

ಸೆಲೆಬ್ರಿಟಿಗಳಾದ ಲಿಸಾ ಹೇಡನ್, ಚಿತ್ರಾಂಗದ ಸಿಂಗ್ ಮತ್ತು ಶಿಬಾನಿ ದಂಡೇಕರ್ ಸ್ಕಾಚ್ ವಿಸ್ಕಿ ಸಂಗ್ರಹದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಪುರುಷರಿಗಿದು ಹೇಳಿಮಾಡಿಸಿದ ಕೊಡುಗೆ ಎಂದರು.
ಬೆಂಗಳೂರು, ಫೆಬ್ರವರಿ 26, 2016: ಭಾರತೀಯರು ಪ್ರತಿ ಸಮಾರಂಭದಲ್ಲೂ ಸಾಂಪ್ರದಾಯಿಕವಾಗಿ ಕೊಡುಗೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಆದರೆ ಇಂದಿನ ಬಳಕೆದಾರರು ಅವರ ಅಂತಸ್ತನ್ನು ಪ್ರತಿಬಿಂಬಿಸುವಂಥ ಶೈಲಿ, ವೈಶಿಷ್ಟ್ಯ ಹಾಗೂ ವೈಯಕ್ತಿಕವಾಗಿರುವಂಥ ಕೊಡುಗೆಗಳನ್ನು ಬಯಸುತ್ತಾರೆ. ಆದಾಯ ಹೆಚ್ಚಳ, ಅತಿಆಕಾಂಕ್ಷೆ ಹಾಗೂ ಜಾಗತಿಕ ಅಲೆಗೆ ತೆರೆದುಕೊಂಡಿರುವ ಪರಿಣಾಮ ಭಾರತದ ಕೊಡುಗೆಗಳ ಮಾರುಕಟ್ಟೆ ಕಳೆದ ಒಂದು ದಶಕದಲ್ಲಿ ವ್ಯಾಪಕವಾಗಿ ಬೆಳೆದಿದೆ. ಇಂದು ಕೊಡುಗೆಗಳನ್ನು ವೈಯಕ್ತಿಕ ಕೊಡುಗೆ, ಹಬ್ಬದಕೊಡುಗೆ ಮತ್ತು ಕಾರ್ಪೊರೇಟ್ ಕೊಡುಗೆ ಎಂದು ವರ್ಗೀಕರಿಸಬಹುದಾಗಿದೆ.
ಹೆಸರುವಾಸಿ ವ್ಯಕ್ತಿಗಳಾದ ಲಿಸಾ ಹೇಡನ್, ಚಿತ್ರಾಂಗದ ಸಿಂಗ್, ಶಿಬಾನಿ ದಂಡೇಕರ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಪ್ರೀಮಿಯಂಕೋರ್ ಪೋರ್ಟ್ ಫೋಲಿಯೊದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿತೇಶ್‍ಛಾಪ್ರು ಅವರ ಉಪಸ್ಥಿತಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಆತಿಥ್ಯ ವಹಿಸಿದ್ದ ಒಂದು ಅತ್ಯದ್ಭುತ ಸಂಜೆಯಲ್ಲಿ ಎಲ್ಲ ಸಂದರ್ಭಗಳಲ್ಲೂ ಪುರುಷರಿಗೆ ಕೊಡಬಹುದಾದ ಅತ್ಯದ್ಭುತವಾದ ಕೊಡುಗೆಗಳ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‍ನ ಸ್ಕಾಚ್ ವಿಸ್ಕಿ ಸಂಗ್ರಹವನ್ನು ಅನಾವರಣಗೊಳಿಸಲಾಯಿತು. ಸ್ಕಾಚ್ ವಿಸ್ಕಿ ಸಂಗ್ರಹದಲ್ಲಿ ವಿಸ್ಕಿ ರಸಾಸ್ವಾದಕರು ಇಷ್ಟಪಡುವಂಥ ವಿಶೇಷವಾಗಿ ರೂಪಿಸಿದ ಉಡುಗೊರೆಯ ಪೊಟ್ಟಣದಲ್ಲಿ ಉತ್ಕೃಷ್ಟ ಸ್ಕಾಚ್ ವಿಸ್ಕಿಗಳಾದ ಬ್ಲ್ಯಾಕ್‍ಡಾಗ್, ವ್ಯಾಟ್ 69, ಬ್ಲ್ಯಾಕ್ ಆ್ಯಂಡ್ ವೈಟ್‍ಗಳು ಇವೆ. ಬ್ಲ್ಯಾಕ್‍ಡಾಗ್‍ನ ಸ್ವಾದ ಅಥವಾ ಹೆಸರಾಂತ ವ್ಯಾಟ್ 69ನ ದಂತಕಥೆಯಂಥ ರಂಜನೆ ಅಥವಾ ಬ್ಲ್ಯಾಕ್‍ಆಂಡ್ ವೈಟ್‍ನ ಬೆಚ್ಚನೆ ಅನುಭವಕ್ಕೆ ಹೊಂದಬಲ್ಲ ಯಾವುದೇ ಕ್ಷಣಗಳಿಗೂ ಸೂಕ್ತ ಎನಿಸಬಹುದಾದಂಥವು ಈ ಸಂಗ್ರಹದಲ್ಲಿವೆ.
ಸ್ಕಾಚ್ ವಿಸ್ಕಿ ಸಂಗ್ರಹದ ಆರಂಭವನ್ನು ಪುರುಷರಿಗೆ ಕೊಡುಗೆ ನೀಡುವಾಗಿನ ದ್ವಂದ್ವದ ಪರಿಹಾರಕ್ಕೆಅರ್ಪಿಸಲಾಗಿತ್ತು. ಅನುರಾಧಾ ಮೆನನ್ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮ ಪ್ರೇಕ್ಷಕರನ್ನು ಅತಿಯಾಗಿ ರಂಜಿಸಿತು. ಸೆಲೆಬ್ರಿಟಿಗಳಾದ ಲಿಸಾ ಹೇಡನ್, ಚಿತ್ರಾಂಗದ ಸಿಂಗ್ ಮತ್ತು ಶಿಬಾನಿ ದಂಡೇಕರ್ ಅವರು ತಾವು ಸ್ವೀಕರಿಸಿದ ಹಾಗೂ ಹಂಚಿಕೊಂಡ ವೈಯಕ್ತಿಕ ಕೊಡುಗೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಅಲ್ಲದೆ ಸ್ಕಾಚ್ ವಿಸ್ಕಿ ಸಂಗ್ರಹತಮ್ಮ ಪುರುಷ ಸ್ನೇಹಿತರಿಗೆ ಉಡುಗೊರೆ ನೀಡಲುಆಯ್ಕೆ ಸರಳವಾಗಿದೆ ಎಂದು ಅವರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಲಿಸಾ ಹೇಡನ್ ಅವರು ತಮ್ಮಅತ್ಯಾಪ್ತ ಕೊಡುಗೆಯ ಕ್ಷಣಗಳ ಬಗ್ಗೆ ಮಾತನಾಡುತ್ತ, ಪುರುಷರಿಗೆ ಉಡುಗೊರೆ ನೀಡಲು ಇದ್ದಗೊಂದಲ ಈಗ ಪರಿಹಾರವಾಗಿದೆ ಎಂದು ನಾನು ನಂಬಿದ್ದೇನೆ. ಮೊದಲು ಒಂದು ಸಮಾರಂಭಕ್ಕೆ ಸೂಕ್ತವಾದ ಉಡುಗೊರೆ ಆಯ್ಕೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಆದರೆ ಈಗ ಸ್ಕಾಚ್ ವಿಸ್ಕಿ ಸಂಗ್ರಹಎಲ್ಲ ಸಮಾರಂಭಗಳಿಗೂ ಹೇಳಿ ಮಾಡಿಸಿದ ಉಡುಗೊರೆ ಎಂದರು. ಎಲ್ಲ ಪುರುಷರೂ ಸ್ಕಾಚ್ ವಿಸ್ಕಿ ಬಗ್ಗೆ ಮೆಚ್ಚುತ್ತಾರೆ ಮಾತ್ರವಲ್ಲ ಅದರ ಉಡುಗೊರೆಯನ್ನುಇಷ್ಟಪಡುತ್ತಾರೆ ಎಂದರು.
ಚಿತ್ರಾಂಗದ ಸಿಂಗ್ ಮಾತನಾಡಿ, ಯಾರಾದರೂ ನಿಮ್ಮ ಉಡುಗೊರೆಯನ್ನು ಮೆಚ್ಚಿದರೆ ಅದೊಂದು ಅದ್ಭುತ ಅನುಭವ. ಅಂಥ ಪ್ರಶಂಸಾರ್ಹ ಅಭಿವ್ಯಕ್ತಿಯೇ ಸೂಕ್ತ ಉಡುಗೊರೆಯನ್ನು ಆಯ್ಕೆ ಮಾಡುವಾಗಿನ ಪ್ರತಿಕ್ಷಣಗಳನ್ನು ಎಣಿಸುವಂತೆ ಮಾಡುತ್ತದೆ. ನನ್ನ ತಂದೆ ಉತ್ತಮಚಾರಿತ್ರ್ಯ ಹಾಗೂ ಸದೃಢತೆಯ ಪರಿಪೂರ್ಣತೆಗೆ ಹಾತೊರೆಯುವ ವ್ಯಕ್ತಿ. ಅವರು ಸ್ಕಾಚ್ ವಿಸ್ಕಿ ಇಷ್ಟ ಪಡುತ್ತಾರೆ. ಹಾಗಾಗಿ ಒಂದು ಬಾಟಲ್ ವ್ಯಾಟ್ 69 ಅವರಿಗೆ ತಕ್ಕ ಉಡುಗೊರೆ ಎಂದರು.
ಶಿಬಾನಿ ದಂಡೇಕರ್ ಮಾತನಾಡಿ, ನನ್ನ ಆತ್ಮೀಯರ ಬೇಕು ಬೇಡಗಳನ್ನು ಅರಿತಿರುವ ನಾನು ಅವರಿಗೆ ಉಡುಗೊರೆಗಳನ್ನು ಕೊಳ್ಳುವುದನ್ನು ಬಹಳ ಇಷ್ಟಪಡುತ್ತೇನೆ. ಗೆಳೆಯರ ಮನೆಗೆ ಆಹ್ವಾನಿಸಿದಾಗ ನಾನು ಯಾವಾಗಲೂ ಒಂದು ಬಾಟಲ್ ಬ್ಲ್ಯಾಕ್ ಆ್ಯಂಡ್ ವೈಟ್ ಅನ್ನು ಉಡುಗೊರೆಯಾಗಿ ನೀಡುತ್ತೇನೆ. ಏಕೆಂದರೆಅದು ಈಗಿನ ಅತ್ಯಂತ ಸ್ವಾದವುಳ್ಳ ಸ್ಕಾಚ್ ವಿಸ್ಕಿಯಾದ್ದರಿಂದ ಹಂಚಿಕೊಂಡಾಗ ಅದರ ರುಚಿಯೇ ಬೇರೆ. ಯಾರಾದರೂ ಪ್ರಶಸ್ತಿ ಪುರಸ್ಕೃತರಾಗಿದ್ದರೆ ಅಥವಾ ಬಡ್ತಿ ಹೊಂದಿದ್ದರೆ ಅವರಿಗೊಂದು ಬಾಟಲ್ ಬ್ಲ್ಯಾಕ್ ಆ್ಯಂಡ್ ವೈಟ್‍ಅನ್ನು ಕೊಟ್ಟುಅವರ ಸಾಧನೆಯನ್ನು ಸಂಭ್ರಮಿಸಲು ನೆರವಾಗುತ್ತೇನೆಎಂದರು.
ಯುನೈಟೆಡ್ ಸ್ಪಿರಿಟ್ಸ್ ಪ್ರೀಮೀಯಂಕೋರ್ ಪೋರ್ಟ್ ಪೋಲಿಯೊದ ಮಾರುಕಟ್ಟೆ ವಿಭಾಗದ ಮುಖ್ಯಸ್ತ ನಿತೇಶಛಾಪ್ರು ಮಾತನಾಡಿ, ಉಡುಗೊರೆಗಳ ಮಾರುಕಟ್ಟೆ ಭಾರತದಲ್ಲಿ ಶತಕೋಟಿ ಡಾಲರ್‍ಗಳ ಉದ್ಯಮವಾಗಿದ್ದು, ಇನ್ನೂ ಬೆಳೆಯುತ್ತಿದೆ. ಜನರು ಈಗ ಉಡುಗೊರೆಗಳನ್ನು ಖರೀದಿಸುವಾಗ ಹೆಚ್ಚು ವಿನೂತನ ಹಾಗೂ ವೈಯಕ್ತಿಕವಾದ ಕೊಡುಗೆಗಳ ಮೇಲೆ ಗಮನಹರಿಸುತ್ತಾರೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾವು ಸ್ಕಾಚ್ ವ್ಹಿಸ್ಕಿ ಸಂಗ್ರಹ ಆರಂಭಿಸಿದ್ದೇನೆ ಎಂದರು. ನಮ್ಮಲ್ಲಿನ ಉತ್ಕೃಷ್ಟ ವಿಸ್ಕಿಗಳು ಎಲ್ಲ ಸಮಾರಂಭಗಳಿಗೂ ಹೊಂದುವಂಥವು. ಸ್ಕಾಚ್ ವಿಸ್ಕಿ ಸಂಗ್ರಹ ಬ್ಲ್ಯಾಕ್‍ಡಾಗ್, ವ್ಯಾಟ್ 69 ಮತ್ತು ಬ್ಲ್ಯಾಕ್ ಆ್ಯಂಡ್ ವೈಟ್ ಹೊಂದಿದ್ದು ಎಲ್ಲ ಸಮಾರಂಭಗಳಿಗೂ ಹೊಂದುವಂಥ ಅತ್ಯದ್ಭುತ ಸುವಾಸನೆ ಹಾಗೂ ಸ್ವಾದ ಹೊಂದಿದೆ, ಈ ಹಬ್ಬದ ಸಂದರ್ಭದಲ್ಲಿ ಉಡುಗೊರೆ ನೀಡಲು ಯುನೈಟೆಡ್ ಸ್ಪಿರಿಟ್ಸ್ ಉತ್ಕೃಷ್ಟ ಶ್ರೇಣಿಯ ವಿಸ್ಕಿಗಳನ್ನು ನೀಡುತ್ತಿದೆ. ವಿಸ್ಕಿ ರಸಾಸ್ವಾದಕರಿಗೆ ಅವರು ಇಷ್ಟಪಡುವಂಥ ಉಡುಗೊರೆಯ ಪೊಟ್ಟಣ ಮುದ ನೀಡಲಿದೆ. ಆದ್ದರಿಂದ ಹೋಗಿ, ಉಡುಗೊರೆಗಾಗಿ ಸ್ಕಾಚ್ ವಿಸ್ಕಿ ಖರೀದಿಸಿ.