್ದಾರೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡುವವರೆಗೂ ಈ ಬಗ್ಗೆ ಇರಾನ್‌ಗೆ ತಿಳಿದಿರಲಿಲ್ಲ. ಇಂತಹ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವಿಕೆಯು ಅಮೆರಿಕದ ಮಿಲಿಟರಿಯನ್ನು ಹೆಚ್ಚು ಕಷ್ಟಕರ ಸ್ಥಿತಿಗೆ ತಳ್ಳಿದೆ. ಈ ಸೋರಿಕೆದಾರನು ನಮ್ಮಲ್ಲಿಯೇ ಒಬ್ಬರಾಗಿದ್ದಾರೆ' ಎಂದು ಟ್ರಂಪ್ ಹೇಳಿದರು.

ಅಮೆರಿಕದ ಅಧಿಕಾರಿಗಳು ಈ ಸುದ್ದಿಯನ್ನು ಪ್ರಕಟಿಸಿದ ಮಾಧ್ಯಮ ಸಂಸ್ಥೆಗೆ ನೇರವಾಗಿ ಹೋಗಿ ಮೂಲದ ಗುರುತನ್ನು ಕೇಳುತ್ತಾರೆ. ಒಂದು ವೇಳೆ ಅವರು ನಿರಾಕರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಟ್ರಂಪ್ ಹೇಳಿದರು. ಟ್ರಂಪ್ ಯಾವ ಮಾಧ್ಯಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

'ನಾವು ಅದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಏಕೆಂದರೆ, ನಾವು ಆ ಮಾಹಿತಿ ಪ್ರಸಾರ ಮಾಡಿದ ಮಾಧ್ಯಮ ಕಂಪನಿಗೆ ಹೋಗಲಿದ್ದೇವೆ. 'ರಾಷ್ಟ್ರೀಯ ಭದ್ರತೆಯ ವಿಚಾರವಾಗಿರುವುದರಿಂದ, ಮಾಹಿತಿ ನೀಡಿ ಅಥವಾ ಜೈಲಿಗೆ ಹೋಗಿ' ಎಂದು ಹೇಳಲಿದ್ದೇವೆ' ಎಂದು ಅವರು ಹೇಳಿದರು.

ಮಾಧ್ಯಮ ವರದಿ ನಂತರ ಎಚ್ಚೆತ್ತ ಇರಾನ್

ಈ ವರದಿ ಪ್ರಕಟವಾದ ನಂತರ, ಕಾಣೆಯಾದ ಪೈಲಟ್ ಅನ್ನು ಸೆರೆಹಿಡಿದವರಿಗೆ ಬಹುಮಾನ ನೀಡುವುದಾಗಿ ಇರಾನ್ ಘೋಷಿಸಿದೆ. ಇದು ಶೋಧ ಮತ್ತು ರಕ್ಷಣಾ ಪ್ರಯತ್ನವನ್ನು ಮತ್ತಷ್ಟು ಜಟಿಲಗೊಳಿಸಿತು ಎಂದು ಟ್ರಂಪ್ ಹೇಳಿದರು.

ನಾವು ಆ ಸೋರಿಕೆದಾರನನ್ನು ಕಂಡುಹಿಡಿಯಬೇಕು. ಏಕೆಂದರೆ, ಆತ ಅನಾರೋಗ್ಯ ಪೀಡಿತ ವ್ಯಕ್ತಿಯೇ ಆಗಿರಬೇಕು. ಇದು ಎಷ್ಟು ಕೆಟ್ಟದ್ದು ಎಂಬುದು ಬಹುಶಃ ಆತನಿಗೆ ತಿಳಿದಿರಲಿಲ್ಲ. ಆ ವ್ಯಕ್ತಿ ಹಾಗೆ ಮಾಡಿದ್ದಾನೆಂದು ನಾನು ಊಹಿಸಲು ಸಾಧ್ಯವಿಲ್ಲ. ಆದರೆ, ಆತ ಯಾರೆಂದು ನಾವು ಕಂಡುಹಿಡಿಯಲಿದ್ದೇವೆ. ಇದು ರಾಷ್ಟ್ರೀಯ ಭದ್ರತೆಯ ವಿಚಾರವಾಗಿದ್ದರಿಂದ ಆ ಸುದ್ದಿಯನ್ನು ಬರೆದ ವ್ಯಕ್ತಿ ಹೇಳದಿದ್ದರೆ, ಜೈಲಿಗೆ ಹೋಗುತ್ತಾರೆ' ಎಂದು ಟ್ರಂಪ್ ಹೇಳಿದರು.

ಯುಎಸ್ ಮಿಲಿಟರಿಯ ರಕ್ಷಣಾ ಕಾರ್ಯಾಚರಣೆ

ಶುಕ್ರವಾರ ನೈಋತ್ಯ ಇರಾನ್‌ನಲ್ಲಿ ಅಮೆರಿಕದ F-15E ಸ್ಟ್ರೈಕ್ ಈಗಲ್ ಫೈಟರ್ ಜೆಟ್ ಅನ್ನು ಹೊಡೆದುರುಳಿಸಲಾಗಿದೆ. ಫೆಬ್ರುವರಿ 28 ರಂದು ಯುದ್ಧ ಪ್ರಾರಂಭವಾದ ನಂತರ ಇರಾನ್‌ನೊಳಗೆ ಅಮೆರಿಕದ ಯುದ್ಧ ವಿಮಾನ ನಾಶವಾಗಿರುವುದು ಇದೇ ಮೊದಲು ಎಂದು ದೃಢಪಟ್ಟಿರುವುದರಿಂದ ಇದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಒಬ್ಬ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳ ಅಧಿಕಾರಿ ಇಬ್ಬರೂ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ. ಬಳಿಕ ಪೈಲಟ್ ಅನ್ನು ಶೀಘ್ರದಲ್ಲೇ ರಕ್ಷಿಸಲಾಯಿತು. ಆದರೆ, ಎರಡನೇ ವ್ಯಕ್ತಿಯನ್ನು ತಕ್ಷಣವೇ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಹೀಗಾಗಿ, ಸದ್ಯ ಅಮೆರಿಕ ಆತನ ಹುಡುಕಾಟದಲ್ಲಿ ತೊಡಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 'ಬೇಜವಾಬ್ದಾರಿಯುತ ಬೆದರಿಕೆ'ಗಳಿಗೆ ತಲೆಬಾಗಲ್ಲ: ಟ್ರಂಪ್'ಗೆ ಇರಾನ್ ತಿರುಗೇಟು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ

West-Asia war: ಇರಾನ್'ನಿಂದ ಡ್ರೋನ್-ಮಿಸೈಲ್ ದಾಳಿ; ಸೌದಿ ಅರೇಬಿಯಾದ ಅಲ್ ಜುಬೈಲ್ ಕೈಗಾರಿಕಾ ನಗರದಲ್ಲಿ ಭಾರೀ ಅಗ್ನಿ ಅವಘಡ, ಹೆಚ್ಚಿದ ಭೀತಿ

ಕೆಲ್ಸ ಹೋದ್ರೆ ಏನು.. ವಿಂಟೇಜ್ ಪ್ಲಾನ್ ಮೂಲಕ ಮಾಸಿಕ 43 ಸಾವಿರ ರೂ ಆದಾಯ ಗಳಿಸುತ್ತಿರುವ Oracle ಮಾಜಿ ಸಿಬ್ಬಂದಿ!

ಗ್ರೀನ್‌ಲ್ಯಾಂಡ್'ಗೆ ಅಮೆರಿಕಾ ಪಟ್ಟು: ಇರಾನ್ ವಿಚಾರದಲ್ಲಿ ಸಹಕರಿಸದ್ದಕ್ಕೆ NATOನ್ನು ‘ಪೇಪರ್ ಟೈಗರ್’ ಎಂದು ಟೀಕಿಸಿದ ಟ್ರಂಪ್, ಮಿತ್ರರಾಷ್ಟ್ರಗಳ ನಡುವೆ ಭಾರೀ ಬಿರುಕು..!

ಇಡೀ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ನಾಶ ಮಾಡುತ್ತೇವೆ; ಬಹುಶಃ ಆ ರಾತ್ರಿ ಇಂದೇ ಆಗಿರಬಹುದು: ಟ್ರಂಪ್ ಕೊನೇಯ ಎಚ್ಚರಿಕೆ

SCROLL FOR NEXT