ವಿತ್ತಲೋಕ ಸುತ್ತಮುತ್ತಾ
ವಿ- ಗಾರ್ಡ್ ಟೈಮ್ ಡಿಲೇ ಸಿಸ್ಟಂ ಸ್ಟೆಬಿಲೈಸರ್
ಬೆಂಗಳೂರು: ವಿ- ಗಾರ್ಡ್ ಸ್ಟೆಬಿಲೈಸರ್, ವಿನೂತನ ಇಂಟೆಲಿಜೆಂಟ್ ಟೈಮ್ ಡಿಲೇ ಸಿಸ್ಟಂನ್ನು ಹೊರತಂದಿದೆ. ಇದು ನೂತನ ಆವಿಷ್ಕಾರವಾಗಿದ್ದು ಎಲ್ಲಾ ತೆರನಾದ ವಿದ್ಯುತ್ ವ್ಯತ್ಯಯಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ವೋಲ್ಟೇಜ್ ವ್ಯತ್ಯಾಸದಿಂದಾಗಿ ಮನೆಯಲ್ಲಿರುವ ಯಾವುದೇ ತೆರನಾದ ವಿದ್ಯುತ್ ಉಪಕರಣ ವಸ್ತುಗ ಳಿಗೂ ಸಹ ತೊಂದರೆಯಾಗದಂತೆ ಅನಿಯಮಿತ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿ- ಗಾರ್ಡ್ ಕಾರ್ಯನಿರ್ವಹಿಸಬಲ್ಲದು. ವಿನೂತನ ಐಸಿ ಟೆಕ್ನೆಲಾಜಿ ಮತ್ತು ಬಿಲ್ಟ್ಇನ್ ಥರ್ಮಲ್ ಓವರ್ಲೋಡ್ ಮಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ. ಸೊಗಸಾದ ವಾಲ್ ಮೌಂಟಿಂಗ್ ಮಾಡಬಹುದಾದ ಮತ್ತು ಅತ್ಯಂತ ಹಗುರವಾಗಿದ್ದು 3ವರ್ಷಗಳ ವಾರಂಟಿಯೊಂದಿಗೆ ಲಭ್ಯವಿದ್ದು ಇದರ ಬೆಲೆ 2,500 ರಿಂದ ಪ್ರಾರಂಭವಾಗುತ್ತದೆ.
ಲಿವಾನ್ನಿಂದ ಮೂರು ಕಲರ್ ಕ್ರೀಮ್ ಬಿಡುಗಡೆ
ಹೇರ್ ಕೇರ್ ಬ್ರ್ಯಾಂಡ್ ಲಿವಾನ್, ಇದೀಗ ಲಿವಾನ್ ಕಂಡೀಷನಿಂಗ್ ಕ್ರೀಮ್ ಕಲರ್ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕೂದಲಿಗೆ ಸುಂದರ ಬಣ್ಣ ನೀಡುವುದರ ಜತೆಗೆ ಉತ್ತಮ ಆರೈಕೆ ನೀಡುವಲ್ಲಿ ನೆರವಾಗುತ್ತದೆ. ಲಿವಾನ್ ಕ್ರೀಮ್ ಕಲರ್ ಮೂರು ರೀತಿಯ ಶೇಡ್ಸ್ಗಳಲ್ಲಿ ಲಭ್ಯವಾಗಲಿದೆ. ನ್ಯಾಚುರಲ್ ಬ್ಲ್ಯಾಕ್, ನ್ಯಾಚುರಲ್ ಬ್ರೌನ್ ಹಾಗೂ ನ್ಯಾಚುರಲ್ ಬರ್ಗಾಂಡಿ ಬಣ್ಣಗಳಲ್ಲಿ ಲಭ್ಯವಿದೆ. ನೂತನ ಉತ್ಪನ್ನದ ಕಿಟ್ನಲ್ಲಿ ಕಲರಂಟ್, ಡೆವೆಲಾಪರ್, ಅಪ್ಲಿಕೇಟರ್, ಬ್ರಷ್, ಕಂಡೀಷನರ್ ಹಾಗೂ ಅಲರ್ಜಿ ಟೆಸ್ಟ್ ಇರುತ್ತದೆ. ಮಾಹಿತಿಗಾಗಿ- 1800-267-0775.
ಏರ್ಸೆಲ್ನಿಂದ ಐಪಿಎಲ್ ಪ್ರಸಾರ
ಟೆಲಿಕಾಂ ಕಂಪನಿ ಏರ್ಸೆಲ್, ಪೆಪ್ಸಿ ಐಪಿಎಲ್ನ ಸ್ಟ್ರೀಮಿಂಗ್ನ್ನು ಡಿಜಿವೈನ ಏರ್ಸೆಲ್ ನೆಕ್ಸ್ಜಿಟಿವಿ ಮೂಲಕ ಪ್ರಸಾರ ಮಾಡುತ್ತಿದೆ. ಇದರಿಂದ ಏರ್ಸೆಲ್ ಗ್ರಾಹಕರು ಪೆಪ್ಸಿ ಐಪಿಎಲ್ ಪಂದ್ಯಗಳನ್ನು ಎಲ್ಲಿ, ಯಾವಾಗ ಬೇಕಾದರೂ ಕೈಗೆಟುಕುವ ದರದಲ್ಲಿ ವೀಕ್ಷಿಸಬಹುದು. ಗ್ರಾಹಕರು ಈ ಸೇವೆಯನ್ನು ಯುಎಸ್ಎಸ್ಡಿ ಸ್ಟ್ರಿಂಗ್ಗಳ ಮೂಲಕ ಆಕ್ಟಿವೇಟ್ ಮಾಡಿ ಲೈವ್ ಟಿವಿ ಮತ್ತು ಡೇಟಾ ಅನುಕೂಲಗಳನ್ನು ಪಡೆಯಬಹುದು. ಏರ್ಸೆಲ್ ನೆಕ್ಸ್ಜಿಟಿವಿ ಆಡ್ರಾಯಿಡ್ ಮತ್ತು ಐಒಎಸ್ ಸಾಧನ ಮತ್ತು ವ್ಯಾಪ್ನಲ್ಲಿ ಕೂಡಾ ಲಭ್ಯವಿದೆ. ನೆಕ್ಸ್ಜಿಟಿವಿಯು ಹಲವಾರು ಬಗೆಯ ವಿಶೇಷತೆಗಳನ್ನು ಹೊಂದಿದ್ದು ರಿಪ್ಲೇ ಟಿವಿ, ಅಡಾಪ್ಟೀವ್ ಸ್ಟ್ರೀಮಿಂಗ್, ಬೆಸ್ಟ್ ಇನ್ ಕ್ಲಾಸ್ ಯೂಸರ್ ಇಂಟರ್ಫೇಸ್ ಸೇವೆಗಳಿಂದ ಉತ್ತಮವಾಗಿದೆ. ಇದು 2ಜಿ ನೆಟ್ವರ್ಕ್ನಲ್ಲೂ ತಡೆಯಿರದ ಲೈವ್ಸ್ಟ್ರೀಮಿಂಗ್ ಲಭ್ಯವಿದ್ದು ಅನೇಕ ಟಿವಿ ಚಾನಲ್ಗಳನ್ನು ವೀಕ್ಷಿಸಬಹುದಾಗಿದೆ.
ಲಿಬರ್ಟಿ ವಿಡಿಯೋಕಾನ್ನಿಂದ ದ್ವಿಚಕ್ರ ವಾಹನ ವಿಮೆ
ಲಿಬರ್ಟಿ ವಿಡಿಯೋಕಾನ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿ. ದ್ವಿಚಕ್ರ ವಾಹನ ವಿಮೆಯನ್ನು ಘೋಷಿಸಿದೆ. ಈ ಉತ್ಪನ್ನವು ಮೋಟಾರ್ ಸೈಕಲ್, ಸ್ಕೂಟರ್ ಮತ್ತು ಮೊಪೆಡ್ಗಳಿಗೆ ಲಭ್ಯವಿದೆ. ವಿಮೆಯು ವಾಹನದ ಚಾಲಕರಿಗೆ ವಾಹನ ಚಾಲನೆ ಮಾಡುವಾಗ ಆಗುವ ನಿರ್ದಿಷ್ಟ ಗಾಯ, ಸಾವು ಅಥವಾ ಅಂಗವಿಕಲತೆಗೆ ವೈಯಕ್ತಿಕ ಅಪಘಾತದ ರಕ್ಷಣೆಯ ಆಯ್ಕೆಯನ್ನು ನೀಡುತ್ತದೆ. ಈ ವಿಮೆಯು, ಸವಾರರಿಗೂ ವೈಯಕ್ತಿಕ ಅಫಘಾತ ರಕ್ಷಣೆಯ ಆಯ್ಕೆಯನ್ನೂ ನೀಡುತ್ತದೆ. ವಿಮೆಯು ಅಪಘಾತ ಕಾರಣದಿಂದ ಮೂರನೆಯ ವ್ಯಕ್ತಿಗೆ ಆಗುವ ನಷ್ಟ, ಶಾಶ್ವತ ಗಾಯ ಅಥವಾ ಸಾವು ಮೂರನೇ ವ್ಯಕ್ತಿಯ ಆಸ್ತಿಗೆ ಆಗುವ ನಷ್ಟದಿಂದಲೂ ನ್ಯಾಯಿಕ ರಕ್ಷಣೆ ಒದಗಿಸುತ್ತದೆ.
ಸ್ಯಾಮ್ಸಂಗ್ನಿಂದ ಗೆಲಾಕ್ಸಿ ಎಸ್5 ಮಾರುಕಟ್ಟೆಗೆ
ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸ್ಯಾಮ್ಸಂಗ್ ಇಂಡಿಯಾ ಗೆಲಾಕ್ಸಿ ಎಸ್5 ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಗೆಲಾಕ್ಸಿ ಎಸ್5 ಅತ್ಯಾಧುನಿಕ ಕ್ಯಾಮೆರಾ, ಅತ್ಯಂತ ವೇಗದ ನೆಟ್ವರ್ಕ್ ಕನೆಕ್ಟಿವಿಟಿ, ವಿಶಿಷ್ಟ ಫಿಟ್ನೆಸ್ ಟೂಲ್ಗಳು, ಸ್ಮಾರ್ಟ್ಫೋನ್ ರಕ್ಷಣೆ ಮೊದಲಾದ ಗುಣಲಕ್ಷಣಗಳನ್ನು ಹೊಂದಿದೆ. ಆಕರ್ಷಕ ವಿನ್ಯಾಸದ ತೆಳುವಾದ ಸ್ಮಾರ್ಟ್ಫೋನ್ ಚಾರ್ಕೋಲ್ ಕಪ್ಪು, ಮಿನುಗುವ ಬಿಳಿ, ಆಕರ್ಷಕ ನೀಲಿ, ಗ್ರೇ, ಕಿತ್ತಳೆ, ಹೊಳೆಯುವ ಚಿನ್ನದ ಬಣ್ಣಗಳಲ್ಲಿ ಲಭ್ಯವಿದೆ. ಗೆಲಾಕ್ಸಿ ಎಸ್5 ಬೆಲೆ 51,500, ಗೆಲಾಕ್ಸಿ ಗಿಯರ್ 2 ಬೆಲೆ 21,900, ಗಿಯರ್ 2 ಮತ್ತು 2 ನಿಯೋ ಬೆಲೆ ತಲಾ 15,900 ಹೊಂದಿದೆ. ಇದು ಆದುನಿಕ ಟ್ರೆಂಡ್ಗೆ ಹೇಳಿ ಮಾಡಿಸಿದಂತಿದ್ದು ಪಟ್ಟಿಯ ಬದಲು ಬಾಡಿಯೊಳಗೆ ಕ್ಯಾಮೆರಾ ಇರುವುದು ವಿಶೇಷ. ಟಿ.ವಿ ಸೆಟ್ಟಾಪ್ ಬಾಕ್ಸ್ ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಾಚ್ ಆನ್ ರಿಮೋಟ್, ಐಆರ್ಎಲ್ಇಡಿ ಸೆನ್ಸ್ರ್ ಅಪ್ಲಿಕೇಷನ್ ಮೂಲಕ ನಿಯಂತ್ರಿಸಬಹುದು.
ಮಾರಿಕೋದ ಸಮ್ಮರ್ ರಿಫ್ರೆಷ್ ಲೋಷನ್ ಸ್ಪ್ರೇ
ಮಾರಿಕೋ ನೂತನ ಪ್ಯಾರಾಚೂಟ್ ಅಡ್ವಾನ್ಸ್ಸಮ್ಮರ್ ರಿಫ್ರೆಷ್ ಲೋಷನ್ ಸ್ಪ್ರೇಯನ್ನು ಪ್ರಸ್ತುತಪಡಿಸಿದೆ. ಬೇಸಿಗೆ ಕಾಲದಲ್ಲಿ ಚರ್ಮದ ಕಾಂತಿಯನ್ನು ಹಾಗೂ ತಾಜಾತನವನ್ನು ಕಾಪಾಡಲು ಇದು ಉಪಯೋಗಕಾರಿಯಾಗಿದ್ದು, ಚರ್ಮಕ್ಕೆ ಬೇಕಾದಂತಹ ತೇವಾಂಶವನ್ನು ಒದಗಿಸುವ ಜತೆಗೆ ಆಹ್ಲಾದಕರ ತಾಜಾತನದ ಸುವಾಸನೆ ನೀಡುತ್ತದೆ. ತ್ವಚೆಯ ಮೇಲೆ ಸ್ಪ್ರೇ ಮಾಡಿದರಷ್ಟೇ ಸಾಕು ಬೇಸಿಗೆಯ ಝಳ ಬಿಸಿಯಿಂದ ಚರ್ಮವನ್ನು ರಕ್ಷಿಸುತ್ತದೆ. ಇದಲ್ಲದೆ ಡಬಲ್ ಸನ್ಸ್ಕ್ರೀನ್ ಪ್ರೊಟೆಕ್ಷನ್ ಕೂಡ ನೀಡುತ್ತದೆ.
ಕ್ಯಾಡ್ಬರಿಗೆ ಈಗ ಮಾಂಡೆಲ್ಜ್ ಇಂಡಿಯಾ ಫುಡ್ ಲಿ. ಹೆಸರು
ಕ್ಯಾಡ್ಬರಿ ಇಂಡಿಯಾ ಲಿ. ಈಗ ಮಾಂಡೆಲ್ಜ್ ಇಂಡಿಯಾ ಫುಡ್ ಲಿ. ಆಗಿ ಪರಿವರ್ತನೆಗೊಂಡಿದೆ. ಮಾಂಡೆಲ್ಜ್ ಇಂಟರ್ ನ್ಯಾಷನಲ್ ಸಂಸ್ಥೆಯ ವಿಶ್ವದಾದ್ಯಂತ ಇರುವ ಅನುದಾನಿತ ಸಂಸ್ಥೆಗಳ ಹೆಸರನ್ನು ಬದಲಾವಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕ್ಯಾಡ್ಬರಿ ಬದಲಾಗಿ ನೂತನ ಹೆಸರು ಇಡಲಾಗಿದೆ. ಹೀಗಾಗಿ ಡೈರಿ ಮಿಲ್ಕ್, 5 ಸ್ಟಾರ್, ಗೆಮ್ಯ್, ಬಾರ್ನ್ವಿಲ್, ಪರ್ಕ್, ಸೆಲೆಬ್ರೇಷನ್, ಚಾಕೊಲೈರ್ಸ್, ಹಾಲ್ಸ್, ಬೌರ್ನ್ವೀಟಾ, ಟ್ಯಾಂಗ್ ಹಾಗೂ ಇನ್ನು ಮುಂದೆ ಮಾಂಡೆಲ್ಜ್ ಇಂಡಿಯಾ ಫುಡ್ ಲಿ. ಸಂಸ್ಥೆಯ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮನು ಆನಂದ್ ತಿಳಿಸಿದ್ದಾರೆ.
ಏರ್ಟೆಲ್ ನೈಟ್ಸ್ಟೋರ್ ಪ್ಲ್ಯಾನ್
ರಾತ್ರಿವೇಳೆ ಚಾಟಿಂಗ್ನಲ್ಲಿ ತೊಡಗಿರುವವರು ಹಾಗೂ ಸದಾ ಇಂಟರ್ನೆಟ್ ಉಪಯೋಗ ಮಾಡುವರಿಗಾಗಿ ಏರ್ಟೆಲ್ ನೈಟ್ಸ್ಟೋರ್ ಎಂಬ ವಿಶೇಷ ಇಂಟರ್ನೆಟ್ ಟ್ಯಾರಿಫ್ ಪ್ಲ್ಯಾನ್ ಪರಿಚಯಿಸಿದೆ. ಈ ಮೂಲಕ ಗ್ರಾಹಕರು ರಾತ್ರಿ ವೇಳೆಯ ಕರೆ ಹಾಗೂ ರಾತ್ರಿ ವೇಳೆಯಲ್ಲಿ ಇಂಟರ್ನೆಟ್ ಬಳಕೆಯಲ್ಲಿ ಮಧ್ಯರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ವಿಶೇಷ ಕೊಡುಗೆ ಪಡೆದುಕೊಳ್ಳಬಹುದು. 3ಜಿ, 2ಜಿ ಹಾಗೂ ಏರ್ಟೆಲ್ನಿಂದ ಏರ್ಟೆಲ್ ಸ್ಥಳೀಯ ಕರೆಗಳ ಮೇಲಿನ ವಿಶೇಷಗಳಿಗೆ 129ಗೆ ಕರೆಮಾಡಬಹುದು ಅಥವಾ m.airtel.in/night ಗೆ ಭೇಟಿ ನೀಡಬಹುದು.
ಆನ್ಲೈನ್ ಟರ್ಮ್ ರಿಲಯನ್ಸ್ನ ನೂತನ ವಿಮೆ
'ರಿಲಯನ್ಸ್ ಆನ್ಲೈನ್ ಟರ್ಮ್' ಯೋಜನೆ ರಿಲಯನ್ಸ್ ಜೀವ ವಿಮೆ 'ರಿಲಯನ್ಸ್ ಆನ್ಲೈನ್ ಟರ್ಮ್' ಯೋಜನೆಯನ್ನು ಪ್ರಸ್ತುತಪಡಿಸಿದೆ. ಈ ವಿಮೆ ದೈನಂದಿನ ಕನಿಷ್ಠ 15ಕ್ಕೆ ಒಟ್ಟು 1 ಕೋಟಿ ವ್ಯಾಪ್ತಿಯನ್ನು ನೀಡುತ್ತದೆ. ರಿಲಯನ್ಸ್ ಆನ್ಲೈನ್ ಅನುಪಮ ಪ್ರಸ್ತಾವನೆಯೆಂದರೆ ಅದು 75 ವರ್ಷಗಳವರೆಗೆ ಹೆಚ್ಚು ಜೀವ ವಿಮೆಯನ್ನು ಆನ್ಲೈನ್ ಪ್ರಕ್ರಿಯೆಯಲ್ಲಿ ನೀಡುತ್ತದೆ ಹಾಗೂ ಮನೆಯಲ್ಲೇ ಔಷಧೋಪಚಾರ ಪರೀಕ್ಷೆಯಂತಹ ಅನುಕೂಲವನ್ನು ನೀಡುತ್ತದೆ. ಗ್ರಾಹಕನಿಗೆ ಕನಿಷ್ಠ 18ವರ್ಷ ಗರಿಷ್ಠ 55 ವರ್ಷ ವಯಸ್ಸಾಗಿರಬೇಕು ಮತ್ತು ವಿಮಾ ಅವಧಿ 10 ವರ್ಷ ಮತ್ತು ಗರಿಷ್ಠ 35ವರ್ಷ ವರ್ಷದಾಗಿರಬೇಕು. ಗರಿಷ್ಠ ಮೆಚ್ಯುರಿಟಿ ವಯಸ್ಸು 75 ವರ್ಷಗಳಾಗಿರಬೇಕು. ರಿಲಯನ್ಸ್ ಆನ್ಲೈನ್ ಟರ್ಮ್ ಧೂಮಪಾನಿಯಲ್ಲದ ಒಬ್ಬ 25ವರ್ಷ ಯುವಕನಿಗೆ ಮಾಸಿಕ 450ರಂತೆ 15ವರ್ಷಗಳ ಅವಧಿ ನೀಡುತ್ತದೆ. ಆನ್ಲೈನ್ ಜೀವ ವಿಮೆ ಅತಿ ಕಡಿಮೆ ವಾರ್ಷಿಕ ಪ್ರೀಮಿಯಮ್ 3,500ರಲ್ಲಿ ದೊರೆಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

