

ಬೆಂಗಳೂರು: ಮೊಬೈಲ್ ಉತ್ಪಾದನೆ ಮತ್ತು ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನಾಯಕನಾಗಿರುವ ಜಿಯೋನಿ ಸಂಸ್ಥೆ ಭಾರತದಲ್ಲಿ ತನ್ನ ನೂತನ ವೊಬೈಲ್ ಉತ್ಪನ್ನ ಎಫ್103 ಪ್ರೊ ಅನ್ನು ಬಿಡುಗಡೆ ಮಾಡಿದೆ. ಈಗಾಗಲೇ ಬಿಡುಗಡೆಗೊಂಡು ಜನಮನ ಗೆದ್ದಿರುವ ಫ್ಯಾಷನ್ ಮತ್ತು ಲೈಫ್‍ಸ್ಟೈಲ್ ಸರಣಿಗೆ ಹೊಸ ಸೇರ್ಪಡೆ ಇದು. ಅಮೋಘವಾದ ಲೋಹದ ದೇಹದ ಈ ಉತ್ಪನ್ನ ತನ್ನ ನಿಖರವಾದ ಮತ್ತು ಅಂದವಾದ ವಿನ್ಯಾಸದಿಂದ ಆಕರ್ಷಕವಾಗಿ ಕಾಣುತ್ತದೆ. ಕೇವಲ ನೋಟದಿಂದಲೇ ಮಾತ್ರ ಅಲ್ಲ, ಕೆಲಸದಿಂದಲೂ ಅದ್ಭುತ ಅನ್ನೋ ಅನುಭವ ನೀಡಲಿದೆ. ಖುಷಿ ಕೊಡುವ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಈ ಉತ್ಪನ್ನವನ್ನು ಬಳಸುವವರಿಗೆ ದಟ್ಟವಾದ ಅನುಭವ ಒದಗಲಿದೆ.
ಜಿಯೋನಿ ಎಫ್103 ಪ್ರೊ ಉತ್ಪನ್ನ ಅಧಿಕೃತ ಆನ್‍ಲೈನ್ ಪಾಲುದಾರ ಸಂಸ್ಥೆಯಾದ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಿದೆ.
ಜಿಯೋನಿ ಎಫ್103 ಪ್ರೊ ಅಮಿಗೋ 3.2 ಮತ್ತು ಆ್ಯಂಡ್ರಾಯ್ಡ್ 6.0ದಿಂದಾಗಿ ಈ ಉತ್ಪನ್ನ ಗ್ರಾಹಕ ಸ್ನೇಹಿ ಅಂತನ್ನಿಸಿಕೊಂಡಿದೆ. ಮುಖ್ಯವಾಗಿ ಈ ವೊಬೈಲ್‍ನಲ್ಲಿ ವಾಟರ್ ಡ್ರಾಪ್ ಗ್ಲಾಸ್ ಡಿಸ್‍ಪ್ಲೇ ಇದೆ. ಹಾಗಾಗಿ ಶ್ರೀಮಂತ ದೃಶ್ಯ ವೈಭವವನ್ನು ಕಟ್ಟಿ ಕೊಡುತ್ತದೆ. ವೊಬೈಲ್ ಸ್ಕ್ರೀನ್ 12.7 ಸೆಂಮೀ(5.0 ಇಂಚು) ಗಾತ್ರ ಇದ್ದು, 1280*720 ರೆಸೆಲ್ಯೂಷನ್ ಹೊಂದಿರುವುದರಿಂದ ಈ ಉತ್ಪನ್ನದಲ್ಲಿ ರೇಡಿಯೋ ನೋಡುವುದು, ಕತೆಗಳನ್ನು ಓದುವುದು, ಬರೆಯುವುದು, ಇ ಮೇಲ್ ಮತ್ತು ಸಂದೇಶಗಳನ್ನು ಕಳಿಸುವುದು ಸುಲಭವಷ್ಟೇ ಅಲ್ಲ, ಒಂದು ಅಪರೂಪದ ಅನುಭವವಾಗಲಿದೆ. ವೇಗದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಅಂತಲೇ 4ಉ ಗಿoಐಖಿಇ ಸೌಲಭ್ಯ ಇದೆ. 3 ಜಿಬಿ ರ್ಯಾಮ್ ಇದೆ. 16 ಜಿಬಿ ರೋಮ್ ಇದೆ. 128 ಜಿಬಿ ವರೆಗೆ ಮೆವೊರಿ ಕಾರ್ಡ್ ಹಾಕುವ ಸೌಲಭ್ಯ ಇದೆ. 2400 ಎಂಎಎಚ್ ಬ್ಯಾಟರಿ ಹೊಂದಿದೆ.
ಜಿಯೋನಿ ಎಫ್103 ಪ್ರೊ ಆಧುನಿಕ ತಂತ್ರಜ್ಞಾನ ಬಳಸಿ ಸಿದ್ಧಗೊಳಿಸಿರುವುದರಿಂದ ಹಲವಾರು ವಿಶೇಷ ಫೀಚರ್‍ಗಳಿವೆ. ಮೆಸೇಜ್ ಮಾಡುವಾಗ ಸುಲಭ ಆಗಲು ಟೆಕ್ಸ್ಟ್ ರೆಕಗ್ನಿಷನ್, ನೆಟ್‍ವರ್ಕ್ ಸಮಸ್ಯೆ ಆದಾಗ ಎಕ್ಸ್‍ಪಾಂಡೆಡ್ ನೆಟ್‍ವರ್ಕ್ ಚಾಯ್ಸ್, ಫೇಸ್ ಬ್ಯೂಟಿ, ಡೆಸ್ಕ್‍ಟಾಪ್ ಎಡಿಟರ್, ಜಿಯೋನಿ ಅಬ್ರಾಡ್ ಸರ್ವೀಸಸ್, ಟ್ರಾಶ್ ಫೀಚರ್ ಮತ್ತು ಟೈಮ್ ಲ್ಯಾಮ್ಸ್ ಎಂಬ ಅಪೂರ್ವ ಆಯ್ಕೆಗಳಿವೆ.
ಈ ವಿಭಿನ್ನ ಉತ್ಪನ್ನವನ್ನು ಬಿಡುಗೊಳಿಸಿ ಮಾತನಾಡಿದ ಮಿ. ಅರವಿಂದ್ ವೊಹ್ರಾ ಹೇಳಿದ್ದಿಷ್ಟು- 'ಶ್ರೇಷ್ಠವಾದ ವಿನ್ಯಾಸ ಹೊಂದಿರುವ ಜಿಯೋನಿ ಎಫ್103 ಪ್ರೊ ಲೋಕಾರ್ಪಣೆಗೊಳಿಸಲು ನಮಗೆ ಹೆಮ್ಮೆ ಇದೆ. ನಮ್ಮ ಫ್ಯಾಷನ್ ಸರಣಿ ಈ ಕಾಲಕ್ಕೆ ಬೇಕಾದ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿರುವ ಉತ್ಪನ್ನ ಸರಣಿ. ಎಫ್103 ಅನೇಕ ವಿಭಿನ್ನ ಮತ್ತು ಹೊಸತಾದ ಫೀಚರ್‍ಗಳನ್ನು ಹೊಂದಿರುವುದರಿಂದ ವೊಬೈಲ್‍ಗೆ ಹೊಸ ನೋಟ ಮತ್ತು ಭಾವ ದಕ್ಕಿದೆ. ಎಫ್ ಸರಣಿ ಯಾವಾಗಲೂ ಮಾರುಕಟ್ಟೆಯಿಂದ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದಿದೆ. ಹಾಗಾಗಿ ಈ ಉತ್ಪನ್ನವನ್ನೂ ಜನ ಮೆಚ್ಚುತ್ತಾರೆ ಮತ್ತು ಸ್ವೀಕರಿಸುತ್ತಾರೆ ಅನ್ನೋ ನಂಬಿಕೆ ಇದೆ.'
ಬಿಳಿ, ಬೂದು ಮತ್ತು ಬಂಗಾರ ಬಣ್ಣಗಳಲ್ಲಿ ಈ ವೊಬೈಲ್ ಲಭ್ಯ. ಎಲ್ಲಾ ಥರದಲ್ಲೂ ಗ್ರಾಹಕ ಸ್ನೇಹಿ ಅನ್ನಿಸಿಕೊಂಡಿರುವ ಈ ಜಿಯೋನಿ ಎಫ್103 ಪ್ರೊ ಉತ್ಪನ್ನದ ಬೆಲೆ ರೂ.11, 999.
ಸ್ಪೆಸಿಫಿಕೇಷನ್‍ಗಳು
• ಭಾರ- 142 ಗ್ರಾಂ
• ಬಣ್ಣ- ಬಿಳಿ, ಬೂದು ಮತ್ತು ಬಂಗಾರ ಬಣ್ಣ
• ಸ್ಕ್ರೀನಿನ ಗಾತ್ರ- 12.7 ಸೆಂಮೀ(5.0)
• ವಿಸ್ತಾರ- 145.3*70.5*8.5 ಎಂಎಂ
• ಸ್ಕ್ರೀನ್ ಟೈಪ್- 2.5ಡಿ, ಐಪಿಎಸ್ ಕೆಪಾಸಿಟಿವ್
• ಕ್ಯಾಮೆರಾ- 13 ಮೆಗಾ ಪಿಕ್ಸೆಲ್
• ಫ್ರಂಟ್ ಕ್ಯಾಮೆರಾ- 5 ಮೆಗಾ ಪಿಕ್ಸೆಲ್(ಫ್ಲಾಶ್ ಇದೆ)
• ಮೆವೊರಿ- 3 ಜಿಬಿ ರ್ಯಾಮ್ + 16 ಜಿಬಿ (128 ಜಿಬಿ ಎಕ್ಸ್‍ಪಾಂಡೇಬಲ್)
• ಬ್ಯಾಟರಿ- 2400 ಎಂಎಎಚ್
• ಕನೆಕ್ಟಿವಿಟಿ- ಡ್ಯುಯಲ್ ಸಿಮ್, ಡ್ಯುಯಲ್ ಸ್ಟಾಂಡ್‍ಬೈ
• ಸಿಪಿಯು- ಕ್ವಾಡ್ ಕೋರ್
• ಓಎಸ್- ಆ್ಯಂಡ್ರಾಯ್ಡ್ 6.0 ಅಮಿಗೋ