ಆ್ಯಪ್ಸ್

ಇ-ರೈಲು
ರೈಲು ಯಾತ್ರೆ ಮಾಡುವಾಗ ರೈಲಿನ ಸಮಯ ಅರಿಯವ ಬಗ್ಗೆ ಟೆನ್ಷನ್ ಬೇಡ. ರೈಲಿನ ಸಮಯ, ಪಿಎನ್ಆರ್ ಸ್ಟೇಟಸ್, ಪ್ರಯಾಣ ದರ, ರೈಲುಗಳ ಬಗ್ಗೆ ಇರುವ ಎಲ್ಲ ಮಾಹಿತಿಗಳನ್ನು ಪಡೆಯಲು ಈ ಆ್ಯಪ್ ಸಹಾಯಕ.
ಪೇ ಟಿಎಂ
ಅಕೌಂಟ್ನಲ್ಲಿ ದುಡ್ಡಿದೆ. ಇಂಟರ್ನೆಟ್ ಬ್ಯಾಕಿಂಗ್ ಸಹ ಇದೆ. ಹೀಗಿರುವಾಗ ಡಿಟಿಎಚ್ ಕನೆಕ್ಷನ್ ಬಿಲ್ ಹೇಗೆ ಪಾವತಿಸುವುದೆಂಬ ಚಿಂತೆಯೇ? ಹಾಗಾದರೆ ಪೇ ಟಿಎಂ ಆ್ಯಪ್ ಮೂಲಕ ಈಸಿ ಆನ್ಲೈನ್ ರೀಚಾರ್ಜ್ ಮಾಡಬಹುದು. ಮೊಬೈಲ್, ಇಂಟರ್ನೆಟ್, ಡಿಟಿಎಚ್ ಬಿಲ್ ಪಾವತಿ ಅಷ್ಟೇ ಯಾಕೆ ಈ ಆ್ಯಪ್ ಮೂಲಕ ಬಸ್ ಟಿಕೆಟ್ ಕೂಡಾ ಬುಕ್ ಮಾಡಬಹುದು.
ಮೈ ಪ್ರೆಗ್ನೆನ್ಸಿ ಟುಡೇ
ಗರ್ಭಿಣಿಯರು ಕೊನೆಯ ಬಾರಿಗೆ ಚಂಪ್ಸ್ ಆಗಿರೋ ದಿನವನ್ನು ನೀಡಿದರೆ ಪ್ರಸವ ದಿನ ಯಾವತ್ತು? ಎಂಬುದನ್ನು ಈ ಆ್ಯಪ್ ಮೂಲಕ ತಿಳಿಯಬಹುದು. ಮಾತ್ರವಲ್ಲ ಪ್ರತಿವಾರದ ಮಗುವಿನ ಬೆಳವಣಿಗೆ ವಿವರಿಸುವ, ಗರ್ಭಿಣಿಯರ ಆಹಾರ ವಿಧಾನ ಕ್ರಮಗಳ ಕುರಿತ ವಿವರಗಳೂ ಇಲ್ಲಿ ಲಭ್ಯ.
ಪೀರಿಯಡ್ ಕ್ಯಾಲೆಂಡರ್/ ಟ್ರ್ಯಾಕರ್
ಮುಟ್ಟಿನ ದಿನದ ಬಗ್ಗೆ ಚಿಂತೆಯೆ? ಮುಂದಿನ ಡೇಟ್ ಯಾವಾಗ ಹಾಗೂ ಮುಂದಿನ ಓವುಲೇಷನ್ ದಿನಗಳನ್ನು ಅರಿಯಲು ಸಹಾಯ ಮಾಡುತ್ತದೆ ಈ ಆ್ಯಪ್. ಯಾವಾಗ ಗರ್ಭ ಧರಿಸಬೇಕು ಎಂಬುದನ್ನು ಸುಲಭವಾಗಿ ಅರಿಯಲು ಇದು ಸಹಾಯಕ.
ಸ್ಮಾರ್ಟ್ ಲಾಕ್
ಮೊಬೈಲ್ನಲ್ಲಿ ಸೇವ್ ಮಾಡಿರುವ ಫೋಟೊ, ವೀಡಿಯೊ, ಇನ್ಬಾಕ್ಸ್ ಎಲ್ಲವನ್ನೂ ಲಾಕ್ ಮಾಡಿಡಲು ಈ ಸ್ಮಾರ್ಟ್ ಲಾಕ್ ಆ್ಯಪ್ ಬಳಸಲಾಗುತ್ತದೆ. ಕೇವಲ ನಾಲ್ಕು ಸಂಖ್ಯೆಗಳ ಪಾಸ್ವರ್ಡ್ ಸೆಟ್ ಮಾಡಿದರೆ ಸಾಕು, ನಿಮ್ಮ ಮೊಬೈಲ್ನಲ್ಲಿರುವ ಡಾಟಾಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು.
ಫಸ್ಟ್ ಏಡ್- ಅಮೆರಿಕನ್ ರೆಡ್ಕ್ರಾಸ್
ಅಪಘಾತ ಸಂಭವಿಸಿದರೆ ತಕ್ಷಣ ಯಾವ ರೀತಿಯ ಪ್ರಥಮ ಚಿಕಿತ್ಸೆ ನೀಡಬೇಕೆಂಬ ಮಾಹಿತಿ ಈ ಆ್ಯಪ್ನಲ್ಲಿದೆ. ಅದಲ್ಲದೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕೆಂಬ ಮಾಹಿತಿಯ ವಿಡಿಯೊ ಕೂಡಾ ಇಲ್ಲಿದೆ.
ಮ್ಯಾಪ್ ಮೈ ಇಂಡಿಯಾ
ಎಲ್ಲಿಯೂ ದಾರಿ ತಪ್ಪದಂತೆ, ನೀವು ಹೋಗಲುದ್ದೇಶಿಸಿರುವ ಸ್ಥಳದ ಬಗ್ಗೆ ಈ ಆ್ಯಪ್ ಮಾಹಿತಿ ನೀಡುತ್ತದೆ. ಭಾರತದ ಗಲ್ಲಿ ಗಲ್ಲಿಗಳ ವಿವರಗಳೂ ಮ್ಯಾಪ್ ಮೈ ಇಂಡಿಯಾ ಆ್ಯಪ್ನಲ್ಲಿ ಲಭ್ಯ.
ಎಚ್ಚೆತ್ತ ವಿಂಡೋಸ್!
ವಿಂಡೋಸ್ ಫೋನ್ ಬಿಡುಗಡೆ ಮಾಡಿ ನಿದ್ದೆ ಮಾಡುತ್ತಿದ್ದ ಮೈಕ್ರೋಸಾಫ್ಟ್ ಸಂಸ್ಥೆಯು ಎಚ್ಚೆತ್ತುಕೊಂಡ ಹಾಗೆ ಅನಿಸುತ್ತಿದೆ. ಆ್ಯಪಲ್ ಸಿರಿ ಹಾಗೂ ಆ್ಯಂಡ್ರಾಯ್ಡ್ ಗೂಗಲ್ ನೌ ಅಪ್ಲಿಕೇಷನ್ ಮಾದರಿಯಲ್ಲಿಯೇ ಕಾರ್ಟನಾ ಹೊರತರಲು ಮೈಕ್ರೋಸಾಫ್ಟ್ ಸಿದ್ಧತೆ ನಡೆಸಿದೆ. ಮೈಕ್ರೋಸಾಫ್ಟ್ನ ಸರ್ಚ್ ಎಂಜಿನ್ ಬಿಂಗ್ ನೆರವಿನೊಂದಿಗೆ ಇದು ಕಾರ್ಯನಿರ್ವಹಿಸಲಿದೆ. ಕಾರ್ಟನಾ ಅಪ್ಲಿಕೇಷನ್ ಯಥಾವತ್ ಸಿರಿ ಹಾಗೂ ಗೂಗಲ್ ನೌನಂತೆಯೇ ಕಾರ್ಯನಿರ್ವಹಿಸಲಿದೆ. ವಿಂಡೋಸ್ 8.1ರಲ್ಲಿಯೇ ಕೆಲ ಬದಲಾವಣೆ ತಂದು ಮಾರ್ಚ್ ತಿಂಗಳಲ್ಲಿ ಅಪ್ಡೇಟ್ ಪ್ಯಾಕೇಜ್ನ್ನು ವಿಂಡೋಸ್ ಬಿಡುತ್ತಿದೆ. ಇದರಲ್ಲಿ ಕಾರ್ಟನಾ ಅಪ್ಲಿಕೇಷನ್ ಪ್ರಮುಖವಾದದ್ದು.
- ಕೆ. ರಜನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


