ಸಬ್ಸಿಡಿರಹಿತ ಎಲ್ಪಿಜಿ ದರ ರು. 106 ಇಳಿಕೆ

ಸಬ್ಸಿಡಿರಹಿತ ಎಲ್‍ಪಿಜಿ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ ಭಾನುವಾರ ಬರೋಬ್ಬರಿ ರು. 106 ಇಳಿಕೆ ಮಾಡಿದೆ...
ಎಲ್‍ಪಿಜಿ ಸಿಲಿಂಡರ್
ಎಲ್‍ಪಿಜಿ ಸಿಲಿಂಡರ್
Updated on: 

ನವದೆಹಲಿ: ಸಬ್ಸಿಡಿರಹಿತ ಎಲ್‍ಪಿಜಿ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ ಭಾನುವಾರ ಬರೋಬ್ಬರಿ ರು. 106 ಇಳಿಕೆ ಮಾಡಿದೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ ರು. 708.50ರಿಂದ ರು . 605 ಕ್ಕಿಳಿದಂತಾಗಿದೆ. ಬೆಂಗಳೂರಿನಲ್ಲಿ ದರ ರು. 630.60 ಆಗಿದೆ. ಈ ಹಿಂದೆ ಇದು ರು. 737 ಆಗಿತ್ತು. ಇದೇ ವೇಳೆ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ದರವನ್ನೂ ಇಳಿಕೆ ಮಾಡಲಾಗಿದ್ದು, 19 ಕೆ.ಜಿ.ಯ ಪ್ರತಿ ಸಿಲಿಂಡರ್‍ಗೆ ರು. 151 ಇಳಿಕೆಯಾಗಿದೆ. ಹೀಗಾಗಿ ಇದರ ಪರಿಷ್ಕೃತ ದರ ರು. 1.265 ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com