ಕೋವಿಡ್-19 ಸಂಕಷ್ಟ: ಎರಡನೇ ಮುಂಗಡ ಹಣ ಪಡೆಯಲು ಇಪಿಎಫ್ಒ ಸದಸ್ಯರಿಗೆ ಅವಕಾಶಕೋವಿಡ್-19 ಎರಡನೇ ಮುಂಗಡ ಹಣವನ್ನು ಖಾತೆಯಿಂದ ಹಿಂತೆಗೆಯುವುದಕ್ಕೆ ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದೆ.
ಮತ್ತೆ ತೈಲೋತ್ಪನ್ನಗಳ ಬೆಲೆ ಏರಿಕೆ: ಇಂದಿನ ಪೆಟ್ರೋಲ್, ಡೀಸೆಲ್ ದರ ಇಂತಿದೆ...ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ 28 ರಿಂದ 29 ಪೈಸೆ ಮತ್ತು ಡೀಸೆಲ್ ದರ 26 ರಿಂದ 28 ಪೈಸೆ ಏರಿಕೆಯಾಗಿದೆ.
ಲಾಕ್ ಡೌನ್ ನಡುವೆಯೂ 2020-21 ಅವಧಿಯಲ್ಲಿ ಕೇಂದ್ರಕ್ಕೆ ತೈಲ ತೆರಿಗೆ ಹೆಚ್ಚಳದಿಂದ 1.8 ಲಕ್ಷ ಕೋಟಿ ಆದಾಯ!ಕೇಂದ್ರ ಸರ್ಕಾರಕ್ಕೆ ತೈಲದ ಮೇಲಿನ ತೆರಿಗೆ ಹೆಚ್ಚಳದಿಂದ 2020-21 ನೇ ಸಾಲಿನಲ್ಲಿ ಬರೊಬ್ಬರಿ 1.8 ಲಕ್ಷ ಕೋಟಿ ಹೆಚ್ಚುವರಿ ಆದಾಯ ಬಂದಿದೆ.
ಜೂನ್ 1 ರಿಂದ ದೇಶೀ ವಿಮಾನಯಾನ ದುಬಾರಿ: ಎಲ್ಲಿಂದೆಲ್ಲಿಗೆ ಎಷ್ಟು ದರ ಇಲ್ಲಿದೆ ಮಾಹಿತಿ...ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದ ಮಿತಿಯನ್ನು ಶೇಕಡ 13 ರಿಂದ 16 ಕ್ಕೆ ಏರಿಸಲು ನಾಗರಿಕ ವಿಮಾನಯಾನ ಸಚಿವಾಲಯ (MoCA ) ನಿರ್ಧರಿಸಿದ ಕಾರಣ ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದ ಜಾರಿಗೆ ಬರಲಿದೆ.
ಜಿಎಸ್ಟಿ ಪರಿಹಾರ ತೆರಿಗೆಯಲ್ಲಿ ಕೊರತೆ: ರಾಜ್ಯಗಳಿಗೆ ನೀಡಲು 1.58 ಲಕ್ಷ ಕೋಟಿ ರೂ. ಸಾಲ ಪಡೆಯಲು ಕೇಂದ್ರ ಮುಂದುರಾಜ್ಯಕ್ಕೆ ನೀಡಬೇಕಾದ ಜಿಎಸ್ ಟಿ ಪರಿಹಾರ ತೆರಿಗೆ(GST compensation cess)ಯಲ್ಲಿ ಆಗುತ್ತಿರುವ ಕೊರತೆಯನ್ನು ಸರಿತೂಗಿಸಲು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಶೇಷ ಆಯ್ಕೆ ಮೂಲಕ ಸಾಲ ಪಡೆಯಲು ಮುಂದಾಗಿದೆ.
ಮತ್ತೆ ತೈಲೋತ್ಪನ್ನಗಳ ದರ ಏರಿಕೆ; ಮುಂಬೈನಲ್ಲಿ ದಾಖಲೆಯ 100 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮೊದಲ ಬಾರಿಗೆ ಪೆಟ್ರೋಲ್ ದರ 100 ರೂ ಗಡಿ ದಾಟಿದೆ.
ಬಿಗ್ಬಾಸ್ಕೆಟ್ನಲ್ಲಿ ಹೆಚ್ಚಿನ ಪಾಲು ಖರೀದಿಸಿ ಆನ್ಲೈನ್ ದಿನಸಿ ಮಾರುಕಟ್ಟೆ ಪ್ರವೇಶಿಸಿದ ಟಾಟಾಟಾಟಾ ಸನ್ಸ್ ಪ್ರೈ. ಲಿಮಿಟೆಡ್ ಆನ್ಲೈನ್ ದಿನಸಿ ಮಾರಾಟ ಸಂಸ್ಥೆ ಬಿಗ್ಬಾಸ್ಕೆಟ್ನ ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ, ಇ-ಕಾಮರ್ಸ್ ದೈತ್ಯ ಅಮೆಜಾನ್.ಕಾಮ್ ಇಂಕ್, ವಾಲ್ಮಾರ್ಟ್ ಇಂಕ್. ಫ್ಲಿಪ್ಕಾರ್ಟ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗಳಿಗೆ ನೇರ ಸ್ಪರ್ಧೆಗೆ ಇದೀಗ ಟಾಟಾ ತೊಡಗಿದೆ.
ರೂ.2000 ಮುಖಬೆಲೆಯ ಪಿಂಕ್ ನೋಟಿಗೆ ವಿದಾಯ? ಕಳೆದ ವರ್ಷ 57,757 ಕೋಟಿ ರೂ. ಮೌಲ್ಯದ ನೋಟು ಹಿಂದಕ್ಕೆ!ಕಳೆದ ಎರಡು ವರ್ಷಗಳಿಂದ 2,000 ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿರುವ ಆರ್ಬಿಐ ಪ್ರಜ್ಞಾಪೂರ್ವಕವಾಗಿ ಪಿಂಕ್ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಳ್ಳುತ್ತಿದೆ.
ನೌಕರರ ಲಿಂಕ್ಡ್ ವಿಮಾ ಯೋಜನೆಯಡಿ ಪಾವತಿಸಬೇಕಾದ ಇಡಿಎಲ್ಐ ಪ್ರಯೋಜನಗಳ ವರ್ಧನೆಇಪಿಎಫ್ ಸದಸ್ಯರ ಅನುಕೂಲಕ್ಕಾಗಿ ಭಾರತ ಸರ್ಕಾರವು ದಿನಾಂಕ 28.04.2021 ರಂದು, ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ, 1976 ಗೆ ಗೆಜೆಟ್ ಅಧಿಸೂಚನೆ ಸಂಖ್ಯೆ ಜಿಎಸ್ಆರ್ 299 (ಇ) ಉಲ್ಲೇಖಿಸಿ ಈ ಕೆಳಗಿನ ತಿದ್ದುಪಡಿಗಳನ್ನು ಮಾಡಿದೆ.
ಎರಡು ದಿನಗಳ ನಂತರ ಮತ್ತೆ ತೈಲೋತ್ಪನ್ನಗಳ ಬೆಲೆ ಏರಿಕೆ: ಇಂದಿನ ದರ ಪಟ್ಟಿ ಹೀಗಿದೆ...ಎರಡು ದಿನಗಳ ಸ್ಥಿರತೆಯ ಬಳಿಕ ಗುರುವಾರ ಮತ್ತೆ ತೈಲೋತ್ಪನ್ನಗಳ ಬೆಲೆಗಳು ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 25 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 30 ಪೈಸೆ ವರೆಗೂ ದರ ಏರಿಕೆಯಾಗಿದೆ.
ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ 'ಕೂ'ಗೆ 30 ಮಿಲಿಯನ್ ಡಾಲರ್ ಹೂಡಿಕೆ!ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ ಕೂ'ಸಾಮಾಜಿಕ ಜಾಲತಾಣದ ಆಪ್ ಗೆ ಹೂಡಿಕೆ ಹರಿದುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೂ'ಗೆ 30 ಮಿಲಿಯನ್ ಡಾಲರ್ ನಷ್ಟು ಹೂಡಿಕೆ ಹರಿದುಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ನನ್ನ ಬಳಿ ಹಣವಿಲ್ಲ, ಭಾರತದ ವಕೀಲರ ಶುಲ್ಕ ಪಾವತಿಸಲು ನೆರವಾಗಿ: ಯುಕೆ ಕೋರ್ಟಿಗೆ ವಿಜಯ್ ಮಲ್ಯ ಮನವಿಭಾರತದಲ್ಲಿನ ತನ್ನ ವಕೀಲರಿಗೆ ಪಾವತಿಸಲು ಲಂಡನ್ನ ನ್ಯಾಯಾಲಯದ ನಿಧಿಯಿಂದ 758,000 ಯೂರೋ (ರೂ.7.8 ಕೋಟಿ) ನೀಡುವಂತೆ ವಿಜಯ್ ಮಲ್ಯ ಯುಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ,
ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡಾ 1.3ಕ್ಕೆ ಏರಿಕೆ: ಎಸ್ಬಿಐ ವರದಿ2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ 1.3 ಕ್ಕೆ ತಲುಪುವ ಲಕ್ಷಣ ಇದೆ ಪೂರ್ಣ ಹಣಕಾಸು ವರ್ಷದಲ್ಲಿ ಶೇಕಡಾ 7.3 ರಷ್ಟು ಏರಬಹುದು ಎಸ್ಬಿಐ ಸಂಶೋಧನಾ ವರದಿ 'Ecowrap' ತಿಳಿಸಿದೆ.
ಆರ್ ಡಿಐಎಫ್, ಪ್ಯಾನೇಶಿಯಾ ಬಯೋಟೆಕ್ ಸಹಭಾಗಿತ್ವದಲ್ಲಿ ದೇಶದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಆರಂಭ!ರಷ್ಯಾದ ಸಾರ್ವಭೌಮತ್ವ ಸಂಪತ್ತು ನಿಧಿ ಸಹಭಾಗಿತ್ವದಲ್ಲಿ ದೇಶದ ಪ್ರಮುಖ ಔಷಧೀಯ ಕಂಪನಿ ಪ್ಯಾನೇಶಿಯಾ ಬಯೋಟೆಕ್ ಭಾರತದಲ್ಲಿ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕೆಯನ್ನು ಉತ್ಪಾದನೆಯನ್ನು ಆರಂಭಿಸಿದೆ ಎಂದು ಜಂಟಿ ಹೇಳಿಕೆಯೊಂದರಲ್ಲಿ ಸೋಮವಾರ ತಿಳಿಸಲಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆ; ಇಲ್ಲಿದೆ ಸಂಪೂರ್ಣ ದರ ಪಟ್ಟಿದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ 23 ಪೈಸೆ ಮತ್ತು ಡೀಸೆಲ್ ದರ 25 ಪೈಸೆ ಏರಿಕೆಯಾಗಿದೆ.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!