ವಿಡಿಯೊಕಾನ್ ಗ್ರೂಪ್ ಸಾಲ ಪ್ರಕರಣದಲ್ಲಿ ರಾಜೀವ್ ಕೊಚಾರ್ ಹಾಗೂ ಚಂದಾ ಕೊಚಾರ್ ಪತಿ ದೀಪಕ್ ಕೊಚಾರ್ ಅವರ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದಾ ಕೊಚಾರ್ ಅವರನ್ನೂ ವಿಚಾರಣೆಗೊಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಐಸಿಐಸಿಐ ನ ಕೆಲವು ನಿರ್ದೇಶಕರು ಕೊಚಾರ್ ಅವರನ್ನು ಸಿಇಒ ಸ್ಥಾನದಲ್ಲಿ ಮುಂದುವರೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಪ್ರಕಟಿಸಿದೆ.