ವಾಣಿಜ್ಯ

ಭಾರತದ ಆರ್ಥಿಕತೆ ‘ಅಂಧರ ನಾಡಿನ ಒಂಟಿಗಣ್ಣಿನ ರಾಜ’ನಂತೆ: ಆರ್ ಬಿಐ ಗವರ್ನರ್

ಭಾರತದ ಆರ್ಥಿಕತೆ ‘ಅಂಧರ ನಾಡಿನ ಒಂಟಿಗಣ್ಣಿನ ರಾಜ’ನಂತೆ: ಆರ್ ಬಿಐ ಗವರ್ನರ್
ರಘುರಾಮ್ ರಾಜನ್
Published On :
ವಾಷಿಂಗ್ಟನ್: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಮಿನುಗುತ್ತಿರುವ ನಕ್ಷತ್ರ ಎಂದು ಬಣ್ಣಿಸಲಾಗಿದ್ದರೂ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗವರ್ನರ್ ರಘುರಾಮ್ ರಾಜನ್ ಅವರು ಮಾತ್ರ, ಭಾರತದ ಆರ್ಥಿಕತೆ ‘ಅಂಧರ ನಾಡಿನ ಒಂದು ಕಣ್ಣಿನ ರಾಜ’ನಿದ್ದಂತೆ ಎಂದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದರೂ ಭಾರತದ ಆರ್ಥಿಕತೆ ಮಾತ್ರ ಮಿನುಗುತ್ತಿರುವ ನಕ್ಷತ್ರಗಳಲ್ಲಿ ಒಂದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ಸೇರಿದಂತೆ ಹಲವರು ಬಣ್ಣಿಸುತ್ತಿದ್ದಾರೆ. ಆದರೆ ಈ ಸಾಧನೆಗೆ ಭಾರತದ ಆರ್ಥಿಕ ವ್ಯವಸ್ಥೆ ಮೇಲೆ ವಿದೇಶೀ ಆಘಾತಗಳ ಪರಿಣಾಮವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ಕೆಲವು ಅಗತ್ಯ ಕ್ರಮಗಳು ಕಾರಣ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
‘ನಮಗೆ ಸಂತೃಪ್ತಿಯಾಗಿದೆ ಎಂದು ಭಾವಿಸಬಹುದಾದ ಜಾಗಕ್ಕೆ ನಾವಿನ್ನೂ ತಲುಪಿಲ್ಲ. ಹೀಗಾಗಿ ‘ಅಂಧರ ನಾಡಿನ ಒಂಟಿಗಣ್ಣಿನ ರಾಜ’ ಎಂಬ ಮಾತಿದೆ. ನಮ್ಮ ಪರಿಸ್ಥಿತಿ ಹೆಚ್ಚು ಕಡಿಮೆ ಅದರಂತೆ’ ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಐಎಂಎಫ್ ಮಾಜಿ ಮುಖ್ಯ ಆರ್ಥಿಕ ತಜ್ಞ, ಚಿಕಾಗೋ ಬೂತ್ ಸ್ಕೂಲ್ ಆಫ್ ಬಿಸಿನೆಸ್ ವಿಶ್ವವಿದ್ಯಾಲಯದ ಆನ್ ಲೀವ್ ಪ್ರೊಫೆಸರ್ ರಾಜನ್ ಅವರು ವಿಶ್ವಬ್ಯಾಂಕ್ ಮತ್ತು ಐಎಂಎಫ್​ನ ಸಭೆ ಹಾಗೂ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್​ಗಳ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಾಗೆ ಆಗಮಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.