

ನವದೆಹಲಿ: ಬೆಂಗಳೂರಿನಿಂದ ಹೈದ್ರಾಬಾದ್‌ಗೆ ಕೇವಲ ರು.599! ಇದು ಬಸ್ಸಿನಲ್ಲೂ ಅಲ್ಲ, ರೈಲಿನಲ್ಲೂ ಅಲ್ಲ. ವಿಮಾನದಲ್ಲಿ ಅಂದರೆ ನಂಬುತ್ತೀರಾ? ನಂಬಲೇಬೇಕು, ಇದು ಸ್ಪೈಸ್ ಜೆಟ್ ನೀಡುತ್ತಿರುವ ಭಾರಿ ಕೊಡುಗೆ. ಆದರೆ, ಟಿಕೆಟ್ ಕಾಯ್ದಿರಿಸಲು ನಾಳೆಯೇ ಕೊನೆಯ ದಿನ.
ಕೇವಲ ರು.500ಕ್ಕೆ ದೇಶೀ ಪ್ರಯಾಣ ಕೈಗೊಳ್ಳಬಹುದಾಗಿದ್ದು, ವಿದೇಶಿ ಪ್ರಯಾಣಕ್ಕೆ ರು.3,400 ಪಾವತಿಸಿದರೆ ಸಾಕು ವಿಮಾನದಲ್ಲಿ ಆರಾಮಾಗಿ ಪ್ರಯಾಣಿಸಬಹುದಾಗಿದೆ.
ಈ ಕೊಡುಗೆಯಲ್ಲಿ 4 ಲಕ್ಷ ಸೀಟ್‌ಗಳು ಒಳಪಡಲಿದ್ದು, ಈಗಾಗಲೇ 1 ಲಕ್ಷ ಸೀಟ್‌ಗಳು ಬುಕ್ ಆಗಿವೆ. ಜುಲೈ 1ರಿಂದ ಅಕ್ಟೋಬರ್ 2 ರವರೆಗಿನ ಪ್ರಯಾಣಕ್ಕೆ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಫೆ.11ರಿಂದು ಬುಕ್ಕಿಂಗ್ ಸೌಲಭ್ಯವನ್ನು ಮುಕ್ತವಾಗಿರಿಸಲಾಗಿದೆ. ಆದರೆ, ಫೆ.13 ಕಡೆಯ ದಿನವಾಗಿದ್ದು, ಇನ್ನೊಂದೇ ದಿನ ಬಾಕಿ ಇದೆ.
ದೇಶೀ ಪ್ರಯಾಣ: ಹೈದ್ರಾಬಾದ್‌ನಿಂದ ವಿಜಯವಾಡ, ಗುವಾಹಟಿಯಿಂದ ಕೋಲ್ಕತ್ತಾ, ಬೆಂಗಳೂರಿನಿಂದ ಹೈದ್ರಾಬಾದ್, ದೆಹಲಿಯಿಂದ ಡೆರ್ಹಾಡೂನ್, ಅಹಮದಾ ಬಾದ್‌ನಿಂದ ಮುಂಬೈಗೆ ಪ್ರಯಾಣಿಸಬಹುದಾಗಿದೆ.
ವಿದೇಶಿ ಪ್ರಯಾಣ: ದೆಹಲಿಯಿಂದ ಕಟ್ಮಂಡು ಹಾಗೂ ಇತರೆ ಮಾರ್ಗಕ್ಕೂ ಸೌಲಭ್ಯವಿದೆ. ಕೊಲಂಬೋ, ಕಾಬುಲ್ ಮತ್ತು ದುಬೈ-ಅಹಮದಾಬಾದ್-ದುಬೈ ಮಾರ್ಗಗಳ ಮಾಹಿತಿ ಇನ್ನೂ ಲಭ್ಯವಾಗಿಲ್ಲ.