ಸ್ವಾದಿಂದ ಲಿಂಗರೀ ಸಾದರ

ಗಿನ್ಜಾ ಇಂಡಸ್ಟ್ರೀಸ್‌ನ ಭಾಗವಾದ ಸ್ವಾ ಈಗ ಮಹಿಳೆಯರ ಲಿಂಗರೀ (ಒಳಉಡುಪು), ನೈಟ್‌ವೇರ್...
ಸ್ವಾದಿಂದ ಲಿಂಗರೀ ಸಾದರ
Updated on

ಗಿನ್ಜಾ ಇಂಡಸ್ಟ್ರೀಸ್‌ನ ಭಾಗವಾದ ಸ್ವಾ ಈಗ ಮಹಿಳೆಯರ ಲಿಂಗರೀ (ಒಳಉಡುಪು), ನೈಟ್‌ವೇರ್ (ರಾತ್ರಿ ಉಡುಪು) ಮತ್ತು ಪಾಶ್ಚಿಮಾತ್ಯ ಉಡುಪುಗಳ ನೂತನ ಶ್ರೇಣಿಯನ್ನು ಅನಾವರಣಗೊಳಿಸಿದೆ. ಈ ಉಡುಪುಗಳ ಶ್ರೇಣಿ ರು. 300ರಿಂದ ರು. 2000 ದರದಲ್ಲಿ ಸಿಗಲಿದೆ. ಮಳಿಗೆಗಳಲ್ಲಿ ಅಲ್ಲದೆ ವೆಬ್ ಪೋರ್ಟಲ್‌ಗಳಲ್ಲಿ ಲಭ್ಯವಿದೆ. ಮಾಹಿತಿಗೆ www.soie.in  ಗೆ ಭೇಟಿ ನೀಡಿ.

ಲೋಟಸ್‌ನ ಕಲರ್ ಕಿಕ್ ಕಾಜಲ್
ಭಾರತದ ಮುಂಚೂಣಿಯ ನೈಸರ್ಗಿಕ ಸೌಂದರ್ಯ ಬ್ರ್ಯಾಂಡ್ ಲೋಟಸ್ ಮೇಕಪ್ ಈಗ ಶೇ.100ರಷ್ಟು ಸಸ್ಯಜನ್ಯ ಉತ್ಪನ್ನಗಳಿಂದ ತಯಾರಾದ, ದೀರ್ಘ ಬಾಳಿಕೆಯ ವಾಟರ್‌ಪ್ರೂಫ್ ಕಲರ್‌ಕಿಕ್ ಕಾಜಲ್ ಅನ್ನು ಪರಿಚಯಿಸುತ್ತಿದೆ. ಬಾದಾಮಿ ತೈಲದಿಂದ ಸಮೃದ್ಧವಾದ ಕಲರ್ ಕಿಕ್ ಕಾಜಲ್, 8 ಗಂಟೆ ವರೆಗೆ ಕರಗದೆ, ಹಾಳಾಗದೆ ಉಳಿಯುತ್ತದೆ. ದರ ರು. 199. ಪ್ರಮುಖ ಸೌಂದರ್ಯೋತ್ಪನ್ನ ಮಳಿಗೆಗಳಲ್ಲಿ ಲಭ್ಯ.


ಬೆಂಗಳೂರಿಗೆ ಚ್ಯಾಪ್‌ಸ್ಟಿಕ್
ಅಮೆರಿಕದಲ್ಲಿ ಅತ್ಯಂತ ಬೇಡಿಕೆಯುಳ್ಳ ತುಟಿ ಆರೈಕೆ ಬ್ರ್ಯಾಂಡ್ ಚ್ಯಾಪ್‌ಸ್ಟಿಕ್ ಈಗ ಬೆಂಗಳೂರಿಗೆ ಬಂದಿದೆ.  ಸುಲಭವಾಗಿ ಒದ್ದೆ ಮಾಡಲಾಗದ (ಜಲನಿರೋಧಕ) ಲಿಪಿಡ್ ಸಂಕೀರ್ಣ ಬೇಸ್ ಚ್ಯಾಪ್‌ಸ್ಟಿಕ್‌ನ ವಿಶೇಷ. ನಾಲ್ಕು ವಿವಿಧ ರೂಪಗಳಲ್ಲಿ ಚ್ಯಾಪ್‌ಸ್ಟಿಕ್ ಲಭ್ಯವಿದೆ. ಕ್ಲಾಸಿಕ್ ಚೆರ್ರಿ, ಕ್ಲಾಸಿಕ್ ಸ್ಟ್ರಾಬೆರ್ರಿ, ಕ್ಲಾಸಿಕ್ ಮಿಂಟ್ ಹಾಗೂ ಸುಧಾರಿತ ವಿಂಡ್‌ಶೀಲ್ಡ್ 365. ಬೆಲೆ ರು. 149ರಿಂದ ರು. 209. ಬೆಂಗಳೂರಿನ ಪ್ರಮುಖ ಅಂಗಡಿಗಳಲ್ಲಿ ಲಭ್ಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com