ಸೇವೆಗಳು ಸಾರ್ ಸೇವೆಗಳು

ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್, ವಿಷೇಷ ಮಳಿಗೆಗಳು ಮತ್ತು ಆನ್ಲೈನ್ ಶಾಪ್ಗಳು ನೀಡುವ ಕಸ್ಟಮರ್ ಲಾಯಲ್ಟಿ ಸರ್ವೀಸ್ಗಳಲ್ಲಿ ಮೆಂಬರ್ಶಿಪ್ ಕಾರ್ಡ್ ಒಂದು.
ಪ್ರತಿ ದಿನ ಬೆಳಗಾದರೆ ದಿನಸಿ ಗಾಗಿ ಶೆಟ್ಟರ ಅಂಗಡಿಗೆ ಓಡುವುದು, ದಿನಸಿ ಬೆಲೆಗಳಿಗೆ ಚೌಕಾಸಿ ಮಾಡುವುದು, ಹಬ್ಬ ಬಂತೆಂದರೆ ಬಟ್ಟೆ ಅಂಗಡಿಗಳಿಗೆ ಲಗ್ಗೆ ಹಾಕುವುದು, ಡಿಸ್ಕೌಂಟ್ಗಾಗಿ ಮಾಲಿಕರನ್ನು ಗೋಗರೆಯುವುದು ಇವುಗಳೆಲ್ಲವನ್ನೂ ಈಗ ನಾವು ನೋಡುವುದು ಕಡಿಮೆ. ಈಗ ಶೆಟ್ಟರ ಅಂಗಡಿ ಸ್ಥಾನವನ್ನು ಸೂಪರ್ ಮಾರ್ಕೆಟ್ಗಳು, ಮಾಲ್ಗಳು ಆಕ್ರಮಿಸಿಕೊಂಡಿವೆ.
ಶೆಟ್ಟರ ಅಂಗಡಿಗಳಲ್ಲಾದರೆ ನಮ್ಮ ಅವಶ್ಯಕತೆ ನೋಡಿ ಅವರೇ ಡಿಸ್ಕೌಂಟ್ ನೀಡುತ್ತಿದ್ದರು. ಹಬ್ಬಗಳಲ್ಲಿ ವಿಶೇಷ ಆಫರ್ ನೀಡುವುದು, ಒಂದು ವಸ್ತು ತೆಗೆದುಕೊಂಡರೆ ಇನ್ನೊಂದು ಉಚಿತವಾಗಿ ನೀಡುವುದು ಈ ರೀತಿಯ ಕೆಲ ಸಣ್ಣ ಮಾರ್ಕೆಟಿಂಗ್ ಐಡಿಯಾ ಸಹ ಉಪಯೋಗಿಸುತ್ತಿದ್ದರು. ಅವರು ನೀಡದಿದ್ದರೂ ಚೌಕಾಸಿ ಮಾಡಿ ಕೇಳಿ ಪಡೆದುಕೊಳ್ಳುವ ಸ್ವಾತಂತ್ರ್ಯ ಅಲ್ಲಿರುತ್ತಿತ್ತು.
ಶಾಪಿಂಗ್ ಮಾಲ್ಗಳಲ್ಲಿ ಈ ಸೌಲಭ್ಯ ಇಲ್ಲವಲ್ಲ ಎಂದು ಬೇಸರಿಸುವ ಅಗತ್ಯವಿಲ್ಲ. ಗ್ರಾಹಕರನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ತಯಾರಾಗಿರುವುದೇ ಮೆಂಬರ್ಶಿಪ್ ಕಾರ್ಡ್. ಇದು ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್, ವಿಷೇಷ ಮಳಿಗೆಗಳು ಮತ್ತು ಆನ್ಲೈನ್ ಶಾಪ್ಗಳು ನೀಡುವ ಕಸ್ಟಮರ್ ಲಾಯಲ್ಟಿ ಸರ್ವೀಸ್ಗಳಲ್ಲಿ (ಗ್ರಾಹಕ ನಿಷ್ಠಾ ಸೇವೆಗಳು) ಒಂದು. ಈ ಲಾಯಲ್ಟಿ ಸೇವೆಗಳು ಹೇಗೆ ಲಾಭದಾಯಕ? ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್, ವಿಶೇಷ ಮಳಿಗೆಗಳಲ್ಲಿ ನೀವು ಮಾಡಿದ ಪ್ರತಿ ವ್ಯವಹಾರಕ್ಕೂ ಅಂಕಗಳು ಲಭ್ಯವಾಗುತ್ತವೆ. ಈ ರೀತಿ ಪಡೆದ ಅಂಕಗಳಿಂದ ಮುಂದಿನ ಬಾರಿಯ ನಿಮ್ಮ ಖರೀದಿಯ ದರಗಳಲ್ಲಿ ರಿಯಾಯತಿ ಪಡೆಯಬಹುದು. ನೀವು ವ್ಯವಹರಿಸುವ ಹಣದ ಮೊತ್ತದ ಆಧಾರದ ಮೇಲೆ ಈ ಅಂಕಗಳು ನಿಗದಿಯಾಗುತ್ತವೆ. ಹೆಚ್ಚು ಶಾಪಿಂಗ್ ಮಾಡಿದಷ್ಟು ಹೆಚ್ಚು ರಿಯಾಯತಿ.
ಲಾಯಲ್ಟಿ ಸೇವೆಗಳಿಂದ ಇನ್ನೂ ಒಂದು ಲಾಭವಿದೆ. ಅದೇನೆಂದರೆ ಮಲ್ಟಿ ಬ್ರಾಂಡ್ ಲಾಯಲ್ಟಿ ಪ್ರೋಗ್ರಾಂ. ನೀವು ಪಡೆಯುವ ಮೆಂಬರ್ಶಿಪ್ ಕಾರ್ಡ್ನಿಂದ ವಿವಿಧ ಬ್ರ್ಯಾಂಡ್ನ ಬೇರೆ ಬೇರೆ ವಸ್ತುಗಳ ಮೇಲೆ ರಿಯಾಯತಿ ಪಡೆಯಬಹುದು. ಉದಾಹರಣೆಗೆ ನಿಮ್ಮ ಬಳಿ ಪೇ ಬ್ಯಾಕ್ ಕಾರ್ಡ್ ಇದ್ದರೆ ಅದನ್ನು ಬಿಗ್ಬಜಾರ್, ಫುಡ್ಬಜಾರ್, ಪ್ಯಾಂಟಲೂನ್ಸ್, ಬ್ರ್ಯಾಂಡ್ ಫ್ಯಾಕ್ಟರಿ, ಈ ಜೋನ್, ಐಸಿಐಸಿಐ ಬ್ಯಾಂಕ್, ಎಚ್ಪಿ ಪೆಟ್ರೋಲ್ ಬಂಕ್ ಹೀಗೆ ಅನೇಕ ಕಡೆ ವ್ಯವಹಾರ ನಡೆಸಿ ಅಂಕ ಪಡೆದುಕೊಳ್ಳಬಹುದು. ನಿಮಗೆ ಬೇಕಾದಾಗ ಅಂಕಗಳನ್ನು ಬಳಸಿಕೊಳ್ಳಬಹುದು. ಇದೊಂದು ರೀತಿ ಓಲ್ಡ್ ವೈನ್ ಇನ್ ನ್ಯೂ ಬಾಟಲ್. ಮೊದಲಿನ ಅಂಗಡಿಗಳ ಡಿಸ್ಕೌಂಟ್ ಮತ್ತು ಆಫರ್ಗಳ ಆಧುನಿಕ ಮತ್ತು ಅಪ್ಡೇಟೆಡ್ ಗ್ರೂಪ್.
ಆನ್ಲೈನ್ ಶಾಪಿಂಗ್ನಲ್ಲೂ ಸಹ ಈ ವ್ಯವಸ್ಥೆ ಲಭ್ಯವಿದೆ. ಶಾಪಿಂಗ್ ಸೌಟ್ನಲ್ಲಿ ಅಕೌಂಟ್ ಕ್ರಿಯೇಟ್ ಮಾಡುವುದರ ಮೂಲಕ ನೀವು ಪ್ರತಿ ಆಡರ್ನ ಮೇಲೆ ಅಂಕಗಳನ್ನು ಪಡೆಯಬಹುದು. ಮತ್ತು ನಿಮಗೆ ಬೇಕಾದಾಗ ಅಕೌಂಟ್ನಲ್ಲಿರುವ ಅಂಕಗಳನ್ನು ಬಳಸಿಕೊಳ್ಳಬಹುದು. ಇಂದು ಬೆಂಗಳೂರು, ಕಲ್ಕತ್ತಾ, ಮುಂಬೈನಂತ ಮೆಟ್ರೋ ಸಿಟಿಗಳಲ್ಲಿ ಫ್ಯಾಷನ್ (ಉಡುಗೆ-ತೊಡುಗೆ), ಎಲೆಕ್ಟ್ರಾನಿಕ್ ವಸ್ತುಗಳು ದಿನಸಿ ಮತ್ತು ಫರ್ನಿಚರ್ಗಳಿಗಾಗಿ ಈ ರೀತಿಯ ಆಧುನಿಕ ಮಾರುಕಟ್ಟೆಯ ಕಡೆಗೆ ಗ್ರಾಹಕರು ಹೆಚ್ಚಾಗಿ ಬರುತ್ತಿದ್ದಾರೆ. ಆನ್ಲೈನ್ ಶಾಪಿಂಗ್ ಇಂದು ಸಣ್ಣ ಪ್ರಮಾಣದ ನಗರಗಳಿಗೂ ಕಾಲಿಟ್ಟಿದೆ. ಒಟ್ಟಿನಲ್ಲಿ ವಿಶಿಷ್ಟ ಆಫರ್ಗಳಿಂದ ಗಮನ ಸೆಳೆಯುವ ಈ ಶಾಪಿಂಗ್ ಮಾಲ್ಗಳು ಸಾಂಪ್ರದಾಯಿಕ ಮುಖಾಮುಖಿ ವ್ಯವಹಾರಕ್ಕೆ ಕೊನೆ ಹೇಳುತ್ತಿವೆ. ಆನ್ಲೈನ್ ಶಾಪಿಂಗ್ ಸೆಂಟರ್ಗಳು ವರ್ಚುವಲ್ ಮಾರ್ಕೆಟ್ ಸೃಷ್ಟಿಸುತ್ತಿವೆ.
ವರ್ಚುವಲ್ ಮನಿ ಬ್ಯಾಕ್ ಸಿಸ್ಟಮ್
ಲಾಯಲ್ಟಿ ಸೇವೆಗಳು ನಿಮಗೆ ಕೇವಲ ಪಾಯಿಂಟ್ಗಳನ್ನು ನೀಡಿ ಮುಂದಿನ ಖರೀದಿಗಳಲ್ಲಿ ರಿಯಾಯತಿ ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ನೇರವಾಗಿ ಹಣ ನಿಮ್ಮ ಕೈಗೆ ಸೇರುವಂತಾದರೆ? ಹೌದು. ಪೆನ್ನಿಫುಲ್ ವೆಬ್ಸೈಟ್ಗಳು ನಿಮಗೆ ಈ ಸೌಲಭ್ಯವನ್ನೂ ನೀಡುತ್ತದೆ. ನೀವು ಮಾಡುವ ಪ್ರತೀ ಶಾಪಿಂಗ್ ಮೇಲೂ ನಿಗದಿತ ಮೊತ್ತದ ಆಫರ್ಗಳು ನಿಮ್ಮ ಅಕೌಂಟಿಗೆ ಬಂದು ಸೇರುತ್ತದೆ. ನಿಮಗೆ ಬೇಕಾದಾಗ ಹಣ ಬಳಸಿಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದು ಈ ವೆಬ್ಸೈಟ್ ಸೈನ್ಇನ್ ಆಗಿ ಅದರ ಮೂಲಕ ಶಾಪಿಂಗ್ ಮಾಡುವುದು. ಜೊತೆಗೆ ಸೈನ್ಇನ್ ಫ್ರೀಯಾಗಿದೆ. ಇಷ್ಟೆಲ್ಲಾ ಸೌಲಭ್ಯ ನೀಡುವ ವೆಬ್ಸೈಟ್ ಆರಂಭಿಸಿದ್ದು ಬೆಂಗಳೂರಿನ ರವಿತೇಜ ಯದಾಲಮ್. ಆರ್.ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿದ ಇವರ ಆಸಕ್ತಿ ಮಾತ್ರ ಬ್ಯುಸಿನೆಸ್. ಆದ್ದರಿಂದ ಲಕ್ಷಗಟ್ಟಲೆ ಸಂಬಳವಿದ್ದ ಕೆಲಸ ಬಿಟ್ಟು ವೆಬ್ಸೈಟ್ ಆರಂಭಿಸಿದ್ದಾರೆ. 2011 ರಲ್ಲಿ ಆರಂಭವಾದ ವೆಬ್ಸೈಟ್ ಕೇವಲ 50 ಪಾರ್ಟ್ನರ್ಗಳನ್ನು ಹೊಂದಿತ್ತು. ಆದರೆ ಇಂದು 4000 ಬ್ರ್ಯಾಂಡ್ಸ್ ಮತ್ತು ಶಾಪಿಂಗ್ ಸೆಂಟರ್ಗಳು ಇವರ ಪಾರ್ಟ್ನರ್ಗಳಾಗಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಈ ವೆಬ್ಸೈಟ್ ಇಂದು ಖ್ಯಾತಿ ಗಳಿಸುತ್ತಿದೆ. ಸುಮಾರು 7 ಕೋಟಿಯಷ್ಟು ವ್ಯವಹಾರ ನಡೆಸುತ್ತಿದೆ.
-ಶಾಲಿನಿ ಭಂಡಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


