ಖಾಸಗಿ ಮೊಬೈಲ್ ಸೇವಾದಾರರರಲ್ಲಿ ಅಗ್ರಪಂಕ್ತಿಯಲ್ಲಿರುವ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಗ್ರಾಹಕರಿಗಾಗಿ ಎರಡು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. 199 ಮತ್ತು 999 ರೇಂಜ್‌ನಲ್ಲಿ ಈ ಯೋಜನೆ ಇದೆ. ಈ ದರ ವ್ಯಾಪ್ತಿಯಲ್ಲಿ ಐದು ಮಾಸಿಕ ಶುಲ್ಕಗಳ ಯೋಜನೆ ಆರಿಸಲು ಗ್ರಾಹಕರಿಗೆ ಅವಕಾಶ ಉಂಟು. ಪ್ರತಿಯೊಂದರಲ್ಲೂ ಉಚಿತ ಕರೆ, ಎಸ್‌ಎಂಎಸ್ ಮತ್ತು ಡೇಟಾ ಯೂಸೇಜ್‌ಗೆ ಅವಕಾಶವಿದೆ.