ಹವೆಲ್ಸ್ ಇಂಡಿಯಾ ಪ್ರೈ.ಲಿ. ಆರೋಗ್ಯದತ್ತ ಹೆಚ್ಚು ಕಾಳಜಿ ಉಳ್ಳವರಿಗಾಗಿ 'ಪ್ರೊಲೈಫ್' ಎಂಬ ಹೆಸರಿನ ಹೊಸ ಮಾದರಿಯ ಏರ್ ಫೈಯರ್ ಅನ್ನು ಬಿಡುಗಡೆ ಮಾಡಿದೆ. ಇದರ ವಿಶೇಷತೆ ಏನೆಂದರೆ ಎಣ್ಣೆರಹಿತ ಬಿಸಿ ಆಹಾರ ಸಿದ್ಧಪಡಿಸಲು ನೆರವಾಗುತ್ತದೆ. ಮಾತ್ರವಲ್ಲದೆ ಒಂದೇ ಬಾರಿಗೆ ಬೇರೆ ಬೇರೆ ವಿಧದ 2 ಬಗೆಯ ಆಹಾರ ಸಿದ್ಧಪಡಿಸಲು ಸಾಧ್ಯವಿದೆ. ಉಳಿದ ಫೈಯರ್‌ಗಳಿಗೆ ಹೋಲಿಸಿದಾಗ ಶೇ.85ರಷ್ಟು ಕಡಿಮೆ ಪ್ರಮಾಣದ ಎಣ್ಣೆಯನ್ನು ತನ್ನ ಉತ್ಪನ್ನ ಬಳಸಿಕೊಳ್ಳುತ್ತದೆ ಎನ್ನುವುದು ಕಂಪನಿಯ ಹೇಳಿಕೆಯಾಗಿದೆ. ಅಂದಹಾಗೆ, ಹೊಸ ಉತ್ಪನ್ನದ ಬೆಲೆ ರು. 14, 995.