

ವಾಷಿಂಗ್ಟನ್: ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಜೆಗಳನ್ನು ಉದ್ದೇಶಿಸಿ ಡೊನಾಲ್ಡ್ ಟ್ರಂಪ್ ಭಾಷಣ ಮಾಡಿದ ಬೆನ್ನಲ್ಲೇ ಯುಎಸ್ ಸ್ಟಾಕ್ ಮಾರುಕಟ್ಟೆ ಕುಸಿದಿದ್ದರೆ, ಕಚ್ಚಾ ತೈಲದ ಬೆಲೆ ಶೇ. 10 ರಷ್ಟು ದಿಢೀರ್ ಏರಿಕೆಯಾಗಿದೆ.
ಮುಂಬರುವ ವಾರಗಳಲ್ಲಿ ಯುಎಸ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ಯೋಚಿಸಿದೆ ಎಂದು ಅವರು ಹೇಳಿದರು. ಅಮೆರಿಕದ ಕಚ್ಚಾ ತೈಲದ ಬೆಲೆ ಶೇ. 10 ರಷ್ಟು ಏರಿಕೆಯೊಂದಿಗೆ ಪ್ರತಿ ಬ್ಯಾರೆಲ್ ದರ 110 ಡಾಲರ್ ಗೆ ಏರಿಕೆಯಾಗಿದೆ.
ಈ ಮಧ್ಯೆ ಕಚ್ಚಾ ತೈಲದ ಬೆಲೆ ಶೇ. 8 ರಷ್ಟು ಏರಿಕೆಯೊಂದಿಗೆ 109. 38 ಡಾಲರ್ ತಲುಪಿದೆ ಎಂದು ತೈಲ ರಫ್ತು ಮಾಡುವ ಒಪೆಕ್ ರಾಷ್ಟ್ರಗಳ ಬ್ರೆಂಟ್ ಹೇಳಿದೆ. ಈ ಮಧ್ಯೆ ಇರಾನ್ ಇನ್ನೂ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಕಾರ್ಯಾಚರಣೆಗೆ ಬೇಕಾದ ಸಲಕರಣೆಗಳ ತಯಾರಿಕಾ ಘಟಕಗಳನ್ನು ನಿಗೂಢವಾಗಿ ಉಳಿಸಿಕೊಂಡಿದೆ ಎಂದು ಇರಾನ್ ಮಿಲಿಟರಿಯ ವಕ್ತಾರರು ಹೇಳಿದ್ದಾರೆ.
ಭಾರತದಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೊರೆಯನ್ನು ಭರಿಸುತ್ತಿವೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರ ಬೆಲೆಗಳನ್ನು ಸ್ಥಿರವಾಗಿಡಲು ಅಬಕಾರಿ ಸುಂಕವನ್ನು ಕಡಿಮೆ ಮಾಡಿದ್ದು, ಹೊರೆಯ ಭಾಗವನ್ನು ತೈಲ ಮಾರುಕಟ್ಟೆ ಕಂಪನಿಗಳು ಸಹ ಭರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಆರಂಭದಿಂದಲೂ, ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ ಸುಮಾರು 65 ಡಾಲರ್ ನಿಂದ ಈಗ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿವೆ.
Advertisement