ಮ್ಯಾಜಿಕ್ ಇನ್ ಇಂಡಿಯಾ

ಮೇಕ್ ಇನ್ ಇಂಡಿಯಾ...ಬನ್ನಿ, ಭಾರತದಲ್ಲಿ ಉತ್ಪಾದಿಸಿ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರು ಆ. 15ರಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಅಂಶ. ಆ ಪ್ರಕಾರ ಕಳೆದ ಗುರುವಾರ (ಸೆ.25) ಈ ಯೋಜನೆಗೆ ಚಾಲನೆ ನೀಡಿದರು.
ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಭಾರತೀಯ ಕಾಲಮಾನಕ್ಕೆ ಸಮನಾದ ದೇಶಗಳಲ್ಲಿರುವ ರಾಯಭಾರ ಕಚೇರಿಗಳಲ್ಲಿ ಅದನ್ನು ನೇರಪ್ರಸಾರ ಮಾಡಲಾಯಿತು. ಅದ್ಧೂರಿಯಾಗಿ ಕಾರ್ಯಕ್ರಮವೇನೂ ಉದ್ಘಾಟನೆಯಾಯಿತು. ಮುಂದಿನ ದಿನಗಳಲ್ಲಿ ಅದು ಯಾವ ರೀತಿ ಅನುಷ್ಠಾನವಾಗಲಿದೆ ಎನ್ನುವುದು ಗೊತ್ತಾ? ಅದು ಹೀಗಿದೆ.
25 ಕ್ಷೇತ್ರಗಳು ಕೇಂದ್ರ ಸರ್ಕಾರ 25 ಕ್ಷೇತ್ರಗಳಲ್ಲಿ ನಮ್ಮ ದೇಶ ವಿಶ್ವಕ್ಕೆ ಸವಾಲು ಹಾಕುವಂಥ ಬೆಳವಣಿಗೆ ಸಾಧಿಸಬಹುದೆಂದು ಲೆಕ್ಕಾಚಾರ ಹಾಕಿದೆ.
ಅಟೊಮೊಬೈಲ್ಸ್, ಐಟಿ, ಫಾರ್ಮಾಸ್ಯುಟಿಕಲ್ಸ್, ಜವಳಿ, ಬಂದರು, ನಾಗರಿಕ ವಿಮಾನಯಾನ, ಚರ್ಮೋದ್ಯಮ, ಪ್ರವಾಸೋದ್ಯಮ ಮತ್ತು ಆತಿಥ್ಯ, ರೇಲ್ವೆ ಬಂಡವಾಳ ಹೂಡಿಕೆದಾರರಿಗೆ ಏಕಗವಾಕ್ಷಿ ಸೌಲಭ್ಯ.
ಭಾರತಕ್ಕೆ ಬನ್ನಿ, ಬಂಡವಾಳ ಹೂಡಿಕೆ ಮಾಡಿ ಎನ್ನುವುದೇ ಪ್ರಥಮ ಆದ್ಯತೆಯಾಗಲಿದೆ.
ಇಂಥ ವ್ಯವಸ್ಥೆಯಿಂದ ಬಂಡವಾಳ ಹೂಡಿಕೆದಾರರಿಗೆ ಒಂದೇ ಹಂತದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ನೀತಿ ನಿಯಮಗಳ ಪಾಲನೆ ಮತ್ತು ಅಗತ್ಯಪಟ್ಟ ಪರವಾನಗಿ ಪಡೆಯಲು ವ್ಯವಸ್ಥೆ ನಿರ್ಮಾಣ.
ಪ್ರತ್ಯೇಕ ವೆಬ್‌ಸೈಟ್
www.makeinindia.com ವೆಬ್‌ಸೈಟ್ ಮೂಲಕ ದೇಶದಲ್ಲಿ ಬಂಡವಾಳ ಹೂಡಲುಬೇಕಾದ ಎಲ್ಲ ಮಾಹಿತಿ ಒದಗಿಸಲಾಗುತ್ತಿದೆ.
ಯಾವ ಕ್ಷೇತ್ರದಲ್ಲಿ ಬಂಡವಾಳ ಹೂಡಬಹುದು. ಮುಂದಿನ ವರ್ಷಗಳಲ್ಲಿ ನಮ್ಮ ದೇಶ ಮತ್ತು ಇತರ ದೇಶಗಳು ಹೊಂದಬಹುದಾದ ಅಭಿವೃದ್ದಿಯ ಸಾಧ್ಯತೆಯನ್ನು ಅದರಲ್ಲಿ ವಿವರಿಸಲಾಗಿದೆ.
ಹೂಡಿಕೆದಾರರ ಪ್ರಶ್ನೆಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸಲು ವಿಶೇಷ ತಂಡವೇ ಇದೆ.
ಸಮಸ್ಯೆ ಹೇಳಿಕೊಂಡ ಬಳಿಕ
ಯಾರೇ ಒಬ್ಬ ಹೂಡಿಕೆದಾರ ವೆಬ್‌ಸೈಟ್‌ನಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೋಂದಾಯಿಸಿದ ಬಳಿಕ ಅದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಮಾಹಿತಿ ನೀಡಲಾಗುತ್ತದೆ.
ದೇಶಿಯವಾಗಿ ಆದರೆ ನಮ್ಮ ದೇಶದ ಒಳಗೆ ಯಾವ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ವಿಚಾರವನ್ನು ಸರ್ಕಾರ ಪರಿಶೀಲಿಸುತ್ತದೆ. ಅದಕ್ಕಾಗಿ ಅದು ಕಂಪನಿಗಳನ್ನು ಆಯ್ಕೆ ಮಾಡಲಿದೆ.
ಇಂಥ ಕ್ರಮದ ಉದ್ದೇಶವೇನೆಂದರೆ ಅವುಗಳನ್ನು ಜಾಗತಿಕ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ತಯಾರು ಮಾಡುವುದು.
ಪರಿಸರ ಸ್ನೇಹಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಮತ್ತು ಅಂಥ ಕಂಪನಿಗಳು ವಿಶ್ವಮಟ್ಟದಲ್ಲಿ ಸ್ಪರ್ಧೆ ಎದುರಿಸುವಂಥ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ.
ನಿಯಂತ್ರಣ ವ್ಯವಸ್ಥೆ
ಎಲ್ಲ ರೀತಿಯ ನಿಯಂತ್ರಣ ಮತ್ತು ಅನುಸರಣಾ ವ್ಯವಸ್ಥೆಗಳನ್ನು ಸರಳಗೊಳಿಸಲಾಗುತ್ತದೆ. ಈ ಮೂಲಕ ಬಂಡವಾಳ ಹೂಡಿಕೆದಾರರಿಗೆ ಹೆಚ್ಚಿನ ತ್ರಾಸದಾಯಕವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಯಾರಿಗೆ?ಹೇಗೆ?
ಯಾವ ಪ್ರದೇಶದಿಂದ ಹೂಡಿಕೆದಾರರು ಮೇಕ್ ಇನ್ ಇಂಡಿಯಾ ವೆಬ್‌ಸೈಟ್ ಅನ್ನು ನೋಡುತ್ತಾರೆಯೋ ಅಂಥವರ ಭೌಗೋಳಿಕ ಪ್ರದೇಶ, ಆಸಕ್ತಿ ಮತ್ತು ಇತರ ವಿಚಾರಗಳನ್ನು ಪಡೆದುಕೊಳ್ಳುವಂಥ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಅವರು ನೀಡುವ ಮಾಹಿತಿಯಿಂದ ಬೇಕಾದ ವ್ಯವಸ್ಥೆಯನು ಹೂಡಿಕೆದಾರರಿಗೆ ಮಾಡಲಾಗುತ್ತದೆ.
ಸಿದ್ಥತೆ ಹೇಗೆ?
ಹೂಡಿಕೆದಾರರ ನೆರವು ಕೇಂದ್ರ ವಿದೇಶಿ ಹೂಡಿಕೆದಾರರಿಗೆ ನೆರವಾಗುತ್ತದೆ. ದೇಶಕ್ಕೆ ಅವರು ಬಂದು ಇಳಿದ ಕ್ಷಣದಿಂದ ಅವರಿಗೆ ಯಾವೆಲ್ಲ ಅಗತ್ಯಗಳು ಇವೆಯೋ ಎಂಬ ಬಗ್ಗೆ ತಿಳಿದುಕೊಂಡು ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.
-ಸದಾಶಿವ.ಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


