ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.90ರ ಗಡಿ ದಾಟಿದೆ.
ಪೆಟ್ರೋಲ್ ಬೆಲೆ ಇಂದು 11 ಪೈಸೆಯಷ್ಟು ಏರಿಕೆಯಾಗಿದ್ದು, ಪೆಟ್ರೋಲ್ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಇದರಂತೆ ದೇಶದಲ್ಲಿಯೇ ಅಥೀ ಹೆಚ್ಚು ವ್ಯಾಟ್ ಮುಂಬೈ ನಗರದಲ್ಲಿಯೇ ಹಾಕಲಾಗುತ್ತಿದೆ.
ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ಇದರಂತೆ ಡೀಸೆಲ್ ದರ ಕೂಡ 78.58 ಮುಟ್ಟಿದೆ. ಶನಿವಾರ ಮುಂಬೈ ನಲ್ಲಿ ಪೆಟ್ರೋಲ್ ದರ ರೂ.89.97 ಹಾಗೂ ಡೀಸೆಲ್ ದರ ರೂ.78.53 ಇತ್ತು.
ಮುಂಬೈನಂತೆಯೇ ರಾಜಧಾನಿ ದೆಹಲಿಯಲ್ಲಿಯೂ ಕೂಡ ಪೆಟ್ರೋಲ್ ದರ 11 ಪೈಸೆ ಏರಿಕೆಯಾಗಿದೆ. ಇದೀಗ ದೆಹಲಿಯಲ್ಲಿ ಪೆಟ್ರೋಲ್ ದರ ರೂ.82.72 ರಷ್ಟಿದೆ. ಡೀಸೆಲ್ ದರ 5 ಪೈಸೆ ಹೆಚ್ಚಳವಾಗಿದೆ. ಪ್ರಸ್ತುತ ಡೀಸೆಲ್ ದರ ರೂ.74.02 ತಲುಪಿದೆ.
ಇನ್ನು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.83.37 ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್'ಗೆ ರೂ.74.40ರಷ್ಟಿದೆ.