ಫಾಸ್ಟ್ಟ್ರ್ಯಾಕ್ ರಿಯಾಯಿತಿ

ಫಾಸ್ಟ್ಟ್ರ್ಯಾಕ್ ರಿಯಾಯಿತಿ
Updated on: 

ಫಾಸ್ಟ್ಟ್ರ್ಯಾಕ್ ಮೊಟ್ಟ ಮೊದಲ ಬಾರಿಗೆ ಎಲ್ಲಾ ಫಾಸ್ಟ್ಟ್ರ್ಯಾಕ್ ಉತ್ಪನ್ನ ವರ್ಗಗಳನ್ನು ಏಕಕಾಲಕ್ಕೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಮುಂದಾಗಿದೆ. ಕಂಪನಿಯ ಕೈ ಗಡಿಯಾರಗಳು, ತಂಪು ಕನ್ನಡಕಗಳು, ಬ್ಯಾಗ್ಗಳು, ಬೆಲ್ಟ್ಗಳು ಮತ್ತು ವ್ಯಾಲೆಟ್ಗಳು ಜುಲೈ 21ರವರೆಗೆ ಶೇ. 30ರ ರಿಯಾಯಿತಿ ಬೆಲೆಯಲ್ಲಿ ಎಲ್ಲಾ ಫಾಸ್ಟ್ಟ್ರ್ಯಾಕ್ ಮಳಿಗೆಗಳಲ್ಲಿ ದೊರೆಯುತ್ತವೆ. ಆದರೆ, ಟೀಶರ್ಟ್ಗಳಿಗೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ. 625ರಿಂದ ಆರಂಭವಾಗುವ ಕೈಗಡಿಯಾರಗಳು, 555ರಿಂದ ಆರಂಭವಾಗುವ ಚೀಲಗಳು, 345ರಿಂದ ಆರಂಭವಾಗುವ ಬೆಲ್ಟ್ಗಳು ಮತ್ತು ವ್ಯಾಲೇಟ್ಗಳು ದೊರೆಯುತ್ತವೆ. ಲ್ಯಾಪ್ಟಾಪ್ ಚೀಲಗಳು 1595ಕ್ಕೆ ದೊರೆಯುತ್ತವೆ. ಈ ಕೊಡುಗೆಯು ಎಲ್ಲಾ ಫಾಸ್ಟ್ಟ್ರ್ಯಾಕ್ ಮಳಿಗೆಗಳಲ್ಲಿ ಮಾತ್ರವಲ್ಲದೆ ಶಾಪರ್ಸ್ ಸ್ಪಾಟ್, ಸೆಂಟ್ರಲ್, ಲೈಫ್ ಸ್ಟೈಲ್ ಮತ್ತು ಎಲ್ಲಾ ಪ್ರಮುಖ ಬ್ರ್ಯಾಂಡ್ಗಳ ಅಂಗಡಿಯಲ್ಲಿ ದೊರೆಯುತ್ತದೆ. ವಿವರಗಳಿಗಾಗಿ: www.shop.fasttrack.in  ಸಂಪರ್ಕಿಸಿ.  

ಏರ್ಟೆಲ್ ಡಿಜಿಟಲ್ನಿಂದ ಚಿತ್ರ ವೀಕ್ಷಣೆಗೆ ಹೊಸ ಅವಕಾಶ
ಭಾರ್ತಿ ಏರ್ಟೆಲ್ನ ಡಿಟಿಎಚ್ ಸೇವಾ ಅಂಗವಾಗಿರುವ ಏರ್ಟೆಲ್ ಡಿಜಿಟಲ್ ಟಿವಿ ಇಂದು ದೇಶದಾದ್ಯಂತ ಇರುವ ತನ್ನ ಗ್ರಾಹಕರಿಗಾಗಿ ತನ್ನ ನೂತನ ಪೇ ಪರ್ ವಿವ್ ವೇದಿಕೆಯಲ್ಲಿ ಪ್ರೀಮಿಯಮ್ ಪಿಪಿವಿ ಸೇವೆಯನ್ನು ಆರಂಭಿಸಿದೆ. ಉದ್ಯಮದಲ್ಲೇ ಈ ರೀತಿಯ ಪ್ರಥಮ ಕಾರ್ಯಕ್ರಮ ಎನಿಸಿರುವ ಈ ಸೇವೆ, ಚಿತ್ರ ಪ್ರಿಯರು ಜನಪ್ರಿಯ ಹಿಟ್ಗಳು ಮತ್ತು ಬ್ಲಾಕ್ಬಸ್ಟರ್ಗಳನ್ನು, ಮೊದಲೇ ನಿಗದಿಯಾದ ಸಮಯಕ್ಕೆ ಪೇ ಪರ್ ವಿವ್ ವೇದಿಯಲ್ಲಿ ವೀಕ್ಷಿಸಲು ಉಚಿತವಾಗಿ ಅವಕಾಶ ಒದಗಿಸುತ್ತದೆ. ಭಾರತೀಯ ಚಲನಚಿತ್ರೋದ್ಯಮವು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಈ ಆಕರ್ಷಕ ಸೇವೆಯು ಪಿಪೀ ವೇದಿಯ ಒಂದು ಹೊಸತನ ಮಾತ್ರ ಆಗಿರದೆ, ಡಿಟಿಎಚ್ ಉದ್ಯಮಕ್ಕೂ ಒಂದು ಹೊಸ ಪರಿಚಯವಾಗಿದೆ. ತಂತ್ರಜ್ಞಾನ ಮತ್ತು ಸೌಕರ್ಯವನ್ನು ಚಾನಲ್ ಸಂಖ್ಯೆ 155ರಲ್ಲಿ ಜಾಹೀರಾತುಗಳೊಂದಿಗೆ ಚಿತ್ರ ವೀಕ್ಷಿಸಬಹುದಾಗಿದೆ. ಇದರೊಂದಿಗೆ ಇಕಕಓ 155 ಎಂದು 54325ಕ್ಕೆ ಎಸ್ಎಂಎಸ್ ಮಾಡಿ ಇಲ್ಲವೇ ತಮ್ಮ ನೋಂದಾಯಿತ ದೂರವಾಣಿ ಸಂಖ್ಯೆಯ ಮೂಲಕ 12150ಗೆ ಡಯಲ್ ಮಾಡಿ ಚಂದಾದಾರಿಕೆ ಪಡೆಯುವ ಮೂಲಕ ಗ್ರಾಹಕರು ಚಿತ್ರವನ್ನು ಫುಲ್ ಸ್ಕ್ರೀನ್ನಲ್ಲಿ ವೀಕ್ಷಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ  http://www.airtel.in/digitaltv ಗೆ ಲಾಗ್ ಆನ್ ಆಗಿ.

ಎಚ್ಡಿಎಫ್ಸಿ ಲೈಫ್ ಹೆಲ್ತ್ ಅಶ್ಯೂರ್ ಪ್ಲಾನ್ ಬಿಡುಗಡೆ
ಭಾರತದ  ಪ್ರಮುಖ ಜೀವ ವಿಮೆ ಕಂಪನಿ ಎಚ್ಡಿಎಫ್ಸಿ ಲೈಫ್ ತನ್ನ ನೂತನ ಆರೋಗ್ಯ ವಿಮೆ ಉತ್ಪನ್ನವಾದ ಎಚ್ಡಿಎಫ್ಸಿ ಲೈಫ್ ಹೆಲ್ತ್ ಅಶ್ಯೂರ್ ಪ್ಲಾನ್ ಎಂಬ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ. ಸಮಗ್ರ ಆರೋಗ್ಯ ರಕ್ಷಣೆ ನೀಡುವ ಗುರಿಯನ್ನು ಇದು ಒಳಗೊಂಡಿದೆ. ಇದು ಆಸ್ಪತ್ರೆಯಲ್ಲಿ ತಗಲುವ ವೈದ್ಯಕೀಯ ವೆಚ್ಚವನ್ನು ಒಳಗೊಂಡಿದ್ದು, ಗೋಲ್ಡ್ ಪ್ಲಾನ್ ಮತ್ತು ಸಿಲ್ವರ್ ಪ್ಲಾನ್ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಈ ಯೋಜನೆ ಕುಟುಂಬಕ್ಕೆ ಆರೋಗ್ಯ ವಿಮೆ ರಕ್ಷಣೆ ನೀಡುತ್ತದೆ. ಫ್ಲೋಟರ್ ಕವರ್ ಆಧಾರದಲ್ಲಿ ಸೌಲಭ್ಯ ನೀಡುತ್ತದೆ. 200ದಿನಗಳ ಆರೋಗ್ಯ ನಿಗಾ ಪ್ರಕ್ರಿಯೆಯನ್ನು ಒಳಗೊಂಡಿದೆ. ಉತ್ಪನ್ನದ ಬಗ್ಗೆ ಮಾತನಾಡಿದ ಎಚ್ಡಿಎಫ್ಸಿ ಲೈಫ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತಾಭವವ ಚೌಧುರಿ, ಇದು ಗ್ರಾಹಕ ಕೇಂದ್ರಿತ ಉತ್ಪನ್ನವಾಗಿದ್ದು, ಎಚ್ಡಿಎಫ್ಸಿ ಲೈಪ್ನ ಪ್ರಮುಖ ಉತ್ಪನ್ನವಾಗಿದೆ. ಗ್ರಾಹಕರಿಗೆ ಸುದೀರ್ಘಾವಧಿಯ ಆರೋಗ್ಯ ವಿಮೆ ರಕ್ಷಣೆಯನ್ನು ಒದಗಿಸಲಿದ್ದು, ಶೇ. 50ರಷ್ಟು ನೊ ಕ್ಲೈಮ್ ಬೋನಸ್ ಅನ್ನು ಒದಗಿಸುತ್ತದೆ ಎಂದರು.

ಮಂತ್ರಿ ಮಾಲ್ನಲ್ಲಿ ಐರಿಸ್ ಆರೋಮಾ ಆರಂಭ
ಮೈಸೂರು ಮೂಲದ ಎನ್ಆರ್ ಗ್ರೂಪ್ನ ದೇಶಿಯ ಸುಗಂಧ ಉದ್ಯಮವು ಬೆಂಗಳೂರಿನ ಮಂತ್ರಿಮಾಲ್ನಲ್ಲಿ ಐರಿಸ್ ಆರೋಮಾವನ್ನು ಆರಂಭಿಸಿದೆ. ಇದು ನಗರದ ಎರಡನೇ ರೀಟೈಲ್ ಮಳಿಗೆ ಆಗಿದೆ. ಐರಿಸ್ ಅವರ ಅರೋಮಾ ಬೋಟಿಕ್ ಒಂದೇ  ಸೂರಿನಡಿ ವಿವಿಧ ಶ್ರೇಣಿಯ ಸಂಪೂರ್ಣ ಮನೆ ಮಾದರಿಯ ಸುಗಂಧ ದೊರೆಯುವ ಏಕೈಕ ಕೇಂದ್ರವಾಗಿದೆ. ಐರಿಸ್ ಅರೋಮಾ ಬೋಟಿಕ್ ಮಂತ್ರಿಮಾಲ್ನ 2ನೇ ಮಹಡಿಯಲ್ಲಿದೆ.  ಈ ಕುರಿತು ಮಾತನಾಡಿದ ರಿಪ್ಪಲ್ ಫ್ರಾಗ್ನೆನ್ಸ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಾಸ್ಟರ್ ಪ್ರಾಗ್ನೆನ್ಸ್ನ ಸೃಷ್ಟಿಕಾರರಾಗಿರುವ ಮಿಸ್ಟರ್ ಕಿರಣ್ ರಂಗಾ, ನಮ್ಮ ಮೊದಲ ಐರಿಸ್ ಅರೋಮಾ ಬೊಟಿಕ್ಗೆ ದೊರೆತಿರುವ ಪ್ರತಿಕ್ರಿಯೆಗೆ ನಮಗೆ ಮಾತೇ ಹೊರಡದಷ್ಟು ಹರ್ಷವಾಗಿದೆ. ಅದು ನಮ್ಮನ್ನು ದೇಶದಾದ್ಯಂತ ಹೋಮ್ ಪ್ರಾಗ್ನೆನ್ಸ್ಗೆ ಇರುವ ಪ್ರಾಮುಖ್ಯತೆಯನ್ನು ನಂಬುವಂತೆ ಮಾಡಿದೆ. ಭಾರತದ ವಿವಿಧ ಪ್ರದೇಶದಲ್ಲಿ ಹೋಮ್ ಫ್ರಾಗ್ನೆನ್ಸ್ ಔಟ್ಲೆಟ್ ತೆರೆಯಲು ಉತ್ತಮ ಸಮಯ ಎಂಬುದನ್ನು ನಿರೂಪಿಸಿದೆ ಎಂದರು.

ಅಮರನಾಥ ಯಾತ್ರಿಕರಿಗೆ ಏರ್ಸೆಲ್ ವಿಶೇಷ ಸಿಮ್
ಅಮರನಾಥ ಯಾತ್ರಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಏರ್ಸೆಲ್ ವಿಶೇಷ ಸೀಮಿತ ಅವಧಿಯ ಪ್ರೀಪೇಯ್ಡ್ ಸಿಮ್ ಕಾರ್ಡ್ಗಳನ್ನು ಬಿಡುಗಡೆಗೊಳಿಸಿದೆ. ಏರ್ಸೆಲ್ ವಿಶೇಷ ಕೇಂದ್ರಗಳನ್ನು ಜಮ್ಮು, ಪಹಲ್ ಗಾಂವ್, ಬಲ್ಟಾಲ್ ಮತ್ತು ಜಮ್ಮು ಕಾಶ್ಮೀರದ ನಾನಾ ಕಡೆಗಳಲ್ಲಿ ತೆರೆದಿದ್ದು, ಅಲ್ಲಿ ಈ ವಿಶೇಷ ಸಿಮ್ ಕಾರ್ಡ್ಗಳು ದೊರೆಯಲಿವೆ. ಯಾತ್ರಿಕರಿಗೆ ಯಾತ್ರೆಯ ಎಲ್ಲ ಸಂದರ್ಭಗಳಲ್ಲಿಯೂ ಟೆಲಿಕಾಂ ಸಂಪರ್ಕ ಸಿಗುವಂತೆ ಮಾಡುವುದು ಏರ್ ಸೆಲ್ ಉದ್ದೇಶವಾಗಿದೆ. ಈ ಬಗ್ಗೆ ಮಾತನಾಡಿದ ಏರ್ ಸೆಲ್ ಕರ್ನಾಟಕ ವೃತ್ತದ ಬ್ಯುಸಿನೆಸ್ ಮುಖ್ಯಸ್ಥ ಕೆ. ಕದಿವರನ್, ವಾರ್ಷಿಕ ಅಮರನಾಥ ಯಾತ್ರೆ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ದೇಶದ ನಾನಾ ಭಾಗಗಳಿಂದ 6 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಆಗಮಿಸುತ್ತಾರೆ. ಪವಿತ್ರ ಅಮರನಾಥ ಗುಹೆಯನ್ನು ಸಂದರ್ಶಿಸುತ್ತಾರೆ. ಯಾತ್ರಿಕರಿಗೆ ಭಗವಂತನ ಆಶೀರ್ವಾದದ ಜತೆಗೆ  ತಮ್ಮ ಕುಟುಂಬಸ್ತರೊಡನೆ, ಆಪ್ತರೊಡನೆ ಯಾತ್ರೆ ಸಂದರ್ಭ ಟೆಲಿಕಾಂ ಮೂಲಕ ಸತತ ಸಂಪರ್ಕ ಇಟ್ಟುಕೊಳ್ಳುವುದು ಕೂಡ ಮುಖ್ಯ. ಹೀಗಾಗಿ ದಿನದ ಇಪ್ಪತ್ನಾಲ್ಕು ಗಂಟೆ ಅಮರನಾಥ ಯಾತ್ರೆ ವೇಳೆ ಯಾತ್ರಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸೌಲಭ್ಯ ಪಡೆಯಲು ಯಾತ್ರಿಕರು ಸಿಮ್ ಕಾರ್ಡ್ ಪಡೆದು ಅದನ್ನು ಕೌಂಟರಿನಲ್ಲಿ ಪ್ರೊಡ್ಯೂಸ್ ಮಾಡಬೇಕು. ಮೂಲ ಯಾತ್ರಾ ನೋಂದಣಿ ಸ್ಲಿಪ್ ತೋರಿಸಬೇಕು. 4 ಭಾವಚಿತ್ರ ನೀಡಬೇಕು. ವಿಳಾಸ, ಗುರುತಿನ ಚೀಟಿ ತೋರಿಸಬೇಕು.

ಐಟಾಫ್ಟರ್ ಟ್ಯಾಬ್ಲೆಟ್ ಬಿಡುಗಡೆ
ಹೈದರಾಬಾದ್ ಮೂಲದ ಐಟಿ ಸಾಫ್ಟ್ವೇರ್ ಸ್ಪಾರ್ಟ್ ಅಪ್ ಕಂಪನಿ ಆಫ್ಥಾಟ್ಸ್ ನೂತನ ಐಟಾಫ್ಟರ್ ಎಂಬ ಟ್ಯಾಬ್ಲೆಟ್ ಬಿಡುಗಡೆಗೊಳಿಸಿದೆ. ಪಿಇಎಸ್ ಎಜುಕೇಶನಲ್ ಇನ್ಸ್ಟಿಟ್ಯೂಷನಲ್ ಸಂಸ್ಥಾಪಕ ಎಂ.ಆರ್. ದೊರೆಸ್ವಾಮಿ ಅವರು ಉತ್ಪನ್ನ ಬಿಡುಗಡೆಗೊಳಿಸಿದರು. ಇಂಟರ್ ಮೀಡಿಯೇಟ್ ವಿದ್ಯಾರ್ಥಿಗಳಿಗೆ ಗಣಿತ, ಜೀವಶಾಸ್ತ್ರ, ರಾಸಾಯನಿಕ ಶಾಸ್ತ್ರದಲ್ಲಿ ಸಹಾಯಕವಾಗುವಂತೆ ಉತ್ಪನ್ನವನ್ನು ಸಂಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆಪ್ಥಾಟ್ಸ್ ನಿರ್ದೇಶಕ ರವಿ ವಿಜ್ಜೇಶ್ವರರಾಪು, ನಾವು ನಮ್ಮ ವಿನೂತನ ಉತ್ಪನ್ನ ಐಟಾಪ್ಪರ್ಅನ್ನು ಇಂಟರ್ಮೀಡಿಯೇಟ್ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಸುಲಭವಾಗಿಸುವಂತೆ ತಯಾರಿಸಲಾಗಿದೆ. ಇದು ಸಂಕೀರ್ಣ ವಿಷಯಗಳನ್ನು ಸರಳವಾಗಿ ಕಲಿಯಲು ಸಹಕರಿಸುತ್ತದೆ ಎಂದರು.

ಎಪ್ಸಾನ್ ಹೊಸ ಪ್ರಿಂಟರ್ ಬಿಡುಗಡೆ
ಡಿಜಿಟಲ್ ಪ್ರಿಂಟಿಂಗ್ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾಗಿರುವ ಎಪ್ಸಾನ್, ಮೋನೋ ಇಂಕ್ ಟ್ಯಾಂಕ್ ಇಂಕ್ಜೆಟ್ ಪ್ರಿಂಟರ್ಗಳ ಎಮ್ ಸರಣಿಯನ್ನು ಬಿಡುಗಡೆ ಮಾಡಿದೆ. ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಪ್ಪು ಬಿಳಿ ಪ್ರಿಂಟಿಂಗ್ ಅಗತ್ಯ ಕಾರ್ಪೋರೇಟ್ ವಲಯಕ್ಕೆ ಹೆಚ್ಚು ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಪೋರೇಟ್ ಜಗತ್ತಿಗೆ ಅನುಕೂಲವಾಗುವಂತೆ ಈ ಮೋನೋಕ್ರೋಮ್ ಇಂಕ್ಜೆಟ್ ಪ್ರಿಂಟರುಗಳನ್ನು ವಿನ್ಯಾಸಗೊಳಿಸಲಾಗಿದೆ. ಎಪ್ಸಾನ್ ಎಮ್100 ಸಿಂಗಲ್ ಫಂಕ್ಷನ್ ಮಾನೋ ಇಂಕ್ ಟ್ಯಾಂಕ್ ಪ್ರಿಂಟರ್ ಬೆಲೆ 9999. ಎಪ್ಸಾನ್ ಎಮ್200 ಆಲ್ ಇನ್ ಒನ್ ಮಾನೋ ಇಂಕ್ ಟ್ಯಾಂಕ್ ಸಿಸ್ಟಂ ಪ್ರಿಂಟರಿನ ಬೆಲೆ 13,999 ಆಗಿದೆ.

ಕಿಚನ್ ಫೆಸ್ಟಿವಲ್
ಬಹು ನಿರೀಕ್ಷಿತ ಕಿಚನ್ ಫೆಸ್ಟಿವಲ್ ಮತ್ತೆ ಬಂದಿದೆ. ವಿಶಾಲ ಶ್ರೇಣಿಯ ಅಡುಗೆ ಮನೆ ಸಾಮಗ್ರಿಗಳು, ಪ್ಲಾಸ್ಟಿಕ್ ವಸ್ತುಗಳು, ಉಪಕರಣಗಳು, ಆಕ್ಸೆಸರಿಗಳು ಮತ್ತು ನಿಮಗೆ ಆನಂದಕರ ಅನುಭವವನ್ನು ನೀಡಲು ಇನ್ನೂ ಹಲವು ಸಾಮಗ್ರಿಗಳ ಮೇಲೆ ಕೊಡುಗೆಯನ್ನು ಓಷಾನ್ ಹೈಪರ್ಮಾರ್ಕೆಟ್ ನೀಡುತ್ತಿದೆ. ಇದೇ ವೇಳೆ ಗ್ರಾಹಕರಿಗೆ ಎಲ್ಲ ಅಡುಗೆಮನೆ ಸಾಮಗ್ರಿಗಳ ನೇರ ಡೆಮೊ ನೀಡಲಾಗುತ್ತದೆ. ಈ ಅದ್ಭುತ ಕೊಡುಗೆ ಮುಗಿಯುವ ಮುನ್ನ ನಿಮ್ಮ ಸಮೀಪದ ಓಷಾನ್ ಸ್ಟೋರ್ಗೆ ಭೇಟಿ ನೀಡಿ ಮತ್ತು ನಿಮ್ಮ ಅಡುಗೆ ಮನೆಯಲ್ಲಿ ಇರಲೇಬೇಕಾದಂತಹ ಉಪಕರಣಗಳನ್ನು ಕೊಂಡು ತನ್ನಿ. ಕಿಚನ್ ಫೆಸ್ಟಿವಲ್ ಜು. 7ರವರೆಗೆ ಇರುತ್ತದೆ.

ಎಸ್ಬಿಎಂನಿಂದ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ
ವಿಶ್ವ ತಂಬಾಕುರಹಿತ ದಿನದ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವೈಯಾಲಿಕಾವಲ್ ಶಾಖೆ, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಮತ್ತು ಗ್ಲೋಬಲ್ ವಿಷನ್ ಕ್ಯಾನ್ಸರ್ ಕೇರ್ ಎನ್ಜಿಒ ನಾಲ್ಕು ದಿನಗಳ ಕಾಲ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ದಂತವೈದ್ಯ ವಿದ್ಯಾರ್ಥಿಗಳಿಗಾಗಿ ತಂಬಾಕು ಇಲ್ಲವೇ ಜೀವನ ಎಂಬ ವಿಷಯವಾಗಿ ಭಿತ್ತಿಪತ್ರ ವಿನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ 30ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 3ದಿನಗಳ ಕಾಲ ಭಿತ್ತಿಪತ್ರ ಚಿತ್ರ ಪ್ರದರ್ಶನ, ಹಾಗೂ ಉಚಿತ ಚಿಕಿತ್ಸಾ ಮತ್ತು ತರಬೇತಿ ಶಿಬಿರ ಮತ್ತು ರ್ಯಾಲಿ ಕಾರ್ಯಕ್ರಮವನ್ನು ಮಲ್ಲೇಶ್ವರ ಮೈದಾನದಿಂದ ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ಸರಿಸುಮಾರು 500 ವಿದ್ಯಾರ್ಥಿಗಳು 16 ನರ್ಸಿಂಗ್ ಮತ್ತು ದಂತವೈದ್ಯ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವೈಯಾಲಿಕಾವಲ್ ಶಾಖೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಚಾಲನೆ ನೀಡಿದರು. ಅತಿಥಿಗಳಾಗಿ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷ ನಫೀಸ್ ಫಾತಿಮಾ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com