ವಾಣಿಜ್ಯ

ಆದಾಯ ತೆರಿಗೆ ಪಾವತಿ ಮಾಡದಿರುವ ಸಂಸ್ಥೆಗಳ ಹೆಸರು ಪ್ರಕಟ

ಆದಾಯ ತೆರಿಗೆ ಪಾವತಿ ಮಾಡದಿರುವ ಸಂಸ್ಥೆಗಳ ಹೆಸರು ಪ್ರಕಟ
ಆದಾಯ ತೆರಿಗೆ
Published On :

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡದೇ ಇರುವ ಸಂಸ್ಥೆಗಳ ಪಟ್ಟಿಯನ್ನು ಪ್ರಕಟ ಮಾಡುವ ಮೂಲಕ ಆದಾಯ ತೆರಿಗೆ ಇಲಾಖೆ ಮಂಗಳವಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ತೆರಿಗೆ ಪಾವತಿ ಮಾಡದೇ ಇರುವ ವ್ಯಕ್ತಿಗಳ ಹೆಸರು ಪ್ರಕಟ ಮಾಡುವುದರಿಂದ ಸಾಮಾನ್ಯ ಜನರೂ ತೆರಿಗೆ ಪಾವತಿ ಮುಂದಾಗುತ್ತಾರೆ. ಈ ನಡೆ ಸ್ವೀಕರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೇ ಕಾನೂನು ವಿರುದ್ಧವಾಗಿ ನಡೆದುಕೊಳ್ಳುವವರಿಗೆ ಎಚ್ಚರಿಕೆ ಸಂದೇಶ ನೀಡಿದಂತಾಗುತ್ತದೆ. ಈ ಎಲ್ಲ ಹೆಸರುಗಳನ್ನು ನಾವು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿದೆ ಎಂದು ಹಿರಿಯ ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿ ಮಾಡದೇ ಇರುವ 18 ಮಂದಿಯ ಹೆಸರನ್ನು ಪ್ರಕಟಗೊಳಿಸಿದ್ದು, ಈ ಪಟ್ಟಿಯಲ್ಲಿ ಗೋಲ್ಡ್‌ಸುಖ್ ಟ್ರೇಡ್ ಮತ್ತು ಸೊಮಾನಿ ಸಿಮೆಂಟ್ ಕಂಪನಿಯ ಹೆಸರೂ ಇದೆ.

ತೆರಿಗೆ ಪಾವತಿ ಮಾಡದೇ ಇರುವವರ ಹೆಸರನ್ನು ಪ್ರಕಟಿಸಿ ಎಂದು ಆದಾಯ ತೆರಿಗೆ ಇಲಾಖೆಯವರಲ್ಲಿ ಸೆಂಟ್ರಲ್ ಬೋರ್ಡ್ ಆಫ್  ಡೈರೆಕ್ಟ್ ಟ್ಯಾಕ್ಸೆಸ್ (ಸಿಬಿಡಿಟಿ) ಹೇಳಿತ್ತು. ಪಟ್ಟಿಯಲ್ಲಿ ಹೆಸರು ಇರುವ ವ್ಯಕ್ತಿಗಳು ಆದಷ್ಟು ಬೇಗ ತೆರಿಗೆ ಪಾವತಿಸಿ ಎಂಬ ನೋಟಿಸ್ ಕೂಡಾ ವೆಬ್‌ಸೈಟ್‌ನಲ್ಲಿದೆ.

ಇದೇ ಪ್ರಥಮ ಬಾರಿಗೆ ರು. 10 ಕೋಟಿಯಿಂದಲೂ ಹೆಚ್ಚು ತೆರಿಗೆ ಪಾವತಿ ಮಾಡಲು ಬಾಕಿ ಇರುವ ವ್ಯಕ್ತಿಗಳ ಹೆಸರನ್ನು ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ..  ಈ ಪಟ್ಟಿಯಲ್ಲಿ ಸೊಮಾನಿ ಸಿಮೆಂಟ್  (ರು. 27.47 ಕೋಟಿ),  ಬ್ಲೂ ಇನ್‌ಫಾರ್‌ಮೇಷನ್ ಟೆಕ್ನಾಲಜಿ  (ರು. 75.11 ಕೋಟಿ),  ಆ್ಯಪಲ್‌ಟೆಕ್ ಸೊಲ್ಯೂಷನ್ಸ್ ( ರು. 27. 07 ಕೋಟಿ), ಜ್ಯುಪಿಟರ್ ಬ್ಯುಸಿನೆಸ್ (ರು. 21.31) ಮತ್ತು ಹಿರಾಕ್ ಬಯೋಟೆಕ್ (ರು. 18.54 ಕೋಟಿ) ಹೆಸರಿದೆ.

ಇದ ಜತೆಗೆ ಐಕಾನ್ ಬಯೋ ಫಾರ್ಮ ಆ್ಯಂಡ್ ಹೆಲ್ತ್‌ಕೇರ್ (17.69 ಕೋಟಿ),  ಬನ್ಯಾನ್ ಆ್ಯಂಡ್ ಬೆರ್ರಿ ಅಲೋಯಿಸ್ (ರು. 17.48 ಕೋಟಿ),  ಲಕ್ಷ್ಮೀನಾರಾಯಣ್ ಟಿ ಥಕ್ಕರ್ ( ರು. 12. 49 ಕೋಟಿ), ವಿರಾಗ್ ಡೈಯಿಂಗ್ ಆ್ಯಂಡ್ ಪ್ರಿಂಟಿಂಗ್ (ರು. 18.57 ಕೋಟಿ) , ಪೂನಂ ಇಂಡಸ್ಟ್ರೀಸ್ (ರು. 15. 84ಕೋಟಿ), ಕನ್ವರ್ ಅಜಯ್ ಫುಡ್ ಪ್ರೈ ಲಿ (ರು. 15 ಕೋಟಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.