ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೊ ದರ ಈಗ ಶೇಕಡಾ 6 ಮತ್ತು ರಿವರ್ಸ್ ರೆಪೊ ದರ ಶೇಕಡಾ 5.75ರಷ್ಟಿದೆ.
ಐವರು ಸದಸ್ಯರನ್ನೊಳಗೊಂಡ ವಿತ್ತೀಯ ಯೋಜನೆ ಸಮಿತಿ ಇಂದು ಸಭೆ ನಡೆಸಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ರಿವರ್ಸ್ ರೆಪೊ ದರವನ್ನು ಕೂಡ ಬದಲಾಯಿಸದೆ ಶೇಕಡಾ 5.75ರಷ್ಟು ಕಾಪಾಡಿಕೊಂಡು ಹೋಗಲು ನಿರ್ಧರಿಸಿದೆ.
ರಿಸರ್ವ್ ಬ್ಯಾಂಕ್ ನೀತಿ ದರವನ್ನು ಕೂಡ ಕಳೆದ ಏಳು ವರ್ಷಗಳಲ್ಲಿ ಬದಲಾಯಿಸದೆ ಶೇಕಡಾ 6ರಷ್ಟು ಕಾಪಾಡಿಕೊಂಡು ಬಂದಿದೆ.