ಹೊಸ ಯೋಜನೆ ಜಾರಿ
ಕೇರಳದ ಆಲುವಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಫೆಡರಲ್ ಬ್ಯಾಂಕ್ 'ವಿದ್ಯಾ ಗೋಲ್ಡ್' ಎಂಬ ಹೊಸ ಸಾಲದ ಯೋಜನೆ ಜಾರಿ ಮಾಡಿದೆ. ಇದರಿಂದ ಪೋಷಕರ ಮತ್ತು ವಿದ್ಯಾರ್ಥಿಗಳ ಶಿಕ್ಷಣದ ಖರ್ಚಿನ ಹೊರೆ ಹೊಂದಿಸಲು ಸಹಾಯಕವಾಗಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಹಾಗೂ ಇನ್ನಿತರ ಖರ್ಚುಗಳನ್ನು ಎಲ್‌ಕೆಜಿಯಿಂದ ಪ್ರೌಢ ಶಿಕ್ಷಣದವರೆಗೆ ಹೊಂದಿಸಲು ಸಾಧ್ಯವಾಗುವಂತೆ ಸಿದ್ಧಪಡಿಸಲಾಗಿದೆ. ಈ ಯೋಜನೆಯನ್ನು ಸಾಮಾಜಿಕ ಕಳಕಳಿಯಿಂದ ಬಿಡುಗಡೆ ಮಾಡಿದ್ದು, ಮೂಲ ಪಾಯಿಂಟ್ 200ರಷ್ಟು ಕಡಿಮೆ ಬಡ್ಡಿಗೆ ಸಾಲ ನೀಡುತ್ತದೆ. ಚಿನ್ನದ ಮೇಲಿನ ಸಾಲದ ಬಡ್ಡಿಗಿಂತ ಕಡಿಮೆಯಿದೆ. ಅಂದರೆ ರು. 100ಕ್ಕೆ 99 ಪೈಸೆ ಬಡ್ಡಿ ನಿಗದಿ.
ಷೇರು ವಾಪಸ್
ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್‌ನ ಪಾಲುದಾರ ಸಂಸ್ಥೆಯಾಗಿರುವ ನಾರ್ವೆಸ್ಟ್ ವೆಂಚರ್ಸ್ ಪಾರ್ಟ್ನರ್ಸ್ ಶೇ.2.78ರಷ್ಟು ಷೇರುಗಳನ್ನು ಹಿಂಪಡೆದಿದೆ. ಇದರ ಮೊತ್ತ ರು. 206 ಕೋಟಿ. ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ಗೆ ಸಲ್ಲಿಸಲಾಗಿರುವ ಮಾಹಿತಿ ಪ್ರಕಾರ, ನಾರ್ವೆಸ್ಟ್ ವೆಂಚರ್ ಪಾರ್ಟ್ನರ್ಸ್ ಎಕ್ಸ್ ಎಫ್‌ಐಐ ಮಾರಿಷಸ್ ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್‌ನ 16.50 ಲಕ್ಷ ಷೇರುಗಳನ್ನು ವಸಾತ್ಚ್ ಅಡೈಸರ್ಸ್‌ಗಳಿಗದೆ ಮಾರಲಾಗಿದೆ. ಕಳೆದ ತ್ರೈಮಾಸಿಕ ವರೆಗೆ ನಾರ್ವೆಸ್ಟ್ ವೆಂಚರ್ ಪಾರ್ಟ್ನರ್ಸ್ ಶ್ರೀರಾಮ್‌ನ 38.23 ಲಕ್ಷ ಷೇರುಗಳನ್ನು ಹೊಂದಿದ್ದು, ಎನ್‌ಬಿಎಫ್‌ಸಿಯಲ್ಲಿ ಶೇ.6.45ರಷ್ಟು ಪಾಲುದಾರಿಕೆಯನ್ನು ಹೊಂದಿತ್ತು.
ವರ್ಲ್‌ಪೂಲ್ ಶೇ.10 ಲಾಭದ ಕನಸು
ಗೃಹೋಪಯೋಗಿ ವಸ್ತುಗಳ ಉತ್ಪಾದನಾ ಸಂಸ್ಥೆ ವರ್ಲ್‌ಪೂಲ್ ಕಳೆದ ಹಣಕಾಸು ವರ್ಷಕ್ಕಿಂತ ಈ ಬಾರಿ ಶೇ.10ರಷ್ಟು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದೆ. ಈಗಾಗಲೇ ಮಾರುಕಟ್ಟೆಗೆ ಹಲವು ಹೊಸ ನಮೂನೆಯ ಫ್ರಿಡ್ಜ್, ವಾಷಿಂಗ್ ಮೆಷೀನ್ ಮತ್ತು ಓವೆನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ಇನ್ನೂ 210 ಹೊಸ ನಮೂನೆಯ ವಸ್ತುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದಕ್ಕಾಗಿ ನಾಲ್ಕು ವರ್ಷಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರು. 500 ಕೋಟಿ ತೊಡಗಿಸಿದ್ದಾಗಿ ಸಂಸ್ಥೆ ಹೇಳಿಕೊಂಡಿದೆ.
ಅಲಹಾಬಾದ್ ಬ್ಯಾಂಕ್ ಲಾಭ ಹೆಚ್ಚಳ
ಕೇಂದ್ರ ಸರ್ಕಾರಿ ಸ್ವಾಮ್ಯದ ಅಲಹಾಬಾದ್ ಬ್ಯಾಂಕ್ ಶೇ.25ರಷ್ಟು ಲಾಭವನ್ನು ಪ್ರಕಟಿಸಿದೆ. ಏರುತ್ತಿರುವ ಬಡ್ಡಿದರದ ನಡುವೆಯೂ ಆದಾಯ ಮತ್ತು ಲಾಭ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಳೆದ ತ್ರೈಮಾಸಿಕ ಅವಧಿ ಅಂದರೆ ಮಾ.31ಕ್ಕೆ ಕೊನೆಗೊಂಡಂತೆ ರು. 158 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ ರು. 126 ಕೋಟಿ ಲಾಭ ಘೋಷಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

