ಕ್ರಿಸ್ಮಸ್ಗೆ ಹೊಸ ಕೇಕ್

ಬೆಂಗಳೂರು: ಕ್ರಿಸ್ಮಸ್ ಹಬ್ಬವನ್ನು ಇನ್ನಷ್ಟು ವೈವಿಧ್ಯಮಯವಾಗಿಸುವ ನಿಟ್ಟಿನಲ್ಲಿ ಫ್ರೆಂಚ್ ಲೋಫ್ ಸಂಸ್ಥೆ ಹೊಸ ಕೊಡುಗೆ ನೀಡಿದೆ. ತಮ್ಮ ಬೇಕರಿ ಎಲ್ಲಾ ಮಳಿಗೆಗಳಲ್ಲಿ ಹಲವು ವಿಶೇಷತೆಗಳನ್ನೊಳಗಂಡ ಕ್ರಿಸ್ಮಸ್ ಕೊಡುಗೆಯನ್ನು ಸಜ್ಜುಗೊಳಿಸಿದೆ. ಪಾಮ್ಕೇಕ್, ಸ್ಟೋಲನ್ ಬ್ರೆಡ್, ಎಗ್ಲೆಸ್ ಪಾಮ್ಕೇಕ್, ಚೆರ್ರಿ ಕಪ್ಕೇಕ್, ಪಾಮ್ ಫುಡ್ಡಿಂಗ್, ಆಪಲ್ ಕ್ರಂಬಲ್ ಕೇಕ್, ಮಾರ್ಜಿಪನ್ ಮತ್ತಿತರರು ತಿನಿಸುಗಳ ಜೊತೆಗೆ, ಚಾಕಲೇಟ್ ಕ್ರಿಸ್ಮಸ್ ಟ್ರೀ, ಕ್ರಿಸ್ಮಸ್ ಬೆಲ್, ಸ್ನೋಮೆನ್ ಹಾಗೂ ಹಲವು ಕ್ರಿಸ್ಮಸ್ ಚಾಕಲೇಟ್ ಸಂಗ್ರಹಗಳನ್ನು ಇಲ್ಲಿ ಪಡೆಯಬಹುದಾಗಿದೆ. ರು. 80 ಮೊತ್ತದಿಂದ ಆರಂಭವಾಗುವ ಕ್ರಿಸ್ಮಸ್ ಟ್ರೀಟ್ ಹೊಸ ವರ್ಷದವರೆಗೂ ಲಭ್ಯವಿದೆ.
ಕ್ರಿಸ್ಮಸ್ ಅನ್ನು ವಿಭಿನ್ನವಾಗಿ ಸಂಭ್ರಮಿಸ ಬಯಸುವರು ಇಲ್ಲಿಗೆ ಭೇಟಿ ನೀಡಬಹುದು. ವಿವರಗಳಿಗೆ -9663454545.
ಡೈಮ್ಲರ್ ಸಂಸ್ಥೆ ಘಟಕ ಆರಂಭ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಡೈಮ್ಲರ್ ಸಂಸ್ಥೆ ನಗರದ ನೂತನ ಐಟಿ ಶೇರ್ಡ್ ಸರ್ವಿಸ್ ಸೆಚಿಟರ್ ಆರಂಭಿಸಿದೆ. ಈ ಮೂಲಕ ನಗರದ ಸುಮಾರು 800 ಐಟಿ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದು ಐಟಿ ತಂತ್ರಗಳ ಮೂಲಕ ಜಾಗತಿಕ ಅಸ್ತಿತ್ವ ವಿಸ್ತರಿಸುವ ಜಾಗತಿಕ ಮಟ್ಟದಲ್ಲಿ ಪ್ರದರ್ಶನ ಸುಧಾರಿಸುವ ಹಾಗೂ ನೈಪುಣ್ಯತೆಗೆ ಹೆಚ್ಚಿನ ಮಹತ್ವ ನೀಡುವ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮಾನವ ಸಂಪನ್ಮೂಲ ಹಾಗೂ ಐಟಿ ವಿಭಾಗದ ಮುಖ್ಯಸ್ಥ ವಿಲ್ಫರ್ಡ್ ಪೊರ್ತ್, ಈ ನೂತನ ಕೇಂದ್ರ ಸ್ಥಾಪಿಸುವ ಮೂಲಕ ಸಂಸ್ಥೆ ಜಾಗತಿಕ ಐಟಿ ನಿಯಮಗಳ ಪ್ರಕಾರ, ವಿಶ್ವಾದ್ಯಂತ ಸಂಸ್ಥೆಯ ಐಟಿ ಬೆಳವಣಿಗೆಯ ಕಾರ್ಯಕ್ರಮ ವಿಸ್ತರಿಸುವ ಜವಾಬ್ದಾರಿ ಹೊತ್ತಿದೆ ಎಂದರು.
ಕ್ಯಾಶ್ ಆ್ಯಂಡ್ ಕ್ಯಾರಿ ಸ್ಟೋರ್ಗೆ ಚಾಲನೆ
ಕೇರ್ಫೋರ್ ಸಂಸ್ಥೆ ನಗರದಲ್ಲಿ ಪ್ರಥಮ ಕ್ಯಾಶ್ ಆ್ಯಂಡ್ ಕ್ಯಾರಿ ಸ್ಟೋರ್ಗೆ ಚಾಲನೆ ನೀಡಿದೆ. ಇದು ಸಂಸ್ಥೆಯ ದೇಶದಲ್ಲಿನ ಐದನೇ ಮಳಿಗೆಯಾಗಿದ್ದು, 'ಕೇರ್ಫೋರ್ ಹೋಲ್ಸೇಲ್ ಕ್ಯಾಷ್ ಅಂಡ್ ಕ್ಯಾರಿ' ಎಂಬ ಹೆಸರು ನೀಡಲಾಗಿದೆ. ಈ ನೂತನ ಮಳಿಗೆ ನಗರದ ಪಶ್ಚಿಮದಲ್ಲಿನ ಬಿನ್ನಿ ಮಿಲ್ಸ್ ಸಮೀಪದಲ್ಲಿದೆ. ಸುಮಾರು 6,400 ಚದರ ಅಡಿ ವಿಸ್ತೀರ್ಣ ಹೊಂದಿರುವ ಮಳಿಗೆಯಲ್ಲಿ ವ್ಯವಹಾರಿಕ, ಸಾಂಸ್ಥಿಕ, ರೆಸ್ಟೋರೆಂಟ್ ಹಾಗೂ ಸ್ಥಳೀಯ ರೀಟೆಲ್ ಮಳಿಗೆಗಳ ಆಹಾರ ಮತ್ತು ಆಹಾರೇತರ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು 10 ಸಾವಿರಕ್ಕೂ ಹೆಚ್ಚಿನ ವಿಭಾಗಗಳನ್ನು ಸ್ಥಾಪಿಸಲಾಗಿದೆ. ಇದರಿಂದ 170ಕ್ಕೂ ಹೆಚ್ಚು ಸ್ಥಳೀಯರಿಗೆ ಉದ್ಯೋಗ ದೊರೆತಿದೆ. ಬೆಂಗಳೂರು ಸೇರಿದಂತೆ ಸಂಸ್ಥೆಯು ದೆಹಲಿ, ಜೈಪುರ, ಮೀರತ್ ಹಾಗೂ ಆಗ್ರದಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ.
ಟಿಕೆಟ್ಗೂಸ್ ಡಾಟ್ ಕಾಂನಿಂದ ವಿಶೇಷ ಸೌಲಭ್ಯ
ಆನ್ಲೈನ್ ಬಸ್ ಟಿಕೆಟ್ ಕಾಯ್ದಿರಿಸುವ ಟಿಕೆಟ್ಗೂಸ್ ಡಾಟ್ ಕಾಂ ಇದೀಗ ಪ್ರಯಾಣಿಕರಿಗೆ ವಿಶೇಷ ಸೇವಾ ಸೌಲಭ್ಯ ಪ್ರಕಟಿಸಿದೆ. ಇದಕ್ಕಾಗಿ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಜೊತೆಗೂಡಿ ವಿಮಾ ಪಾಲಿಸಿ ಪ್ರಕಟಿಸಿದೆ. ಈ ಪಾಲಿಸಿಯನ್ವಯ ಯಾವುದೇ ತೆರನಾದ ಸಾಂದರ್ಭಿಕ ನಷ್ಟ, ಅಪಘಾತ ಅಥವಾ ಇತರೆ ತುರ್ತು ಚಿಕಿತ್ಸಾ ವೈದ್ಯಕೀಯ ಸೌಲಭ್ಯ ಮತ್ತಿತರರ ವೆಚ್ಚಗಳನ್ನು ಕೂಡ ಒಳಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ಈ ಸೌಲಭ್ಯ ವಿಮೆ ಮಾಡಿಸಿದ ಪ್ರಯಾಣಿಕ ಹಾಗೂ ಅವರ ಕುಟುಂಬ ವರ್ಗದವರಿಗೆ ದೊರೆಯುತ್ತದೆ. ಅಪಘಾತ ಸಂದರ್ಭದಲ್ಲಿ ಪ್ರತಿ ಪ್ರಯಾಣಿಕರಿಗೆ ವೈಯಕ್ತಿಕ ವೆಚ್ಚವಾಗಿ ರು. 2 ಲಕ್ಷ ವಿಮಾ ಪಾಲಿಸಿ ಇದೆ. ತಮ್ಮ ಬ್ಯಾಗ್ ಕಳೆದುಕೊಂಡಲ್ಲಿ ಇಲ್ಲವೇ ಯಾವುದೇ ನಷ್ಟ ಉಂಟಾದಲ್ಲಿ ರು. 15 ಸಾವಿರ ವಿಮೆ ಸೌಲಭ್ಯವಿದೆ. ತುರ್ತು ಚಿಕಿತ್ಸಾ ವೈದ್ಯಕೀಯ ಸೌಲಭ್ಯಕ್ಕಾಗಿ ರು. 10 ಸಾವಿರ ಹಾಗೂ ಅಗತ್ಯ ಚಿಕಿತ್ಸಾ ಸೌಲಭ್ಯಕ್ಕಾಗಿ ರು. 5000 ವಿಮೆ ಕೂಡ ಇದೆ. ಇದು ಐಚ್ಚಿಕ ವಿಮಾ ಸೇವಾ ಸೌಲಭ್ಯವಾದ್ದು ಪ್ರತಿ ಬಾರಿ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರು ರು. 20 ಹೆಚ್ಚುವರಿ ಹಣ ನೀಡಿದಲ್ಲಿ ಈ ಪಾಲಿಸಿ ವ್ಯಾಪ್ತಿಗೆ ಬರಲಿದ್ದಾರೆ. ಇದು ಪ್ರಯಾಣಿಕರ ಸುಖಕರ ಹಾಗೂ ಪ್ರಯಾಣದ ರಕ್ಷಣೆಯ ದೃಷ್ಟಿಯಿಂದ ಇದೊಂದು ಸಹಕಾರಿ ಮಾರ್ಗ ಎಂದು ಸಂಸ್ಥೆಯ ಸಿಬ್ಬಂದಿ ವಿವರಿಸಿದ್ದಾರೆ. ಮಾಹಿತಿಗೆ-9449834080.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


