ಬೆಂಗಳೂರಿನಲ್ಲಿ ಇಂಡಿಯಾ ಮೆಡ್ ಎಕ್ಸ್‏ಪೋ 2017

ಇಂಡಿಯಾ ಮೆಡ್ ಎಕ್ಸ್‏ಪೋನಲ್ಲಿ ವೈದ್ಯಕೀಯ ಸಲಕರಣೆ, ಶಸ್ತ್ರಚಿಕಿತ್ಸಾ ಉತ್ಪನ್ನಗಳು, ಹೀಗೆ ವೈದ್ಯಕೀಯ ವಲಯಕ್ಕೆ ಮೀಸಲಾಗಿರುವ ಉತ್ಪನ್ನಗಳನ್ನು...
ಇಂಡಿಯಾ ಮೆಡ್ ಎಕ್ಸ್‏ಪೋ 2017
ಇಂಡಿಯಾ ಮೆಡ್ ಎಕ್ಸ್‏ಪೋ 2017
Updated on: 

ಬೆಂಗಳೂರು: ಇಂಡಿಯಾ ಮೆಡ್ ಎಕ್ಸ್‏ಪೋ, ಭಾರತೀಯ ಔಷದ ಮತ್ತು ವೈದ್ಯಕೀಯ ವಲಯದ ವಸ್ತು ಪ್ರದರ್ಶನ ಜುಲೈ 1 ರಿಂದ 3ರ ವರೆಗೆ ಡಾ| ಪ್ರಭಾಕರ ಕೋರೆ, ಕನ್ವೆನ್ಷನ್ ಸೆಂಟರ್, ಯಶವಂತಪುರ, ತುಮಕೂರು ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ.

8ನೇ ಆವೃತ್ತಿಯ ಇಂಡಿಯಾ ಮೆಡ್ ಎಕ್ಸ್‏ಪೋನಲ್ಲಿ ವೈದ್ಯಕೀಯ ಸಲಕರಣೆ, ಶಸ್ತ್ರಚಿಕಿತ್ಸಾ ಉತ್ಪನ್ನಗಳು, ಹೀಗೆ ವೈದ್ಯಕೀಯ ವಲಯಕ್ಕೆ ಮೀಸಲಾಗಿರುವ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿವೆ. ಕಾರ್ಯಕ್ರಮದಲ್ಲಿ ಸುಮಾರು 300 ಕಂಪನಿಗಳು ಭಾಗವಹಿಸಿ ಅವರ 5000ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಪ್ರದರ್ಶಿಸಲಿವೆ.

ಇಂಡಿಯಾ ಮೆಡ್ ಎಕ್ಸ್‏ಪೋ 2017ರಲ್ಲಿ ವೈದ್ಯಕೀಯ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ಪನ್ನಗಳಾದ, ಸರ್ಜಿಕಲ್ ಸಲಕರಣೆ, ಆಸ್ಪತ್ರೆ ಸಲಕರಣೆ, ಆಸ್ಪತ್ರೆ ಪೀಠೋಪಕರಣಗಳು, ಹೋಮ್ ಹೆಲ್ತ್ ಕೇರ್ ಉತ್ಪನ್ನಗಳು, ವೈದ್ಯಕೀಯ ಗ್ಯಾಸ್ ಪೈಪ್ ಲೈನ್ ಪ್ರಯೋಗಾಲಯ ಸಾಧನ, ಡಯಾಗ್ನಾಸ್ಟಿಕ್ಸ್, ಫಿಸಿಯೋಥೆರಪಿ, ಆರ್ಥೋಪೆಡಿಕ್ ತಂತ್ರಜ್ಞಾನದ ಸರಕುಗಳು, ರೇಡಿಯಾಲಜಿ, ಇಮೇಜಿಂಗ್, ಕಾರ್ಡಿಯಾಲಜಿ ಉಪಕರಣ ಮತ್ತು ಆಸ್ಪತ್ರೆ ಸರಕುಗಳು ಪ್ರದರ್ಶಿಸಲಿವೆ.

ಈ ಆವೃತ್ತಿಯಲ್ಲಿ ಆರೋಗ್ಯ ಸೇವೆಗೆ ಸಂಬಂಧಿಸಿದ ಹೆಲ್ತ್ ಕೇರ್ ಬಿಲ್ಡಿಂಗ್ ಟೆಕ್ನಾಲಜಿ, ಮೆಡಿಕಲ್ ಪಬ್ಲಿಕೇಷನ್ಸ್, ಹೆಲ್ತ್ ಕೇರ್ ಕನ್ಸಲ್ಟಿಂಗ್ ಸರ್ವಿಸಸ್ ಹಾಗೂ ವೈದ್ಯಕೀಯ ಉದ್ಯಮಕ್ಕೆ ಅಗತ್ಯತೆಗಳನ್ನು ಪೂರೈಸುವಂತಹ ಮಾಹಿತಿ ಮತ್ತು ಸಂವಹನ ನೀಡುವಂತಹ ಕಂಪನಿಗಳು ಭಾಗವಹಿಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com