ವಾಣಿಜ್ಯ

ಟ್ರೈನಿಗೆ ಬರುತ್ತೆ ಊಟ!

ಟ್ರೈನಿಗೆ ಬರುತ್ತೆ ಊಟ!
Published On :

ದೂರದ ಸ್ಥಳಗಳಿಗೆ ರೈಲಿನಲ್ಲಿ ಪ್ರಯಾಣ ಮಾಡಲಿದ್ದೀರಾ? ಈ ವೇಳೆ ನಿಮಗಿಷ್ಟವಾದ ಆಹಾರ ಸೇವಿಸಬೇಕಾ? ಹಾಗಿದ್ದರೆ ಟ್ರಾವೆಲ್ ಖಾನಾ ಮತ್ತು ಟೆಕ್ಸ್ಟ್ ವೆಬ್ ಮೂಲಕ ಎಸ್‌ಎಂಎಸ್ ಕಳುಹಿಸಿ ಆಹಾರ ಕಾಯ್ದಿರಿಸಬಹುದು. ಈ ಜಾಲತಾಣವು ಮೊಬೈಲ್ ಮೂಲಕ ಎಲ್ಲ ಬಳಕೆದಾರರನ್ನು ತಲುಪುವ ಉದ್ದೇಶವನ್ನಿಟ್ಟುಕೊಂಡಿದೆ.

ರೈಲಿನಲ್ಲಿ ಪಯಣಿಸುವವರು ದಾರಿಯುದ್ದಕ್ಕೂ ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಿಕೊಂಡು ಪ್ರಯಾಣವನ್ನು ಮತ್ತಷ್ಟು ಸುಖಕರವನ್ನಾಗಿಸಬಹುದು. ಇದುವರೆಗೆ ಇಂಟರ್‌ನೆಟ್ ಸಂಪರ್ಕ ಇರುವವರಿಗೆ ಮಾತ್ರ ಆಹಾರ ಕಾಯ್ದಿರಿಸುವ ವ್ಯವಸ್ಥೆ ಸಿಗುತ್ತಿತ್ತು.

ಪ್ರಸ್ತುತ ಎಸ್‌ಎಂಎಸ್ ಕಳುಹಿಸುವ ಮೂಲಕ ಆಹಾರವನ್ನು ಕಾಯ್ದಿರಿಸಿಕೊಳ್ಳಬಹುದು. ಈ ಆ್ಯಪ್‌ನ ಪ್ರಯೋಜನ ಪಡೆಯಬೇಕಾದರೆ TravelKhanaದ 51115ಕ್ಕೆ ಎಸ್‌ಎಂಎಸ್ ಮಾಡಬಹುದಾಗಿದೆ.

ಇಲ್ಲಿಯ ವಿಶೇಷತೆ ಎಂದರೆ ಪಿಎನ್‌ಆರ್ ಸಂಖ್ಯೆಯನ್ನು ನೀಡಿ ಆಹಾರವನ್ನು ಕಾಯ್ದಿರಿಸಬಹುದು.

ಮಾತ್ರವಲ್ಲದೆ ಗ್ರಾಹಕರು ಕುಳಿತಲ್ಲಿಗೇ ಅದನ್ನು ಪೂರೈಸಲಾಗುತ್ತದೆ. ಪ್ರಮುಖ ರೇಲ್ವೆ ನಿಲ್ದಾಣಗಳಲ್ಲಿರುವ ರೆಸ್ಟೋರೆಂಟ್‌ಗಳಲ್ಲಿರುವ ಆಹಾರವನ್ನು ಆಯ್ಕೆ ಮಾಡಿ ಬುಕ್ ಮಾಡಲೂ ಇಲ್ಲಿ ವ್ಯವಸ್ಥೆ ಇದೆ.

ಏರ್‌ಟೆಲ್, ಟಾಟಾ ಡೊಕೊಮೆ, ಐಡಿಯಾದಂಥ ಪ್ರಮುಖ ಮೊಬೈಲ್ ಸಂಸ್ಥೆಗಳಲ್ಲಿ ಈ ಸೇವೆ ಲಭ್ಯವಿದೆ. ಜತೆಗೆ ದೇಶದ ಒಂದು ಸಾವಿರ ನಗರಗಳು ಮತ್ತು ಪಟ್ಟಣಗಳಲ್ಲಿ ಈ ಸೇವೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ www.travelkhana.com/home ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.