ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ ಎಲ್ಲಾ ಪ್ರಯಾಣಿಕ ಮತ್ತು ವಾಣಿಜ್ಯ ಬಳಕೆ ವಾಹನಗಳ ಬೆಲೆಯನ್ನು ಶೇ 2ರಷ್ಟು ಏರಿಸುವುದಾಗಿ ಘೋಷಿಸಿದೆ. ಬಿಡಿಭಾಗಗಳ ವೆಚ್ಚ ಹಾಗೂ ಸಾಗಣೆ ವೆಚ್ಚದಲ್ಲಿ ವಿಪರೀತ ಹೆಚ್ಚಳವಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಎಂದಿರುವ ಕಂಪನಿ, ಪರಿಷ್ಕೃತ ಬೆಲೆಗಳು 2014ರ ಜನವರಿ1ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದೆ.