ಜಿಎಸ್ ಟಿಯಿಂದ ಏಪ್ರಿಲ್ ವೇಳೆಗೆ 1 ಲಕ್ಷ ಕೋಟಿಗೂ ಹೆಚ್ಚು ಆದಾಯ ಸಂಗ್ರಹ

ನೂತನ ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿಯಿಂದ ಏಪ್ರಿಲ್ ವೇಳೆಗೆ ಸಂಗ್ರಹಿಸಿರುವ ದಾಯದ ಪ್ರಮಾಣ 11 ಲಕ್ಷ ಕೋಟಿ ಗೂ ಹೆಚ್ಚಿದೆ ಎಂದು ಕೇಂದ್ರಸರ್ಕಾರ ಇಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ : ನೂತನ ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿಯಿಂದ ಏಪ್ರಿಲ್ ವೇಳೆಗೆ ಸಂಗ್ರಹಿಸಿರುವ ದಾಯದ ಪ್ರಮಾಣ 11 ಲಕ್ಷ ಕೋಟಿ ಗೂ ಹೆಚ್ಚಿದೆ ಎಂದು ಕೇಂದ್ರಸರ್ಕಾರ ಇಂದು ತಿಳಿಸಿದೆ.

 ಏಪ್ರಿಲ್ ವೇಳೆಗೆ ಒಟ್ಟಾರೇ  ಸಂಗ್ರಹಿಸಿರುವ ಜಿಎಸ್ ಟಿ ಆದಾಯದ ಮೊತ್ತ 1, 03, 458 ಕೋಟಿ ರೂ. ಆಗಿದೆ. ಈ ಪೈಕಿ  ಕೇಂದ್ರೀಯ ಜಿಎಸ್ ಟಿಯಿಂದ  18. 652 ಕೋಟಿ ರಾಜ್ಯ ಜಿಎಸ್ ಟಿಯಿಂದ 25, 704 ಕೋಟಿ, ಇಂಟಿಗ್ರೇಟೆಡ್ ಜಿಎಸ್ ಟಿಯಿಂಂದ 50, 548 ಕೋಟಿ  ಮತ್ತು  8554 ಕೋಟಿ ಸೆಸ್ ನ್ನು  ಸಂಗ್ರಹಿಸಲಾಗಿದೆ ಎಂದು  ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಮಾರ್ಚ್ ಅಂತ್ಯದ ವೇಳೆ 60.47 ಲಕ್ಷ  ಜಿಎಸ್ ಟಿ  3ಬಿ ರಿಟರ್ನ್ಸ್  ಸಲ್ಲಿಕೆಯಾಗಿವೆ. ಏಪ್ರಿಲ್ 30ರ ವೇಳೆಗೆ 87, 12 ಲಕ್ಷ  ರಿಟರ್ನ್ಸ್ ಸಲ್ಲಿಕೆಯಾಗಿವೆ . ಹೀಗೆ ಶೇ.69.5 ರಷ್ಟು ಪಾಲು ತೆರಿಗೆ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ.

 ಈ ಮಧ್ಯೆ  19.31 ಲಕ್ಷ  ಸಂಯೋಜನೆ ವಿತರಕರಲ್ಲಿ  11.47 ಲಕ್ಷ ಮಂದಿ ಅಂದರೆ ಶೇ.59.40 ರಷ್ಟು ತ್ರೈಮಾಸಿಕ ರಿಟರ್ನ್ಸ್ ಸಲ್ಲಿಕೆಯಾಗಿದೆ.  ಒಟ್ಟಾರೇ ಪಾವತಿ ಮೊತ್ತ 279 ಕೋಟಿ ರೂ ಆಗಿದೆ . GST ಯ ತೆರಿಗೆ ಆದಾಯವು ಆರ್ಥಿಕತೆಯಲ್ಲಿ ಉತ್ತುಂಗವನ್ನು ಪ್ರತಿಬಿಂಬಿಸುತ್ತದೆ ಮತ್ತು ಉತ್ತಮ ಅನುಸರಣೆಗೆ ಕಾರಣವಾಗುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಜಿಎಸ್ ಟಿ ತೆರಿಗೆ  ಆದಾಯದಿಂದ ಕೇಂದ್ರ ಹಾಗೂ ರಾಜ್ಯಸರ್ಕಾರ ಒಟ್ಟಾರೇ ಗಳಿಸಿದ ಆದಾಯ 32.493 ಕೋಟಿ ರೂ. ಆಗಿದೆ.  ಏಪ್ರಿಲ್ ತಿಂಗಳಲ್ಲಿ 40.257 ಕೋಟಿ ರಾಜ್ಯ ಜಿಎಸ್ ಟಿಯನ್ನು ಪಾವತಿ ಮಾಡಲಾಗಿದೆ ಎಂದು ವಿವರಿಸಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com