ಮಾ.3ಕ್ಕೆ ಐರ್ಲೆಂಡ್ ಹಬ್ಬ
ಐರ್ಲೆಂಡ್ನ ಸರ್ಕಾರಿ ಸಂಸ್ಥೆ ಎಜುಕೇಶನ್ ಐರ್ಲೆಂಡ್ ವತಿಯಿಂದ ಬೆಂಗಳೂರಿನಲ್ಲಿ ಮಾ.3ರಂದು ಐರ್ಲೆಂಡ್ ಹಬ್ಬ ನಡೆಯಲಿದೆ. ಭಾರತೀಯ ವಿದ್ಯಾರ್ಥಿಗಳನ್ನು ಐರ್ಲೆಂಡ್ನ ಶಿಕ್ಷಣ ಸಂಸ್ಥೆಗಳಿಗೆ ಆಕರ್ಷಿಸುವ ನಿಟ್ಟಿನಲ್ಲಿ ಅಲ್ಲಿಯ ಸರ್ಕಾರ ದೇಶದ ಪ್ರಮುಖ ನಗರಗಳಲ್ಲಿ ಐರ್ಲೆಂಡ್ ಹಬ್ಬ ಆಚರಿಸುತ್ತಿದೆ. ಅಲ್ಲಿಯ ವಿಶ್ವವಿದ್ಯಾಲಯ, ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಈ ಹಬ್ಬದಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿವೇತನ, ವೀಸಾ, ವಸತಿ, ಉದ್ಯೋಗ ಭದ್ರತೆ ಹಾಗೂ ಇತರ ವಿಚಾರಗಳ ಕುರಿತಂತೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ. ಮಾ.3ರಂದು ನಗರದ ದಿ ಓಬೆರಾಯ್ ಹೋಟೆಲ್ನಲ್ಲಿ ಬೆಳಗ್ಗೆ 9ರಿಂದ ಈ ಕಾರ್ಯಕ್ರಮ ನಡೆಯಲಿದೆ.
ಈಸಿಕ್ಲಿಕ್- ಆನ್ಲೈನ್ ಪೇಮೆಂಟ್
ಅಮೆರಿಕನ್ ಎಕ್ಸ್ಪ್ರೆಸ್ ಸಂಸ್ಥೆಯು ಆನ್ಲೈನ್ ಶಾಪಿಂಗ್ನ್ನು ಸರಳೀಕರಿಸಲು ಮುಂದಾಗಿದ್ದು, ಈಸಿಕ್ಲಿಕ್ ಎಂಬ ನೂತನ ಸೇವೆಯನ್ನು ಪ್ರಾರಂಭಿಸಿದೆ. ಕ್ರೆಡಿಟ್ ಕಾರ್ಡ್ ವಿವರ ನೀಡಿ ಹಣ ಪಾವತಿಸುವ ಬದಲಿಗೆ ಒಂದು ಯೂಸರ್ ಐಡಿಯ ಮೂಲಕ ಪಾವತಿಸಬಹುದಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಸರಳೀಕೃತ ವ್ಯವಸ್ಥೆಯನ್ನು ಅಮೆರಿಕನ್ ಎಕ್ಸ್ಪ್ರೆಸ್ ಪ್ರಾರಂಭಿಸಿದೆ. ಈಸಿಕ್ಲಿಕ್ನಲ್ಲಿ ಗ್ರಾಹಕರು ಒಮ್ಮೆ ನೋಂದಣಿ ಮಾಡಿಸಿಕೊಂಡು ಪ್ರತ್ಯೇಕ ಐಡಿ ಸೃಷ್ಟಿಸಿಕೊಳ್ಳಬೇಕು. ಬಳಿಕ ಈ ಐಡಿ ಮೂಲಕ ಎಲ್ಲ ರೀತಿಯ ಆನ್ಲೈನ್ ವ್ಯವಹಾರ ನಡೆಸಬಹುದಿದೆ. ಆನ್ಲೈನ್ ಕ್ರೆಡಿಟ್ ಕಾರ್ಡ್ ಹಣ ಪಾವತಿಗಿಂತಲೂ ಇದು ಸುರಕ್ಷಿತವಾಗಿದ್ದು, ಬಳಕೆದಾರರಿಗೆ ಆನ್ಲೈನ್ ವ್ಯವಹಾರ ಸುಲಭವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂಜಯ್ ರಿಶಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅಲಹಾಬಾದ್ ಬ್ಯಾಂಕ್ ಮೂಲಕ ಹೂಡಿಕೆ ಸೌಲಭ್ಯ
ಅಲಹಾಬಾದ್ ಬ್ಯಾಂಕ್ನ ಶಾಖೆಗಳ ಮೂಲಕ ಬಿಡಿ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಲು ಪಿಯರ್ಲೆಸ್ ಮ್ಯೂಚುವಲ್ ಫಂಡ್ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಸೆಬಿ ಮಾರ್ಗದರ್ಶಿ ಸೂತ್ರದ ಪ್ರಕಾರ ಹೂಡಿಕೆದಾರರು ಒಂದು ಹಣಕಾಸು ವರ್ಷದಲ್ಲಿ ತಲಾ 20 ಸಾವಿರದವರೆಗೂ ಪ್ರತಿ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೇ 50 ಸಾವಿರಕ್ಕಿಂತಲೂ ಕಡಿಮೆ ಹೂಡಿಕೆಗೆ ಪ್ಯಾನ್ ಕಾರ್ಡ್ನ ಅಗತ್ಯವಿರುವುದಿಲ್ಲ. ಅರೆನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ಮ್ಯೂಚುವಲ್ ಫಂಡ್ ಹೂಡಿಕೆಗೆ ಅವಕಾಶ ಮಾಡಿಕೊಡಲು ಪಿಯರ್ಲೆಸ್ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಯ್ದ ಅಲಹಾಬಾದ್ ಬ್ಯಾಂಕ್ ಶಾಖೆಗಳಲ್ಲಿ ಹೂಡಿಕೆಗೆ ಅವಕಾಶವಿದ್ದು, ಹಂತಹಂತವಾಗಿ ದೇಶದ ಎಲ್ಲ 2500 ಶಾಖೆಗಳಿಗೂ ಸೌಲಭ್ಯ ವಿಸ್ತರಿಸಲಾಗುವುದು ಎಂದು ಪಿಯರ್ಲೆಸ್ ಸಂಸ್ಥೆ ಪ್ರಕಟಣೆ ತಿಳಿಸಿದೆ.
ಟಾಟಾ ಹೈಡ್ರಾಲಿಕ್ ಎಕ್ಸ್ಕಾವೇಟರ್ ಬಿಡುಗಡೆ
ಟಾಟಾ ಹಿಟಾಚಿ ಸಂಸ್ಥೆಯು ಝಕ್ಸಿಸ್ 220 ಎಲ್ಸಿ- ಐಜಿ ಶ್ರೇಣಿಯ ಹೈಡ್ರಾಲಿಕ್ ಎಕ್ಸ್ಕಾವೇಟರ್ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಳೆದ 1960ರಿಂದಲೂ ಕಟ್ಟಡ ನಿರ್ಮಾಣ ಸಾಧನಗಳನ್ನು ನಿರ್ಮಿಸುತ್ತಿರುವ ಸಂಸ್ಥೆಯು ಈಗ ಇದೇ ಮೊದಲ ಬಾರಿಗೆ ವಿಶ್ವ ದರ್ಜೆಯ ಹೈಡ್ರಾಲಿಕ್ ಎಕ್ಸ್ಕಾವೇಟರ್ನ್ನು ಮಾರುಕಟ್ಟೆಗೆ ತಂದಿದೆ. ಈ ಎಕ್ಸ್ಕಾವೇಟರ್ 200ಎಲ್ಸಿ ಇಸುಝು ಎಂಜಿನ್ ಹೊಂದಿದ್ದು, ಶೇ.14ರಷ್ಟು ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇದಲ್ಲದೇ ಇಂಧನ ಕ್ಷಮತೆ ಹಿಂದಿನ ಯಂತ್ರಕ್ಕಿಂತ ಶೇ.10ರಷ್ಟು ಹೆಚ್ಚಿದೆ. ಝಕ್ಸಿಸ್ ಶ್ರೇಣಿಯಲ್ಲಿ ಡಾಟಾ ಕಂಟ್ರೋಲರ್ ಮತ್ತು ಗ್ಲೋಬಲ್- ಇ ಸರ್ವೀಸ್ ಲಭ್ಯವಿದೆ. ಇದರಿಂದ ಯಂತ್ರದ ನಿರ್ವಹಣೆ ಹಾಗೂ ಗುರುತು ಪತ್ತೆಯು ಸಾಧ್ಯವಾಗಲಿದೆ ಎಂದು ಟಾಟಾ ಹಿಟಾಟಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಾರ್ಶ್ವವಾಯುಗೆ ಬೈಪಾಸ್ ಚಿಕಿತ್ಸೆ
ಮೆದುಳಿನ ಆಘಾತ ಹಾಗೂ ಪಾರ್ಶ್ವವಾಯುವಿಗೆ ನಾರಾಯಣ ಹೃದಯಾಲಯವು ತಾತ್ಕಾಲಿಕ ಎಂಡೋವ್ಯಾಸ್ಕುಲರ್ ಬೈಪಾಸ್ ಚಿಕಿತ್ಸೆ ನೀಡುತ್ತಿದೆ. ಬೆಂಗಳೂರಿನಲ್ಲೇ ದಿನವೊಂದಕ್ಕೆ 40ಕ್ಕೂ ಅಧಿಕ ಜನರಲ್ಲಿ ಪಾರ್ಶ್ವವಾಯು ಕಾಣಿಸಿಕೊಳ್ಳುತ್ತಿದೆ. ಆದರೆ ಸಾರ್ವಜನಿಕರು ಇದನ್ನು ನಿರ್ಲಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ನಾರಾಯಣ ಹೃದಯಾಲಯದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆಯಿದೆ. ಘಟನೆ ಸಂಭವಿಸಿ 6ರಿಂದ 8 ಗಂಟೆಯೊಳಗೆ ಆಸ್ಪತ್ರೆಗೆ ಕರೆತಂದರೆ ಕ್ಲಾಟ್ ಬಸ್ಟರ್ ಬರ್ಗ್ ಚಿಕಿತ್ಸೆ ಮೂಲಕ ರಕ್ತನಾಳವು ಮತ್ತೆ ತೆರೆದುಕೊಳ್ಳುವಂತೆ ಮಾಡಬಹುದು ಎಂದು ಆಸ್ಪತ್ರೆಯ ವೈದ್ಯ ವಿಕ್ರಮ್ ಹುಡೇದ್ ತಿಳಿಸಿದ್ದಾರೆ.
ಕೋಕಾ ಕೋಲಾದಿಂದ ವ್ಯಕ್ತಿತ್ವ ವಿಕಸನ ಕೇಂದ್ರ
ಹಿಂದುಸ್ತಾನ್ ಕೋಕಾ ಕೋಲಾ ಸಂಸ್ಥೆಯು ಕರ್ನಾಟಕದಲ್ಲಿ ಮೊದಲ ಬಾರಿಗೆ ವ್ಯಕ್ತಿತ್ವ ವಿಕಸನ ಕೇಂದ್ರ ಆರಂಭಿಸಿದೆ. ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಸಹಭಾಗಿತ್ವದಲ್ಲಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಈ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಗ್ರಾಮೀಣ ಯುವಕರಿಗೆ ಉದ್ಯೋಗದ ಪಾಥಮಿಕ ತರಬೇತಿ ನೀಡುವ ಉದ್ದೇಶದಿಂದ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಭವಿಷ್ಯದಲ್ಲಿ ಓಡಿಶಾ ಹಾಗೂ ಮಹಾರಾಷ್ಟ್ರದಲ್ಲೂ ವ್ಯಕ್ತಿತ್ವ ವಿಕಸನ ತರಬೇತಿ ಕೇಂದ್ರ ಪ್ರಾರಂಭಿಸಲು ಸಂಸ್ಥೆ ಉದ್ದೇಶಿಸಿದೆ.