ಆರ್‌ಬಿಐನಿಂದ ಬೇಸಿಸ್ ಪಾಯಿಂಟ್ ದರ ಕಡಿತ

ಆರ್ ಬಿಐ ಬಡ್ಡಿ ದರ ಇಳಿಕೆ ಮಾಡುತ್ತಿದ್ದಂತೆಯೇ ಷೇರು ಪೇಟೆಯಲ್ಲಿ ಸೆನ್ಸೆಕ್ಸ್ 322 ಅಂಕಗಳ ಕುಸಿತ ಕಂಡಿದ್ದು ಎನ್‌ಎಸ್‌ಇ ನಿಫ್ಟಿ 7,700 ಅಂಶಗಳಿಗಿಂತ ಕೆಳಗೆ ಕುಸಿದಿದೆ.

ಮುಂಬೈ: ಆರ್ ಬಿಐ ಬಡ್ಡಿ ದರ ಇಳಿಕೆ ಮಾಡುತ್ತಿದ್ದಂತೆಯೇ ಷೇರು ಪೇಟೆಯಲ್ಲಿ ಸೆನ್ಸೆಕ್ಸ್ 322  ಅಂಕಗಳ ಕುಸಿತ ಕಂಡಿದ್ದು ಎನ್‌ಎಸ್‌ಇ ನಿಫ್ಟಿ 7,700 ಅಂಶಗಳಿಗಿಂತ ಕೆಳಗೆ ಕುಸಿದಿದೆ.
ಏ.5 ರಂದು 2016 -17 ನೇ ಸಾಲಿನ ಮೊದಲ ಹಣಕಾಸು ನೀತಿ ಪರಾಮರ್ಶೆ ನಡೆಸಿರುವ ಆರ್ ಬಿಐ,  ರೆಪೋ ದರವನ್ನು ಶೇ.೦.25 ರಷ್ಟು ಕಡಿತಗೊಳಿಸಿದೆ. ಆರ್ ಬಿಐ ರೆಪೋ ದರ ಇಳಿಕೆ ಮಾಡಿರುವುದು ಷೇರು ಪೇಟೆಯ ಮೇಲೂ ಪರಿಣಾಮ ಬೀರಿದ್ದು ಸೆನ್ಸೆಕ್ಸ್ ಕುಸಿತ ಕಂಡಿದೆ.
ಹಣದುಬ್ಬರ ಇಳಿಕೆಯಾಗಿರುವುದರಿಂದ ಹೂಡಿಕೆಗೆ ಉತ್ತೇಜನ ನೀಡಲು ಆರ್ ಬಿಐ ಬಡ್ಡಿ ದರ ಇಳಿಕೆ ಮಾಡಿದೆ. ಆರ್ ಬಿಐ ನ ನೂತನ ಹಣಕಾಸು ನೀತಿ ಪ್ರಕಟವಾಗುವುದಕ್ಕೂ ಮುನ್ನ ಷೇರು ಸೂಚ್ಯಂಕ ಪ್ರಾರಂಭಿಕ ವಹಿವಾಟಿನಲ್ಲೇ  125 ಅಂಕಗಳನ್ನು ಕಳೆದುಕೊಂಡಿತ್ತು. ಆರ್ ಬಿಐ ಹಣಕಾಸು ನೀತಿ ಪ್ರಕಟಿಸುತ್ತಿದ್ದಂತೆಯೇ 322 .52  ಅಂಕಗಳ ಕುಸಿತ ಕಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com