ಕಳೆದ ಹಲವು ವರ್ಷಗಳಿಂದ ಮಂಕಾಗಿದ್ದ ಮ್ಯೂಚ್ಯುಯಲ್ ಫಂಡ್ ಮಾರುಕಟ್ಟೆ ಈಗ ಕೊಂಚ ಚೇತರಿಕೆ ಕಾಣುತ್ತಿದೆ. ಅದಕ್ಕೆ ಪೂರಕವಾಗಿ ಹಲವಾರು ಮ್ಯೂಚ್ಯುಯಲ್ ಫಂಡ್ಗಳು ಮಾರುಕಟ್ಟೆಯಲ್ಲಿ ಇವೆ. ಖಾಸಗಿ ರಂಗದ ಅಗ್ರಗಣ್ಯ ನೇತಾರ ಐಸಿಐಸಿಐ ಪ್ರುಡೆನ್ಶಿಯಲ್ ಮ್ಯುಚ್ಯುಯಲ್ ಫಂಡ್ ಜ.20ರಿಂದ ಫೆ.7ರ ವರೆಗೆ ಐಸಿಐಸಿಐ ಪ್ರುಡೆನ್ಶಿಯಲ್ ಈಕ್ವಿಟಿ ಸೇವಿಂಗ್ಸ್ ಫಂಡ್- ಸೀರಿಸ್ 1 ಎಂಬ ಹೊಸತಾದ ಯೋಜನೆಯೊಂದನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರ 2012ರ ಸೆಪ್ಟೆಂಬರ್ನಲ್ಲಿ ಘೋಷಣೆ ಮಾಡಿರುವ ರಾಜೀವ್ ಗಾಂಧಿ ಈಕ್ವಿಟಿ ಉಳಿತಾಯ ಯೋಜನೆ (ಆರ್ಜಿಇಎಸ್ಎಸ್) ಅಡಿಯಲ್ಲಿಯೂ ಈ ಮ್ಯೂಚ್ಯುಯಲ್ ಫಂಡ್ ಕೆಲಸ ಮಾಡುತ್ತದೆ.
ಯೋಜನೆ ವೈಶಿಷ್ಟ್ಯ
ಇದು ಕ್ಲೋಸ್ ಎಂಡೆಡ್ ಈಕ್ವಿಟಿ ಯೋಜನೆ
ಅರ್ಹ ಮಾರುಕಟ್ಟೆಯಿಂದ ಸೂಕ್ತವಾದ ಬಂಡವಾಳ ಪಡೆದುಕೊಳ್ಳುವಿಕೆ
ಫಂಡ್ನಿಂದ ಒಟ್ಟಾದ ಮೊತ್ತವನ್ನು ಮಾರುಕಟ್ಟೆಯ ಇತರ ಯೋಜನೆಗಳಲ್ಲಿಯೂ ಹೂಡಿಕೆ ಮಾಡಲು ಅವಕಾಶ ಉಂಟು.
ಅದು ಹೆಚ್ಚಿನ ಪ್ರಮಾಣದಲ್ಲಿ ವೈವಿಧ್ಯಮಯವಾಗಿದೆ. ಆರ್ಇಎಸ್ಎಸ್ ಅಡಿಯಲ್ಲಿ ಯೋಜನೆ ತೆರಿಗೆ ವಿನಾಯಿತಿ ಉಂಟು.
ಲಾಕಿಂಗ್ ಅವಧಿ
ಕನಿಷ್ಠ ಮೂರು ವರ್ಷ
ಲಾಭ ಹೇಗೆ?
ಮಾರುಕಟ್ಟೆಯಲ್ಲಿ ಸಿಗುವ ಲಾಭದ ಮೇಲೆ ಮ್ಯೂಚ್ಯುಯಲ್ ಫಂಡ್ ಗ್ರಾಹಕರಿಗೆ ಡಿವಿಡೆಂಡ್ ಘೋಷಣೆ ಮಾಡಲಾಗುತ್ತದೆ.
ಒಂದು ವೇಳೆ ಮಾರುಕಟ್ಟೆ ಉತ್ತಮವಾಗಿದ್ದರೆ ವರ್ಷಕ್ಕೆ ಮೂರು ಡಿವಿಡೆಂಡ್ ಸಿಗುವ ಅವಕಾಶವೂ ಇದೆ. ಕನಿಷ್ಠ ಪಕ್ಷ ಒಂದು ಡಿವಿಡೆಂಡ್ ಆದರೂ ಸಿಗುತ್ತದೆ.
ಯಾಕೆ ಪ್ರಾಮುಖ್ಯತೆ?
ಯೋಜನೆಯ ಫಂಡ್ ಮ್ಯಾನೇಜರ್ ಮನೀಶ್ ಗುನ್ವಾನಿ ಹೇಳುವ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಚಿನ್ನ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು ಮಧ್ಯಮ ವರ್ಗದವರು ಕೊಂಚ ಯೋಚನೆ ಮಾಡುತ್ತಾರೆ. ಏಕೆಂದರೆ ಈ ಕ್ಷೇತ್ರಗಳು ಅತ್ಯಂತ ದುಬಾರಿ ಎಂಬ ಮನೋಭಾವನೆ ಈ ವರ್ಗದವರಲ್ಲಿದೆ. ಅದಕ್ಕಾಗಿ ಅವರು ಅತ್ಯಂತ ಸುರಕ್ಷಿತ ವಾತಾವರಣ ಉಂಟಾಗಬೇಕು ಎಂದು ಅವರು ಅಭಿಪ್ರಾಯಪಡುತ್ತಾರೆ.
2008ರ ಹಣಕಾಸಿನ ಬಿಕ್ಕಟ್ಟು ಕೊಂಚ ಸುಧಾರಣೆಯಾಗಿದೆ. ಬಿಕ್ಕಟ್ಟಿನ ಮೊದಲು ಮ್ಯೂಚ್ಯುಯಲ್ ಫಂಡ್ ಕ್ಷೇತ್ರದಲ್ಲಿ ಇದ್ದಷ್ಟು ಹೆಚ್ಚಿನ ಲಾಭ ಸದ್ಯ ಕಾಣುತ್ತಿಲ್ಲ. ಆದರೆ ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವುದು ಅವರ ವಾದ. ಸದ್ಯ ಪರಿಸ್ಥಿತಿ ಉತ್ತಮವಾಗಿದ್ದರೂ ಮುಂದಿನ ಚುನಾವಣೆ ಆಧಾರದಲ್ಲಿ ದೇಶದಲ್ಲಿ ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹೂಡಿಕೆ ಆಗಬಹುದು. ಅದಕ್ಕೆ ಮುಖ್ಯವಾಗಿ ಸುಭದ್ರ ಸರ್ಕಾರ ರಚನೆಯಾಗಿ ಆರ್ಥಿಕ ಕ್ಷೇತ್ರದಲ್ಲಿ ಹೂಡಿಕೆ ಆಗಲಿ ಎನ್ನುವುದು ಗುವಾನಿ ಅವರ ಆಶಾವಾದ.
ಯೋಜನೆ ಅವಧಿ: ಜ.20- ಫೆ.7
ಕನಿಷ್ಠ ಹೂಡಿಕೆ: 5,000
ಮಾಹಿತಿಗೆ: http://www.icicipruamc.com
= ಸದಾಶಿವ ಕೆ.
khandige29@gmail.com