ಚೆನ್ನೈನ ವಿಮೆನ್ಸ್ ಕ್ರಿಶ್ಚಿಯನ್ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ (ಆರ್‌ಸಿ- ಡಬ್ಲ್ಯೂಸಿಸಿ) 'ವಿಶ್ವ ಕ್ಯಾನ್ಸರ್ ದಿನ' ಪ್ರಯುಕ್ತ ಗ್ರೀನ್ ಟ್ರೆಂಡ್ಸ್ ಯೂನಿಸೆಕ್ಸ್ ಹೇರ್ ಆ್ಯಂಡ್ ಸಲೂನ್‌ನ 'ಟ್ಯಾಂಗಲ್ಡ್ ಅಭಿಯಾನ' ನಡೆಯಿತು. ಇದು ಮೊಟ್ಟ ಮೊದಲ ಕೇಶದಾನ ಅಭಿಯಾನ. ಫೆಬ್ರವರಿ 4ರಿಂದ ಮಾರ್ಚ್ 10ರವರೆಗೆ ಬೆಂಗಳೂರು ಹಾಗೂ ಚೆನ್ನೈ ನಗರದಲ್ಲಿನ ಎಲ್ಲ ಗ್ರೀನ್‌ಟ್ರೆಂಡ್ ಸಲೂನ್‌ಗಳಿಂದ ಕೂದಲುಗಳನ್ನು ಸಂಗ್ರಹಿಸಿ 40 ಲಕ್ಷ ರುಪಾಯಿ ಮೌಲ್ಯದ ವಿಗ್‌ಗಳನ್ನು ತಯಾರಿಸಲಾಗಿದೆ. 300 ವಿಗ್‌ಗಳನ್ನು ಅಡ್ಯಾರ್ ಕ್ಯಾನ್ಸರ್ ಸಂಸ್ಥೆಗೆ ದಾನ ಮಾಡಲಾಗಿದೆ.