ಪ್ರಧಾನ ಮಂತ್ರಿ ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್  
ವಿದೇಶ

ಭಾರತ, ಚೀನಾಗೆ ನಿರಾಳ: ರಷ್ಯಾ ತೈಲ ಆಮದು ಸುಂಕ ಶೇ.100ಕ್ಕೆ ಇಳಿಸಿದ ಅಮೆರಿಕ, ಮಸೂದೆ ಅಂಗೀಕಾರಕ್ಕೆ ಉತ್ತಮ ಅವಕಾಶವಿದೆ ಎಂದ Donald Trump

ಹಿಂದಿನ ಪ್ರಸ್ತಾವನೆಯಂತೆ ಎಲ್ಲ ದೇಶಗಳ ಮೇಲೆ ಏಕರೂಪವಾಗಿ ಶೇಕಡಾ 500ರಷ್ಟು ಸುಂಕ ವಿಧಿಸುವ ಬದಲು, ತಿದ್ದುಪಡಿ ಮಸೂದೆಯಲ್ಲಿ ಗರಿಷ್ಠ ಶೇಕಡಾ 100ರಷ್ಟು ಸುಂಕವನ್ನು ರಷ್ಯಾದ ತೈಲ ಮತ್ತು ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಖರೀದಿಸುವ ಐದು ದೇಶಗಳಿಗೆ ಮಾತ್ರ ಅನ್ವಯಿಸುವಂತೆ ಮಾಡಲಾಗಿದೆ.

ಅಮೆರಿಕದ ಸೆನೆಟರ್‌ಗಳು ರಷ್ಯಾ ನಿರ್ಬಂಧ ಮಸೂದೆಯಲ್ಲಿ ಮಹತ್ವದ ತಿದ್ದುಪಡಿ ಮಾಡಿದ್ದು, ರಷ್ಯಾದಿಂದ ಇಂಧನ ಖರೀದಿಸುವ ದೇಶಗಳ ಮೇಲೆ ವಿಧಿಸಲು ಪ್ರಸ್ತಾಪಿಸಿದ್ದ ಶೇಕಡಾ 500 ಸುಂಕವನ್ನು ಶೇಕಡಾ 100ಕ್ಕೆ ಇಳಿಸಿದ್ದಾರೆ. ಈ ಬದಲಾವಣೆಯಿಂದ ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದ ಇಂಧನದ ಪ್ರಮುಖ ಆಮದುದಾರ ರಾಷ್ಟ್ರಗಳಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಗುವ ಸಾಧ್ಯತೆ ಇದೆ.

ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಶಾಸಕರ ಬೆಂಬಲ ಪಡೆದಿರುವ ಈ ಮಸೂದೆ, ರಷ್ಯಾದ ಆರ್ಥಿಕತೆಯ ಮೇಲೆ ಒತ್ತಡ ಹೇರಿ, ತೈಲ ಮತ್ತು ಅನಿಲ ರಫ್ತಿನಿಂದ ರಷ್ಯಾಗೆ ಸಿಗುವ ಆದಾಯವನ್ನು ಕಡಿಮೆ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸುವ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶ ಹೊಂದಿದೆ ಎಂದು ಅಮೆರಿಕ ಹೇಳಿದೆ.

ಹಿಂದಿನ ಪ್ರಸ್ತಾವನೆಯಂತೆ ಎಲ್ಲ ದೇಶಗಳ ಮೇಲೆ ಏಕರೂಪವಾಗಿ ಶೇಕಡಾ 500ರಷ್ಟು ಸುಂಕ ವಿಧಿಸುವ ಬದಲು, ತಿದ್ದುಪಡಿ ಮಸೂದೆಯಲ್ಲಿ ಗರಿಷ್ಠ ಶೇಕಡಾ 100ರಷ್ಟು ಸುಂಕವನ್ನು ರಷ್ಯಾದ ತೈಲ ಮತ್ತು ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಖರೀದಿಸುವ ಐದು ದೇಶಗಳಿಗೆ ಮಾತ್ರ ಅನ್ವಯಿಸುವಂತೆ ಮಾಡಲಾಗಿದೆ.

ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಆಮದುದಾರ ರಾಷ್ಟ್ರಗಳಲ್ಲಿ ಭಾರತ, ಚೀನಾ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜರ್‌ಬೈಜಾನ್ ಸೇರಿವೆ. ನೈಸರ್ಗಿಕ ಅನಿಲದ ಪ್ರಮುಖ ಗ್ರಾಹಕರಲ್ಲಿ ಚೀನಾ, ಫ್ರಾನ್ಸ್, ಜಪಾನ್, ಹಂಗೇರಿ ಮತ್ತು ಬೆಲ್ಜಿಯಂ ಸೇರಿವೆ.

ಇದೇ ವೇಳೆ, ರಷ್ಯಾದ ನೈಸರ್ಗಿಕ ಅನಿಲ ರಫ್ತಿನ ಶೇಕಡಾ 15ಕ್ಕಿಂತ ಕಡಿಮೆ ಪ್ರಮಾಣವನ್ನು ಮಾತ್ರ ಖರೀದಿಸುವ ಮತ್ತು ಆಮದನ್ನು ಇನ್ನಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ದೇಶಗಳಿಗೆ ವಿನಾಯಿತಿ ನೀಡುವ ಅವಕಾಶವನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ. ಈ ನಿಯಮ ಜಾರಿಯಾದರೆ ಜಪಾನ್, ಫ್ರಾನ್ಸ್, ಹಂಗೇರಿ ಮತ್ತು ಬೆಲ್ಜಿಯಂ ಮುಂತಾದ ದೇಶಗಳು ವಿನಾಯಿತಿಗೆ ಅರ್ಹವಾಗಬಹುದು.

ಸುಂಕದ ಜೊತೆಗೆ, ಪಾಶ್ಚಾತ್ಯ ರಾಷ್ಟ್ರಗಳ ಹಡಗು ಮತ್ತು ವಿಮಾ ವ್ಯವಸ್ಥೆಗಳನ್ನು ತಪ್ಪಿಸಿ ರಷ್ಯಾದ ಕಚ್ಚಾ ತೈಲ ಸಾಗಿಸಲು ಬಳಸಲಾಗುತ್ತಿರುವ 'ಶ್ಯಾಡೋ ಫ್ಲೀಟ್' ತೈಲ ಟ್ಯಾಂಕರ್‌ಗಳ ಮೇಲೂ ಕಠಿಣ ನಿರ್ಬಂಧ ವಿಧಿಸುವ ಪ್ರಸ್ತಾಪ ಮಸೂದೆಯಲ್ಲಿದೆ.

ಇದಲ್ಲದೆ, ರಷ್ಯಾದ ಕೇಂದ್ರ ಬ್ಯಾಂಕ್, ಇತರೆ ಹಣಕಾಸು ಸಂಸ್ಥೆಗಳು ಹಾಗೂ ಯಮಾಲ್ ಎಲ್‌ಎನ್‌ಜಿ (Yamal LNG) ಮತ್ತು ಆರ್ಕ್ಟಿಕ್ ಎಲ್‌ಎನ್‌ಜಿ (Arctic LNG) ಸೇರಿದಂತೆ ಪ್ರಮುಖ ಇಂಧನ ಯೋಜನೆಗಳ ಮೇಲೂ ನಿರ್ಬಂಧ ವಿಸ್ತರಿಸಲು ಮಸೂದೆ ಸೂಚಿಸಿದೆ.

ಮೂಲ ಮಸೂದೆಯಲ್ಲಿದ್ದ ಶೇಕಡಾ 500ರಷ್ಟು ಸುಂಕ ಅಮೆರಿಕದ ಮಿತ್ರ ರಾಷ್ಟ್ರಗಳಿಗೂ ಹೊಡೆತ ನೀಡಬಹುದು ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ತಿದ್ದುಪಡಿಗಳನ್ನು ಮಾಡಲಾಗಿದೆ. ರಷ್ಯಾದಿಂದ ಇಂಧನ ಖರೀದಿಸುವ ದೇಶಗಳ ವಿರುದ್ಧ ಕಠಿಣ ಕ್ರಮಕ್ಕೆ ಕೆಲವರು ಒತ್ತಾಯಿಸಿದ್ದರೆ, ಶೇಕಡಾ 500ರಷ್ಟು ಸುಂಕ ಅತಿಯಾದ ಕ್ರಮ ಎಂದು ಹಲವು ಶಾಸಕರು ಅಭಿಪ್ರಾಯಪಟ್ಟಿದ್ದರು.

ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಸೆನೆಟ್ ಸಹಾಯಕರೊಬ್ಬರು, ತಿದ್ದುಪಡಿ ಮಸೂದೆಗೆ ವ್ಯಾಪಕ ರಾಜಕೀಯ ಬೆಂಬಲ ದೊರೆತಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಎಲ್ಲರ ಒಪ್ಪಿಗೆ ಪಡೆದಿರುವ ಏಕೈಕ ಮಸೂದೆ ಇದಾಗಿದೆ. ರಷ್ಯಾದ ಮೇಲೆ ನಾವು ಬಯಸುವ ರೀತಿಯಲ್ಲಿ ಒತ್ತಡ ಹೇರುವ ಸಾಧ್ಯತೆ ಇರುವ ಏಕೈಕ ಪ್ರಸ್ತಾಪವೂ ಇದೇ ಆಗಿದೆ ಎಂದು ಅವರು ರಾಯಿಟರ್ಸ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಿದ್ದುಪಡಿ ಮಸೂದೆಯಲ್ಲಿ, ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯವೆಂದು ಭಾವಿಸಿದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವ ಅಧಿಕಾರವನ್ನೂ ನೀಡಲಾಗಿದೆ.

ಈ ಮಸೂದೆಯನ್ನು ಆರಂಭದಲ್ಲಿ ದಿವಂಗತ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಮಂಡಿಸಿದ್ದರು. ಕಳೆದ ವಾರ ನಿಧನರಾಗುವ ಮೊದಲು ಗ್ರಹಾಂ ಅವರು, ಮಸೂದೆಯನ್ನು ಮುಂದಕ್ಕೆ ತೆಗೆದುಕೊಳ್ಳಲು ಟ್ರಂಪ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದರು.

ಸೆನೆಟ್ ಮೂಲಗಳ ಪ್ರಕಾರ, ಈಗಾಗಲೇ 26 ಸೆನೆಟರ್‌ಗಳ ಬೆಂಬಲ ಮಸೂದೆಗೆ ಲಭ್ಯವಿದ್ದು, ಇನ್ನಷ್ಟು ಸದಸ್ಯರು ಬೆಂಬಲಿಸುವ ನಿರೀಕ್ಷೆಯಿದೆ.

ಬ್ಲೂಮೆಂಥಾಲ್ ಅವರು ಈ ಮಸೂದೆಗೆ ಲಿಂಡ್ಸೆ ಗ್ರಹಾಂ ಅವರ ಹೆಸರಿಡಬೇಕು ಎಂದು ಹೇಳಿದ್ದು, "ಇದು ಅವರ ಪರಂಪರೆಯ ಒಂದು ಭಾಗವಾಗಲಿದೆ" ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಉಲ್ಲೇಖಿಸಿದೆ.

ಸೆನೆಟ್‌ನ ಡೆಮಾಕ್ರಟಿಕ್ ನಾಯಕ ಚಕ್ ಶೂಮರ್, ಲಿಂಡ್ಸೆಯ ಗೌರವಾರ್ಥವಾಗಿ ಮಸೂದೆಯನ್ನು ಶೀಘ್ರದಲ್ಲಿ ಅಂಗೀಕರಿಸಬೇಕು ಎಂದು ಸದಸ್ಯರಿಗೆ ಕರೆ ನೀಡಿದ್ದು, ಇದು ಉಕ್ರೇನ್‌ಗೆ ನೆರವಾಗಲಿದೆ ಹಾಗೂ ಭಾರೀ ಬೆಂಬಲ ಪಡೆಯಲಿದೆ ಎಂದು ಹೇಳಿದ್ದಾರೆ.

ಸೆನೆಟ್ ಬಹುಮತ ನಾಯಕ ಜಾನ್ ಥೂನ್ ಕೂಡ ಮಸೂದೆ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿದ್ದು, ಈ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾದರೆ ಅದು ಲಿಂಡ್ಸೆ ಗ್ರಹಾಂ ಅವರಿಗೆ ಅತ್ಯಂತ ದೊಡ್ಡ ಪರಂಪರೆಯಾಗಲಿದೆ ಎಂದಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಸೂದೆಗೆ ಬೆಂಬಲ ಸೂಚಿಸಿದ್ದು, ಇದು ಲಿಂಡ್ಸೆಯ ಗೌರವಾರ್ಥ. ಇದು ಅವರ ಕನಸಿನ ಯೋಜನೆಯಾಗಿತ್ತು. ಅವರು ಇದನ್ನು ಎಷ್ಟು ಬಯಸುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತು. ಇದು ಅಂಗೀಕಾರವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕದೊಂದಿಗಿನ ಒಪ್ಪಂದಕ್ಕೆ Good Bye; 'Hormuz ಮೇಲಿನ ಸಂಪೂರ್ಣ ನಿಯಂತ್ರಣ ನಮ್ಮದೇ' ಎಂದ ಇರಾನ್

ಒಪ್ಪಂದಕ್ಕೆ ಬಾರದಿದದರೆ ವಿದ್ಯುತ್ ಸ್ಥಾವರ-ಸೇತುವೆಗಳೇ ಗುರಿ, ಸಾಕು ಎನ್ನುವವರೆಗೂ ದಾಳಿ: Iranಗೆ Trump ಖಡಕ್ ಎಚ್ಚರಿಕೆ

ಸಚಿವ ಸಂಪುಟ ಕಸರತ್ತು: ರಾಹುಲ್ ಭೇಟಿಗೆ ಡಿಕೆಶಿ-ಸಿದ್ದು ದೆಹಲಿ ಪ್ರಯಾಣ, ಸಚಿವಾಕಾಂಕ್ಷಿಗಳಿಗಿದು ನಿರ್ಣಾಯಕ ವಾರ..!

ರಾಹುಲ್ ಗಾಂಧಿ 'ಭಾರತ್ ಜೋಡೋ ಯಾತ್ರೆ' ಸ್ಮರಣಾರ್ಥ ಹೊಸ ಯೋಜನೆ: 'ಭಾರತ್ ಜೋಡೋ ಯುವ ಸಂಘ' ಸ್ಥಾಪನೆಗೆ ಸರ್ಕಾರ ಗ್ರೀನ್ ಸಿಗ್ನಲ್; ಪ್ರತಿ ಸಂಘಕ್ಕೆ 10 ಲಕ್ಷ ರೂ. ಅನುದಾನ..!

ಏಳು ತಲೆಮಾರುಗಳ ಪಿತೃಗಳಿಗೆ ಮೋಕ್ಷ: ಗಯಾ ಶ್ರಾದ್ಧ ಮಹಿಮೆ ಏನು; ಗಯಾದಲ್ಲೇ ಏಕೆ ಪಿಂಡ ಪ್ರಧಾನ ಮಾಡಬೇಕು?