ಸ್ವೈಪ್ ಇಲೈಟ್ ಪ್ಲಸ್ ಎಫ್ಎಚ್ ಡಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ

ಸರಳ, ಉತ್ಕೃಷ್ಟ ಮತ್ತು ಲಘುವಾದ ಎಲೀಟ್ ಪ್ಲಸ್ 5” ಡಿಸ್ಪ್ಲೇ, ಕ್ವಾಲ್ಕಾಂ ಸ್ನಾಪ್ಡ್ರಾಗನ್ ಪ್ರೊಸೆಸರ್ ಮತ್ತು ಶಕ್ತಿಶಾಲಿ 3050 mah ಬ್ಯಾಟರಿಯೊಂದಿಗೆ ಅತ್ಯುತ್ತಮ ಅನುಭವ ನೀಡುತ್ತದೆ.
ಸ್ವೈಪ್ ಇಲೈಟ್ ಪ್ಲಸ್ ಎಫ್ಎಚ್ ಡಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ
Updated on: 

ಭಾರತದ ಅಗ್ರ ಮೊಬೈಲ್‍ ಅಂತರ್ಜಾಲ ಸಂಸ್ಥೆಯಾದ ಸ್ವೈಪ್‍ ಟೆಕ್ನಾಲಜೀಸ್ ಬಹಳ ತಿಂಗಳುಗಳ ನಿರೀಕ್ಷೆಯ ನಂತರ, ಸ್ವೈಪ್, ಜೇಬಿಗೆ ಭಾರವಾಗದ, ಸಾಟಿಯಿಲ್ಲದ ಕೌಶಲ್ಯದ ಅನುಭವ ನೀಡುವ ಸೌಂದರ್ಯ ಮತ್ತು ಶಕ್ತಿಯ ಸಮ್ಮೇಳನವಾದ ಎಲೀಟ್ ಪ್ಲಸ್‍ ಅನ್ನು ಶೀಘ್ರವಾಗಿ ಆರಂಭಿಸಲಿದೆ. ಸ್ವೈಪ್ ನ ಈ ಅತಿ ಹೊಸ ಕೊಡುಗೆಯು ಬಳೆಕೆಗೆ ಸುಲಭವಾದ ಕಮಾನಿನಾಕಾರದ ವಿನ್ಯಾಸ, ಉತ್ಕೃಷ್ಟ ಗುಣಮಟ್ಟ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಬಹಳ ದೀರ್ಘ ಬಾಳಿಕೆಯ ಬ್ಯಾಟರಿಯೊಂದಿಗೆ ಬರಲಿದೆ.

ಈ ಹೊಸ ಸ್ಮಾಟ್ರ್ಫೋನ್‍ಅನ್ನು ಆರಂಭಿಸುತ್ತಾ, ಶ್ರೀ ಶ್ರೀಪಾಲ್ ಗಾಂಧಿ, ಸಂಸ್ಥಾಪಕ ಮತ್ತು ಸಿಇಓ ಸ್ವೈಪ್‍ಟೆಕ್ನಾಲಜೀಸ್‍ ಹೇಳಿದರು - ಸ್ಮಾಟ್ರ್ಫೋನ್‍ ಕ್ಷೇತ್ರದಲ್ಲಿ ಅಗ್ರ ಸಂಸ್ಥೆಯಾಗಿ, ನಮ್ಮಗ್ರಾಹಕರಿಗೆ ಪ್ರತಿ ಬಾರಿಯೂ ಉತ್ತಮ ಉತ್ಪನ್ನಗಳನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಮೊಬೈಲ್ ಫೋನ್ ಬಳಕೆದಾರರಿಗೆ ಇಷ್ಟವಾದ ಲಕ್ಷಣಗಳ ಬಗ್ಗೆ ನಾವು ಯಾವಾಗಲೂಅ ವರಿಂದ ಸಲಹೆಗಳನ್ನು ಪಡೆದು, ಅದನ್ನು ನಮ್ಮ ನೂತನ ಕೊಡುಗೆಗಳಲ್ಲಿ ತರುತ್ತೇವೆ. ಹೀಗೆ, ಎಲೀಟ್ ನೋಟ್ ನ ಅಗಾಧ ಯಶಸ್ಸಿನ ನಂತರ, ಈಗ ನಾವು ಎಲೀಟ್ ಪ್ಲಸ್‍ಅನ್ನು ಪ್ರಸ್ತುತ ಪಡಿಸುತ್ತಿದ್ದೇವೆ; ಇದು ಹೊಸ ಸುಧಾರಿತ ಹಾಡ್ರ್ವೇರ್ ಮತ್ತು ತಂತ್ರಾಂಶಗಳನ್ನು ಒಳಗೊಂಡಿದೆ ಮತ್ತು 131 ಗ್ರಾಂ ಗಳಲ್ಲಿ ಬಹಳ ಲಘುವಾಗಿದೆ– ಈ ರೀತಿಯ ಲಕ್ಷಣಗಳಿರುವ ಫೋನ್ ಗಳಲ್ಲಿ ಇದೇ ಬಹಳ ಲಘುವಾದದ್ದು. ಕೌಶಲ್ಯದ ಮತ್ತುತಂತ್ರಜ್ಞಾನದ ಸಮ್ಮೇಳನದ ಸೌಂದರ್ಯವಾಗಿದೆ ಎಲೀಟ್ ಪ್ಲಸ್. ಉತ್ತಮ ಹಾಡ್ರ್ವೇರ್ ಮತ್ತು ತಂತ್ರಾಂಶಗಳ ವಿಷಯದಲ್ಲಿ ಉತ್ತಮ ಅನುಭವವನ್ನು ಕೇಳುವ ಭಾರತೀಯ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ದೇಶದ ಆಕಾಂಕ್ಷಿ ಯುವಕರಿಗೆ ಅತ್ಯುತ್ತಮ ಅನುಭವ ನೀಡಲು ಎಲೀಟ್ ಪ್ಲಸ್‍ ಅನ್ನು ಸ್ಪರ್ಧಾತ್ಮಕವಾದುದರದಲ್ಲಿ ನೀಡಲಾಗುತ್ತಿದೆ.

ಕ್ವಾಲ್ಕಾಂ ಸ್ನಾಪ್ಡ್ರಾಗನ್ 64 ಬಿಟ್ 615 ಆಕ್ಟಾಕೋರ್ ಪ್ರೊಸೆಸರ್ ಉಳ್ಳ ಎಲೀಟ್ ಪ್ಲಸ್, ಎಲ್ಲಾ ಭಾರವಾದ ಕೆಲಸಗಳನ್ನೂ ಮಾಡುವುದರೊಂದಿಗೆ ಸ್ಮಾಟ್ರ್ಫೋನ್ ನಲ್ಲಿ ಅತ್ಯುತ್ತಮ 3ಡಿ ಗೇಂ ಅನುಭವವನ್ನೂ ನೀಡುತ್ತದೆ. ಎಲೀಟ್ ಪ್ಲಸ್ ನಲ್ಲಿರುವ 2 ಜಿಬಿ RAM ಯಾವುದೇ ಕಷ್ಟವಿಲ್ಲದೆ ಮಲ್ಟಿಟಾಸ್ಕ್ ಮಾಡುತ್ತದೆ. 3050 mah ಬ್ಯಾಟರಿಯಿಂದಾಗಿ ಎಲೀಟ್ ಪ್ಲಸ್‍ ಒಂದು ಪೂರ್ಣದಿನದ ಬಳಕೆ ಬರುತ್ತದೆ. ಒಂದು ಉತ್ಕೃಷ್ಟವಾದ ಉಪಕರಣವು ಉನ್ನತ ವೇಗದ ಸಂಪರ್ಕವನ್ನು ಹೊಂದಿರಬೇಕೆಂಬುದನ್ನು ಪರಿಗಣಿಸಿ, ಎಲೀಟ್ ಪ್ಲಸ್ ನ ವಿನ್ಯಾಸಕಾರರು 2G/3G/4G LTE/ EVDO/CDMA ಮಾನದಂಡಗಳನ್ನು ಅದ್ಭುತವಾದ ವೇಗದಲ್ಲಿ ಬೆಂಬಲಿಸಿದ್ದು, ಬಳಕೆದಾರರಿಗೆ ಸಹಾಯಕವಾಗಲಿದೆ.

ತನ್ನ ಕ್ಯಾಮೆರಾಗಳಿಂದ ಎಲೀಟ್ ಪ್ಲಸ್ ಮತ್ತೊಂದು ಸಾಧನೆ ಮಾಡಿದೆ. 13 MP ಹಿಂಬದಿ ಕ್ಯಾಮೆರಾ ಮತ್ತು 8 MPಮುಂಬದಿ ಕ್ಯಾಮೆರಾದೊಂದಿಗೆ ಎಲೀಟ್ ಪ್ಲಸ್‍ ಉನ್ನತ ರೆಸಲ್ಯೂಶನ್ ಸೆಲ್ಫೀ ಮತ್ತು ಇತರಎಲ್ಲಾ ಚಿತ್ರಗಳನ್ನೂ ವಿವರಗಳಲ್ಲಿ ರಾಜಿಮಾಡಿಕೊಳ್ಳದೆ ತೆಗೆಯಬಹುದು. ಸಂಗೀತ ಪ್ರೇಮಿಗಳಿಗೆ, ಎಲೀಟ್ ಪ್ಲಸ್‍ ಅದ್ಭುತ ಧ್ವನಿಯನ್ನು ನೀಡುವ ಹೊಸ ಆವೃತ್ತಿಯ ಸ್ಪೀಕರ್ ಗಳನ್ನು ಹೊಂದಿದೆ; ಇಲ್ಲಿ ಪ್ರತಿ ಸ್ಪೀಕರ್ ಗೆ ಪ್ರತ್ಯೇಕ ಆಂಪ್ಲಿಫೈರ್‍ ಇದ್ದು, ಒಂದು ಸ್ಮಾಟ್ರ್ಫೋನ್ ನಲ್ಲಿ ಹಿಂದೆಂದೂ ಇಲ್ಲದ ಧ್ವನಿಯ ಗುಣಮಟ್ಟ ನೀಡುತ್ತದೆ.
ಈ ಫೋನ್ ನಲ್ಲಿ ಫುಲ್ ಹೈ ಡೆಫಿನಿಶನ್ (FHD) 5” 1920x1080 IPS ಡಿಸ್ಪ್ಲೇ ಇದ್ದು, ದಕ್ಷವಾದ ಸ್ಕೀನ್ ಸಾಮಾನ್ಯ LCDಗಿಂತ 40% ಹೆಚ್ಚು ಬಣ್ಣಗಳನ್ನು ನೀಡುತ್ತದೆ; ಇದರಿಂದ ನೇರ ಬಿಸಿಲಿನಲ್ಲೂ ಉಜ್ವಲವಾದ ಗ್ರಾಫಿಕ್ಸ್ ಮತ್ತು ಗೇಂ ಆಡಬಹುದು. ತನ್ನ ಹೊಸ ದಕ್ಷವಾದ ಕಮಾನಿನಾಕೃತಿಯ ವಿನ್ಯಾಸದಿಂದ ಬಹಳ ಸ್ವಾಭಾವಿಕವಾದ ನಿಯಂತ್ರಣ ಸಿಗುತ್ತದೆ. ಈ ಹೊಸ ಫೋನ್‍ಉತ್ಕೃಷ್ಟ ಜಾಕ್ವಾರ್ಡ್ ಪಾಲಿಕಾರ್ಬೊನೇಟ್‍ ದೇಹದೊಂದಿಗೆ ಸಣ್ಣದಾದ ಲೋಹದಚೌಕವನ್ನು ಹೊಂದಿದ್ದು, ಇದನ್ನು ಬಿಗಿಯಾಗಿ ಹಿಡಿಯಲು ಇದನ್ನು ಬಾಗಿಸಲಾಗಿದೆ.
ಅತ್ಯದ್ಭುತ ಲಕ್ಷಣಗಳನ್ನು ಹೊಂದಿದ್ದರೂ, ಬಹಳ ಸುಂದರವಾದ ಲಘುವಾದ ಮತ್ತು ಶಕ್ತಿಶಾಲಿ ಸ್ವೈಪ್‍ಎಲೀಟ್ ಪ್ಲಸ್ ಬಹಳ ಆಕರ್ಷಕವಾದದರದಲ್ಲಿ ಲಭ್ಯವಿದೆ.ರೂ. 6999 ರದರದಲ್ಲಿ ಎಲೀಟ್ ಪ್ಲಸ್‍ ಅಕಾಂಕ್ಷಿ ಯುವಕರಿಗೆ ಅಗ್ಗವಾದ ಬಯಕೆಯ ವಸ್ತುವಾಗಲಿದೆ. ಸ್ವೈಪ್ ನ ಈ ಹೊಸ ಕೊಡುಗೆಯು 6 ಜೂನ್ ನಿಂದ ಫ್ಲಿಪ್ಕಾರ್ಟ್ ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.
ಭಾರತದಲ್ಲಿ ಅಂತರ್‍ಜಾಲ ಬಳಕೆದಾರರ ಸಂಖ್ಯೆಯು ಏರುತ್ತಲೇ ಇದ್ದು, ಸ್ಮಾಟ್ರ್ಫೋನ್ ಗಳ ಲಭ್ಯತೆಯು ಇದಕ್ಕೆ ಕಾರಣವಾಗಿದೆ. ಇತ್ತೀಚಿನ ಬಾಸ್ಟನ್‍ ಕನ್ಸಲ್ಟೆನ್ಸಿ ಗ್ರೂಪ್ (BCG) ವರದಿಯಾದ INDIA@DIGITAL.BHARAT ಪ್ರಕಾರ, ಅಂತರ್ಜಾಲವು ಮೊದಲ 100 ದಶಲಕ್ಷ ಜನರನ್ನು ತಲುಪಲು ಆರಂಭದಿಂದ 20 ವರ್ಷಗಳು ಬೇಕಾಯಿತು. ಮುಂದಿನ 200 ದಶಲಕ್ಷಗಳನ್ನು ಕೇವಲ 3 ವರ್ಷಗಳಲ್ಲಿ ತಲುಪಲಾಗುವುದು ಮತ್ತು ಇದರಲ್ಲಿ 1/3 ರನ್ನು ಒಂದು ವರ್ಷದಲ್ಲಿಯೇ ತಲುಪಲಾಗುವುದು. ವಾಸ್ತವವಾಗಿ, ಮುಂದಿನ ನಾಲ್ಕು ವರ್ಷಗಳಲ್ಲಿ 350 ದಶಳಕ್ಷ ಹೆಚ್ಚುವರಿ ಅಂತರ್ಜಾಲ ಬಳಕೆದಾರರು ಸೇರಲಿದ್ದಾರೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ಸಣ್ಣ ಪಟ್ಟಣಗಳ/ಗ್ರಾಮೀಣ ಪ್ರದೇಶಗಳ ವಿಸ್ತರಣೆ, ಅಗ್ಗದ ಡಾಟಾ ಸಾಮಥ್ರ್ಯದ ಸ್ಮಾಟ್ರ್ಫೋನ್ ಗಳ ಲಭ್ಯತೆ ಮತ್ತು ಹೆಚ್ಚುತ್ತಿರುವ ಅಂತರ್ಜಾಲದ ಜಾಗೃತಿ ಮತ್ತು ಅವಶ್ಯಕತೆ. ಎರಡನೇ ಮತ್ತು ಮೂರನೇ ಸ್ತರದ ನಗರಗಳ ಆಕಾಂಕ್ಷಿ ಯುವ ಜನತೆಗೆ ಕಡಿಮೆದರದ ಹೆಚ್ಚು ಸಾಮಥ್ರ್ಯದ ಫೋನ್ ಗಳನ್ನು ಒದಗಿಸಿ, ಈ ಮೂಲಕ ಭಾರತದ ಡಿಜಿತಲೈಜೇಶನ್ ಗೆ ಪ್ರೇರೇಪಿಸುವುದು ಸ್ವೈಪ್ ನ ಶ್ರಮವಾಗಿದೆ ಎನ್ನುತ್ತಾರೆ ಶ್ರೀ ಗಾಂಧಿ.
ಶ್ರೀ ಅಜೇಯ್‍ ಯಾದವ್, VP - ಸ್ಮಾಟ್ರ್ಫೋನ್, ಫ್ಲಿಪ್ಕಾರ್ಟ್ ಹೇಳುತ್ತಾರೆ - ಸ್ವೈಪ್ ನ ಅತ್ಯಾಧುನಿಕ ಕೊಡುಗೆ ಎಲೀಟ್ ಪ್ಲಸ್‍ ಅನ್ನು ಆರಂಭಿಸಲು ಸ್ವೈಪ್ ನೊಂದಿಗೆ ಫ್ಲಿಪ್ಕಾರ್ಟ್ ನ ಪ್ರತ್ಯೇಕ ಪಾಲುದಾರಿಕೆಯನ್ನು ಘೋಷಿಸಲು ನನಗೆ ಹರ್ಷವಾಗಿದೆ. ನಾವು ಹಿಂದೆ ಮಾರಿದ ಎಲ್ಲಾ ಸ್ವೈಪ್ ನ ಉತ್ಪನ್ನಗಳಿಗೆ ಅದ್ಭುತವಾದ ಪ್ರತಿಕ್ರಿಯೆಯನ್ನು ಕಂಡಿದ್ದೇವೆ– ಅದರಲ್ಲೂ 2ನೇ ಮತ್ತು 3ನೇ ಸ್ತರದ ನಗರಗಳಿಂದ. ತನ್ನ ಶ್ರೀಮಂತ ಲಕ್ಷಣಗಳು ಮತ್ತು ಆಕರ್ಷಕ ದರದಿಂದ, ಸ್ವೈಪ್ ನ ಈ ಪ್ರಮುಖ ಉತ್ಪನ್ನಕ್ಕೆ ಅತ್ಯುತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ.

ಸ್ವೈಪ್‍ ಎಲೀಟ್ ಪ್ಲಸ್ ನಿರ್ದಿಷ್ಟತೆಗಳು
ಡಿಸ್ಪ್ಲೇ: ಫುಲ್ ಹೈ ಡೆಫಿನಿಶನ್ (FHD), 1920 1080 IPS ಡಿಸ್ಪ್ಲೇ ಮತ್ತು ದಕ್ಷವಾದ ಶಕ್ತಿ ಉಳಿಸುವ ಸ್ಕ್ರೀನ್
ಪ್ರೊಸೆಸರ್: ಕ್ವಾಲ್ಕಾಂ ಸ್ನಾಪ್ಡ್ರಾಗನ್ 615 ಪ್ರೊಸೆಸರ್ 64 ಬಿಟ್‍ ಆಕ್ಟಾಕೋರ್
ಕ್ಯಾಮೆರಾ: ಮುಂಬದಿ - 8 MP ಮತ್ತು ಹಿಂಬದಿ 13 MP
ಬ್ಯಾಟರಿ: ಲಿ ಅಯಾನ್ ಬ್ಯಾಟರಿ 3050 mah, OTGಯೊಂದಿಗೆ
ರ್ಯಾಂ: 2ಜಿಬಿ ರಾಂ: ಆಂತರಿಕ 16 ಜಿಬಿ
ಮೆಮರಿ: 64 ಜಿಬಿಯವರೆಗೆ ವರ್ಧಿಸಬಹುದು ಮತ್ತು ಸ್ವೈಪ್ ಬಾಕ್ಸ್ ಮೂಲಕ 100 ಜಿಬಿ ಕ್ಲೌಡ್ ಸ್ಟೋರೇಜ್
ಹೊಂದಾಣಿಕೆ: 22G/3G/4G LTE/EVDO/CDMA ಮಾನದಂಡಗಳು
ಗಾಜು: ಗೀರು ರಹಿತ ಡ್ರಾಗನ್‍ಟೇಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com