ಪೂರ್ವ ಆಫ್ರಿಕಕ್ಕೆ ಹಣ ವರ್ಗಾವಣೆಗಾಗಿ ಟೈಮ್ಸ್ ಆಫ್ ಮನಿ ಮತ್ತು ನೇಷನ್ ಮೀಡಿಯಾ ಗ್ರೂಪ್ ಮತ್ತು ಡೈಮಂಡ್ ಟ್ರಸ್ಟ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿವೆ. ಇದರಿಂದಾಗಿ ಬೆಂಗಳೂರು ಮತ್ತು ಇತರ ನಗರಗಳಲ್ಲಿರುವ ದಕ್ಷಿಣ ಆಫ್ರಿಕನ್ನರಿಗೆ ಅನುಕೂಲವಾಗಲಿದೆ. 'ನೇಷನ್ ಹೆಲಾ' ಎಂಬ ಯೋಜನೆಯಡಿಯಲ್ಲಿ ಆಫ್ರಿಕನ್ನರು ಹಣ ಕಳುಹಿಸಲು ಸಾಧ್ಯವಿದೆ. ಪ್ರೀಪೇಡ್ ವೀಸಾ ಕಾರ್ಡ್ ಮತ್ತು ಮೊಬೈಲ್ ಫೋನ್ ವ್ಯಾಲೆಟ್ ಹಾಗೂ ವರ್ಚುವಲ್ ಅಕೌಂಟ್ ಮೂಲಕ ವ್ಯವಹಾರ ನಡೆಯುತ್ತದೆ. ಹೆಚ್ಚಿನ ವಿವರಕ್ಕೆ www.timesofmoney.com, www.nationhela.com ಗೆ ಲಾಗ್ ಇನ್ ಆಗಬಹುದು.
ಎಮಿರೇಟ್ಸ್‌ನಿಂದ ವಿಶೇಷ ಪ್ರವಾಸ
ಎಮಿರೇಟ್ಸ್ ವಿಮಾನ ಯಾನ ಸಂಸ್ಥೆಯಿಂದ ವಿದೇಶಕ್ಕೆ ತೆರಳುವವರಿಗೆ ವಿಶೇಷ ಪ್ಯಾಕೆಜ್ ನೀಡಿದೆ. ಭಾರತದಲ್ಲಿ ಎಮಿರೇಟ್ಸ್ ನೀಡುತ್ತಿರುವ ಸೇವೆ ನೀಡುತ್ತಿರುವ 10 ಸ್ಥಳಗಳಿಂದ ದುಬೈಗೆ ಅಗ್ಗದ ದರದಲ್ಲಿ ಪ್ರವಾಸ ಮಾಡಬಹುದು. ಎಕಾನಮಿ ಕ್ಲಾಸ್‌ನಲ್ಲಿ 18,778ರಿಂದ ಬ್ಯುಸಿನೆಸ್ ಕ್ಲಾಸ್ ರು. 54, 039 ದರದಲ್ಲಿ ಪ್ರಯಾಣಿಸಬಹುದು. ವಿವರಕ್ಕೆ www.emirates.com/inಗೆ ಭೇಟಿ ನೀಡಿ.
ಒಪ್ಪಂದಕ್ಕೆ ಸಹಿ
ರೆಲಿಗೇರ್ ಆರೋಗ್ಯ ವಿಮಾ ಕಂಪನಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದಿನ ದಿನಗಳಲ್ಲಿ ರೆಲಿಗೇರ್ ವಿಮಾ ಸಂಸ್ಥೆಯ ವಿವಿಧ ಯೋಜನೆಗಳು ಯೂನಿಯನ್ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಾಗಲಿವೆ. ಇದರಿಂದಾಗಿ ಬ್ಯಾಂಕ್‌ನ ಗ್ರಾಹಕರಿಗೆ ಅತ್ಯಾಕರ್ಷಕವಾಗಿರುವ ವಿಮಾ ಯೋಜನೆಗಳು ಲಭ್ಯವಾಗಲಿವೆ.
ಸರ್ಕಾರಕ್ಕೆ ರು. 16,546 ಕೋಟಿ ನಷ್ಟ
ಮಾರುಕಟ್ಟೆಯಲ್ಲಿ ಖ್ಯಾತ ಬ್ರಾಂಡ್‌ಗಳ ನಕಲಿ ಉತ್ಪನ್ನಗಳು ಸರಾಗವಾಗಿ ಮಾರಾಟವಾಗುತ್ತಿವೆ. ಇದರಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 2012ರಲ್ಲಿ 16,546 ಕೋಟಿ ನಷ್ಟವಾಗಿದೆ. ಜತೆಗೆ ಕಂಪನಿಗಳಿಗೂ ನಷ್ಟವಾಗುತ್ತದೆ. ಅದನ್ನು ತಪ್ಪಿಸಲು ಎಫ್‌ಎಂಸಿಜಿ ಕಂಪನಿಗಳು ಭಾರತೀಯ ಕೈಗಾರಿಕೆ ಮತ್ತು ವಾಣಿಜ್ಯ ಮಹಾಮಂಡಳಿ (ಫಿಕ್ಕಿ) , ಐಟಿಸಿ ಮತ್ತು ಕೋಕಾಕೋಲ ಇಂಡಿಯಾ ಜತೆಗೂಡಿ ಕೆಲವೊಂದು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿವೆ.
ಸೂಪರ್ ಸಿಂಗರ್ ಸ್ಪರ್ಧೆ
ರೇಡಿಯೋ ಮಿರ್ಚಿ ಆಯೋಜಿಸುವ 'ರೇಡಿಯೋ ಸಿಟಿ ಸೂಪರ್ ಸಿಂಗರ್ ಹಂತ 5' ಆರಂಭವಾಗಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಒಂದು ಲಕ್ಷ ನಗದು ಬಹುಮಾನ ಮತ್ತು 'ಬಹುಪರಾಕ್' ಹೊಸ ಚಲನಚಿತ್ರದಲ್ಲಿ ಹಿನ್ನೆಲೆ ಗಾಯಕರಾಗಿ ಹಾಡುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಹೆಚ್ಚಿನ ವಿವರಕ್ಕೆ http://myradiocity.in ಗೆ ಲಾಗ್ ಇನ್ ಆಗಿ.