

ಬೆಂಗಳೂರು, ನವಂಬರ್ 27, 2015- ಭಾರತದಲ್ಲಿ ತನ್ನ ಸಬ್ಸಿಡಿಯರಿ ಸಂಸ್ಥೆ ಆಗಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈ. ಲಿಮಿಟೆಡ್ (ಎಂಇಐ) ಬೆಂಗಳೂರು ಸಮೀಪದ ಬಿಡದಿಯಲ್ಲಿ ಸಾಗಣೆ ವ್ಯವಸ್ಥೆಯ ವ್ಯಾಪಾರಕ್ಕೆ ಸಂಬಂಧಿಸಿದ ಕಾರ್ಖಾನೆಯನ್ನು ಪ್ರಾರಂಭಿಸಿದೆ ಎಂದು ಮಿಟ್ಸುಬಿಷಿ ಎಲೆಕ್ಟ್ರಿಕ್ ಕಾರ್ಪೊರೇಷನ್ (ಟೊಕಿಯೊ:6503) ಇಂದು ಪ್ರಕಟಿಸಿದೆ. ಸಾರಿಗೆ ವ್ಯವಸ್ಥೆಯ ವಾರ್ಷಿಕ ಆದಾಯ 2020 ರ ವೇಳೆಗೆ ಭಾರತದಲ್ಲಿ ಯುಎಸ್$170 ಮಿಲಿಯನ್ ಆಗಬೇಕೆಂಬ ಗುರಿಯನ್ನು ಮಿಟ್ಸುಬಿಷಿ ಎಲೆಕ್ಟ್ರಿಕ್ ಹೊಂದಿದೆ. ಸಾರಿಗೆ ಮೂಲಭೂತ ಸೌಕರ್ಯದ ಜಾಗತಿಕ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸಬ್‍ವೇಗಳು ಹಾಗೂ ರೈಲುಗಳ ಸೇವೆಯ ಮಾರಾಟ, ಮಾರಾಟವಾದ ಉಪಕರಣಗಳ ಮೇಂಟೆನೆನ್ಸ್ ಕಾರ್ಯವನ್ನು ಮತ್ತಷ್ಟು ಬಲಪಡಿಸುವ ಅಂಗವಾಗಿ ಇದನ್ನು ಸ್ಥಾಪಿಸುತ್ತಿದೆ.
1960 ರ ಪ್ರಾರಂಭದಲ್ಲಿ ಮಿಟ್ಸುಬಿಷಿ ಎಲೆಕ್ಟ್ರಿಕ್ ಭಾರತದಲ್ಲಿರುವ ತನ್ನ ಗ್ರಾಹಕರಿಗೆ ಲೋಕೋಮೋಟಿವ್ ಉತ್ಪಾದನೆಗೆ ಅಗತ್ಯವಿರುವ ಎಲೆಕ್ಟ್ರಿಕಲ್ ಉತ್ಪನ್ನಗಳನ್ನು ಪೂರೈಸುತ್ತಿತ್ತು. ನಂತರ 2000 ರಿಂದ ಮೆಟ್ರೋ ಯೋಜನೆಗಳಿಗೆ ಅಗತ್ಯವಿರುವ ಎಲೆಕ್ಟ್ರಿಕಲ್ ಪ್ರೊಪಲ್ಷನ್ ಉಪಕರಣ ಸರಬರಾಜು ಮಾಡುವ ಮೂಲಕ ಕಾರ್ಯಕ್ಷೇತ್ರವನ್ನ ವಿಸ್ತರಿಸಿಕೊಂಡಿತು. ಈಗ ರಾಷ್ಟ್ರದ ಮೆಟ್ರೊ ರೈಲ್ ಜಾಲದಲ್ಲಿ ಶೇ. 65 ಟ್ರಾಕ್ಷನ್ ವ್ಯವಸ್ಥೆಯನ್ನು ಹೊಂದಿದೆ.
ಭಾರತದ ಮಾರುಕಟ್ಟೆಯಲ್ಲಿ ಮಿಟ್ಸುಬಿಷಿಯ ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯ ವ್ಯವಹಾರವನ್ನು ವಿಸ್ತುರಿಸುವ ಉದ್ದೇಶದಿಂದ ಸಂಸ್ಥೆ ಈ ಕಾರ್ಖಾನೆಯಲ್ಲಿ ಎಲೆಕ್ಟ್ರಿಕಲ್ ಪ್ರೊಪಲ್ಷನ್ ಉಪಕರಣವನ್ನು ಜೋಡಿಸಲಿದೆ. ಇದು ಸಂಸ್ಥೆ ಭಾರತದಲ್ಲಿ ಹೊಂದಿರುವ ಮೂರನೇ ಘಟಕವಾಗಿದೆ. ಈಗಾಗಲೇ ಸಂಸ್ಥೆ ಆಟೋಮೋಟಿವ್ ಎಕ್ವಿಪ್‍ಮೆಂಟ್ ಮತ್ತು ಫ್ಯಾಕ್ಟರಿ ಆಟೊಮೇಷನ್ ಉತ್ಪನ್ನಗಳನ್ನು ಗುರಗಾಂವ್ ಮತ್ತು ಪುಣೆಯಲ್ಲಿ ಹೊಂದಿದೆ.
ಕಾರ್ಖಾನೆಗೆ ತಗುಲಿರುವ ಅಂದಾಜು ವೆಚ್ಚ ಯುಎಸ್$8 ಮಿಲಿಯನ್ . 4,605 ಸ್ಕ್ವೇರ್ ಮೀಟರ್ ಪ್ರದೇಶದಲ್ಲಿ ಇದಿದೆ. ಘಟಕ ರಾಷ್ಟ್ರದ ಎಲ್ಲೆಡೆ ಮೆಟ್ರೊ ವ್ಯವಸ್ಥೆಗೆ ಅಗತ್ಯವಿರುವ ಟ್ರ್ಯಾಕ್ಷನ್ ಇನ್‍ವರ್ಟರ್ಸ್ , ಮೋಟಾರ್ಸ್ ಹಾಗೂ ಇತರ ಎಲೆಕ್ಟ್ರಿಕಲ್ ಉಪಕರಣಗಳನ್ನು ಉತ್ಪಾದಿಸಲಿದೆ. ಸರಬರಾಜು ಮಾಡಿದ ಉಪಕರಣಗಳನ್ನು ಸುಸ್ಥಿತಿಯಲ್ಲಿಡಲು ಬೇಕಿರುವ ಸೌಲಭ್ಯವನ್ನು ಇದು ಹೊಂದಿದೆ. ಪ್ರಾರಂಭದಲ್ಲಿ ಸುಮಾರು 50 ಜನ ಕಾರ್ಯನಿರ್ವಹಿಸಲಿದ್ದಾರೆ.
ನಮ್ಮ ಕಾರ್ಖಾನೆ ಸಾಗಣೆಗೆ ಅಗತ್ಯವಿರುವ ದೇಶೀ ನಿರ್ಮಿತ ಎಲೆಕ್ಟ್ರಿಕಲ್ ಪ್ರೊಪಲ್ಷನ್ ಉಪಕರಣಗಳನ್ನು ತಯಾರಿಸುತ್ತದೆ. ಭಾರತದಲ್ಲಿ ಈ ಕಾರ್ಖಾನೆಯನ್ನು ತೆರೆಯುವ ಮೂಲಕ ಬಂಡವಾಳ ಹೂಡಲು, ಹೊಸತನ ನೀಡಲು ಹಾಗೂ ಅಭಿವೃದ್ಧಿಯ ಸಾಮರ್ಥ್ಯ ಹೆಚ್ಚಿಸಲು ನಾವು ಬದ್ಧವಾಗಿರುವುದನ್ನು ತೋರಿಸಲಿದ್ದೇವೆ. ಇದನ್ನು ನಾವು ಮೇಕ್ ಇನ್ ಇಂಡಿಯಾದ ಮೊದಲ ಹೆಜ್ಜೆ ಎಂದು ಕರೆಯುತ್ತೇವೆ ಎಂದು ಎಂಇಐ ವ್ಯವಸ್ಥಾಪಕ ನಿರ್ದೇಶಕ ಮಕೊಟೊ ಕಿಟೈ ಇದೇವೇಳೆ ತಿಳಿಸಿದ್ದಾರೆ.