ಬಾಲಿವುಡ್ ನಲ್ಲಿ ಪ್ರಿಯಾಂಕ ಚೋಪ್ರ ನನ್ನ ಮೊದಲ ಗೆಳತಿ: ದೀಪಿಕಾ

ಬಾಲಿವುಡ್ ಗೆ ಪ್ರವೇಶಿಸುವುದಕ್ಕೂ ಮುಂಚಿತವಾಗಿಯೇ 'ಬಾಜಿರಾವ್ ಮಸ್ತಾನಿ'ಯ ಸಹನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ಡಿನಿಂದ ನನ್ನ ಮೊದಲ ಗೆಳತಿಯಾಗಿದ್ದರು ಎಂದು ನಟಿ ದೀಪಿಕಾ ಪಡುಕೋಣೆ
'ಬಾಜಿರಾವ್ ಮಸ್ತಾನಿ'ಯಲ್ಲಿ ಪ್ರಿಯಾಂಕ ಮತ್ತು ದೀಪಿಕಾ
'ಬಾಜಿರಾವ್ ಮಸ್ತಾನಿ'ಯಲ್ಲಿ ಪ್ರಿಯಾಂಕ ಮತ್ತು ದೀಪಿಕಾ
Updated on: 

ಮುಂಬೈ: ಬಾಲಿವುಡ್ ಗೆ ಪ್ರವೇಶಿಸುವುದಕ್ಕೂ ಮುಂಚಿತವಾಗಿಯೇ 'ಬಾಜಿರಾವ್ ಮಸ್ತಾನಿ'ಯ ಸಹನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ಡಿನಿಂದ ನನ್ನ ಮೊದಲ ಗೆಳತಿಯಾಗಿದ್ದರು ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

"ನಾನು ಸಿನೆಮಾ ರಂಗಕ್ಕೆ ಕಾಲಿಡುವ ಮುಂಚೆಯೇ ಸಿನೆಮಾ ಮಂದಿಯನ್ನು ಭೇಟಿ ಮಾಡಿದವರಲ್ಲಿ ಪ್ರಿಯಾಂಕ ಮೊದಲಿಗರು. ಆಗಲೇ ಅವರು ಸ್ಟಾರ್ ಆಗಿದ್ದರು. ನಾನು ಬಾಲಿವುಡ್ ಗೆ ಬಂದಾಗ ಅವರೇ ನನ್ನ ಮೊದಲ ಗೆಳತಿ" ಎಂದು ಸಂಜಯ್ ಲೀಲಾ ಭನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಟ್ರೇಲರ್ ಬಿಡುಗಡೆ ವೇಳೆಯಲ್ಲಿ ಹೇಳಿದ್ದಾರೆ.

"ನಾವು ಶೂಟಿಂಗ್ ವೇಳೆಯಲ್ಲಿ ಬಹಳ ಅನ್ಯೋನ್ಯವಾಗಿದ್ದೆವು, ಇದು ಹಲವರಿಗೆ ತೊಂದರೆ ಉಂಟು ಮಾಡಿತು. ಏಕೆಂದರೆ ಜನ ನಮ್ಮ ನಡುವೆ ಉದ್ವಿಘ್ನತೆ ನಿರೀಕ್ಷಿಸಿದ್ದರು" ಎಂದು ಅವರು ತಿಳಿಸಿದ್ದಾರೆ.

'ಪಿಂಗ' ಹಾಡಿನಲ್ಲಿ ಇಬ್ಬರೂ ಅನ್ಯೋನ್ಯವಾಗಿ ಕುಣಿದಿರುವುದು ಪ್ರೇಕ್ಷಕರು ಬಹಳ ಇಷ್ಟಪಟ್ಟಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com