ಅಮೆರಿಕದ ಎರಡು ಬಲಿಷ್ಠ ಫೈಟರ್ ಜೆಟ್‌ಗಳನ್ನು ಇರಾನ್ ಹೊಡೆದುರುಳಿಸಿದ್ದು ಹೇಗೆ? ಇಲ್ಲಿದೆ ಸ್ಫೋಟಕ ವಿಚಾರ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಸೇನೆಯನ್ನು "ಸಂಪೂರ್ಣವಾಗಿ ನಾಶ" ಮಾಡಿದ್ದೇವೆ ಎಂದು ಪ್ರತಿಪಾದಿಸಿದರೂ, ಅಮೆರಿಕದ ಬಲಿಷ್ಠವಾದ ಎಫ್-35 ಮತ್ತು ಎಫ್ 15 ಅನ್ನು ಹೊಡೆದುರುಳಿಸಿರುವುದು ಇಸ್ಲಾಮಿಕ್ ಗಣರಾಜ್ಯದ ಪ್ರತಿದಾಳಿ ಸಾಮರ್ಥ್ಯವನ್ನು ತೋರಿಸುತ್ತದೆ.
 How Iran Downed 2 American Fighter Jets
ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ ಇರಾನ್
Updated on

ನವದೆಹಲಿ: ತನ್ನ ದೇಶದ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕ ಎರಡು ಬಲಿಷ್ಠ ಯುದ್ಧ ವಿಮಾನಗಳನ್ನು ಇರಾನ್ ಹೊಡೆದುರುಳಿಸಿದ್ದು, ಇದು ಅತ್ಯಂತ ಅಪರೂಪದ ದಾಳಿಯಾಗಿದೆ ಮತ್ತು ಕಳೆದ 20 ವರ್ಷಗಳಲ್ಲೇ ಇಂತಹ ದಾಳಿ ನಡೆದಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಸೇನೆಯನ್ನು "ಸಂಪೂರ್ಣವಾಗಿ ನಾಶ" ಮಾಡಿದ್ದೇವೆ ಎಂದು ಪ್ರತಿಪಾದಿಸಿದರೂ, ಅಮೆರಿಕದ ಬಲಿಷ್ಠವಾದ ಎಫ್-35 ಮತ್ತು ಎಫ್ 15 ಅನ್ನು ಹೊಡೆದುರುಳಿಸಿರುವುದು ಇಸ್ಲಾಮಿಕ್ ಗಣರಾಜ್ಯದ ಪ್ರತಿದಾಳಿ ಸಾಮರ್ಥ್ಯವನ್ನು ತೋರಿಸುತ್ತದೆ.

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ ಐದು ವಾರಗಳ ನಂತರ ಈ ದಾಳಿಗಳು ನಡೆದಿವೆ. ಈ ವಾರದ ಆರಂಭದಲ್ಲಿ ಟ್ರಂಪ್, ಟೆಹ್ರಾನ್‌ನ "ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ನಾಶಪಡಿಸಲಾಗಿದೆ" ಎಂದು ಹೇಳಿದ್ದರು.

ಇದರ ಬೆನಲ್ಲೇ ಇರಾನ್ ಶುಕ್ರವಾರ ಯುಎಸ್ ಎಫ್ 15-ಇ ಸ್ಟ್ರೈಕ್ ಈಗಲ್ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದೆ. ಇರಾನ್‌ನ ತಸ್ನೀಮ್ ಸುದ್ದಿ ಸಂಸ್ಥೆ, ಅಮೆರಿಕನ್ ಜೆಟ್ ಅವಶೇಷಗಳೆಂದು ಹೇಳಲಾದ ಚಿತ್ರಗಳನ್ನು ಪ್ರಕಟಿಸಿ, ಪೈಲಟ್ ಬದುಕಿರುವ ಸಾಧ್ಯತೆ ಕಡಿಮೆ ಎಂದು ವರದಿ ಮಾಡಿದೆ.

ಒಂದು ತಿಂಗಳಿಗೂ ಹೆಚ್ಚು ಕಾಲ ಅಮೆರಿಕ-ಇಸ್ರೇಲ್ ಜಂಟಿಯಾಗಿ ವೈಮಾನಿಕ ದಾಳಿಗಳನ್ನು ನಡೆಸಿದ ನಂತರವೂ, ದುರ್ಬಲಗೊಳ್ಳದ ಇರಾನಿನ ಸೇನೆಯು ಇನ್ನೂ ಹಠಮಾರಿ ವೈರಿಯಾಗಿಯೇ ಉಳಿದಿದೆ.

ವಿಮಾನದ ಅವಶೇಷ
ವಿಮಾನದ ಅವಶೇಷ

ಇರಾನ್, ಅಮೆರಿಕ ಜೆಟ್‌ಗಳನ್ನು ಹೊಡೆದುರುಳಿಸಿದ್ದು ಹೇಗೆ?

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಿಡುಗಡೆ ಮಾಡಿದ ವಿಡಿಯೋ ಪ್ರಕಾರ, ಅಮೆರಿಕ ಫೈಟರ್ ಜೆಟ್‌ಗಳನ್ನು ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳಿಂದ ಹೊಡೆದಿರುವುದನ್ನು ತೋರಿಸತ್ತದೆ.

ಇರಾನಿನ ಸರ್ಕಾರಿ ಮಾಧ್ಯಮ ಬಿಡುಗಡೆ ಮಾಡಿದ ಚಿತ್ರಗಳು ಎಲೆಕ್ಟ್ರೋ-ಆಪ್ಟಿಕಲ್/ಇನ್‌ಫ್ರಾರೆಡ್ (EO/IR) ಟ್ರ್ಯಾಕಿಂಗ್ ವ್ಯವಸ್ಥೆಯ ವಿಶಿಷ್ಟವಾದ ಹೈ-ಕಾಂಟ್ರಾಸ್ಟ್ ಥರ್ಮಲ್ ಚಿತ್ರಗಳನ್ನು ತೋರಿಸಿದೆ.

ಇನ್ನೂ ಆಪರೇಷನ್ ಟ್ರೂ ಪ್ರಾಮಿಸ್ ಭಾಗವಾಗಿ ಇರಾನ್‌ ಇಂದೂ ಸಹ ಪ್ರತಿದಾಳಿ ಆರಂಭಿಸಿ, ಅಮೆರಿಕದ ಅನೇಕ ಜೆಟ್‌ಗಳನ್ನ ಉಡೀಸ್‌ ಮಾಡಿದೆ. ಮೊದಲ ದಿನ ಅಮೆರಿಕದ ಪ್ರಮುಖ ಎಫ್-35 ಸ್ಟೆಲ್ತ್ ಫೈಟರ್ ಜೆಟ್, ಎಫ್-15ಇ ಜೆಟ್, ಯುಹೆಚ್ 60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಹಾಗೂ `ಯುದ್ಧದೊರೆ’ ಖ್ಯಾತಿಯ ಹೆಚ್‌ಸಿ 130ಜೆ ವಿಮಾನವನ್ನು ಹೊಡೆದಿದ್ದೇವೆ. ಎಫ್-15ಇ ಜೆಟ್ ಹೊಡೆದಾಗ ಪೈಲಟ್ ಹೊರಜಿಗಿದಿದ್ದು, ಸೆರೆ ಹಿಡಿದಿದ್ದೇವೆ ಅಂತ ಇರಾನ್ ಹೇಳಿದೆ.

 How Iran Downed 2 American Fighter Jets
ಆತಂಕ ಸೃಷ್ಟಿಸಿದ ಇರಾನ್ ನಡೆ; ಹಾರ್ಮುಜ್ ನಂತರ, ಜಾಗತಿಕ ಆರ್ಥಿಕತೆಯ ಜೀವನಾಡಿ 'ಬಾಬ್ ಅಲ್-ಮಂಡೇಬ್' ಜಲಸಂಧಿ ಬಂದ್ ಮಾಡುವ ಸುಳಿವು!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com