ಮಗುವಿಗೂ ಇಷ್ಟವಾದ ಸನ್ನಿ..

ಹಾಟ್ ಅಂಡ್ ಬ್ಯೂಟಿಫುಲ್ ಸನ್ನಿ ಲಿಯೋನ್ ಅಂದರೆ ಪಡ್ಡೆ ಹುಡುಗರಿಗೆ ತುಂಬಾ ಅಚ್ಚುಮೆಚ್ಚು. ಆದರೆ ಪುಟ್ಟ ಮಗು ಕೂಡ...
ಮಗುವನ್ನು ಎತ್ತಿಕೊಂಡ ಸನ್ನಿ ಲಿಯೋನ್
ಮಗುವನ್ನು ಎತ್ತಿಕೊಂಡ ಸನ್ನಿ ಲಿಯೋನ್
ಹಾಟ್ ಅಂಡ್ ಬ್ಯೂಟಿಫುಲ್ ಸನ್ನಿ ಲಿಯೋನ್ ಅಂದರೆ ಪಡ್ಡೆ ಹುಡುಗರಿಗೆ ತುಂಬಾ ಅಚ್ಚುಮೆಚ್ಚು. ಆದರೆ ಪುಟ್ಟ ಮಗು ಕೂಡ ಸನ್ನಿ ಲಿಯೋನ್ ಅಭಿಮಾನಿಯಾಗಿಬಿಟ್ಟಿದೆ ಎಂದರೆ ನಂಬುತ್ತೀರಾ?
ಹೌದು, ಈ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಸ್ವತಃ ಸನ್ನಿ ಲಿಯೋನೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ವಿಡಿಯೋದಲ್ಲಿ ಸನ್ನಿ ಲಿಯೋನ್ ಮಗುವನ್ನು ಎತ್ತಿಕೊಂಡಿದ್ದಾರೆ. ಆದರೆ ಆ ಮಗು ಆಕೆಯ ಬಳಿಯಿಂದ ಬಿಟ್ಟು ಹೋಗಲೇ ಒಪ್ಪಲಿಲ್ಲ. ಇದು ಅಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿತ್ತು.ಆದ್ರೆ ಮಗು ತಮ್ಮನ್ನು ಬಿಟ್ಟು ಹೋಗದೇ ಇದ್ದದ್ದು ಸನ್ನಿಗೇನು ಬೇಜರಾಗಲಿಲ್ಲ. ನಗು ನಗುತ್ತಲೇ ಅವರು ಮಗುವನ್ನು ಅಪ್ಪಿಕೊಂಡೇ ಇದ್ದರು. '' ಮಗು ನನ್ನನ್ನು ಬಿಟ್ಟು ಹೋಗಲೇ ಒಪ್ಪಲಿಲ್ಲ. ನಾನು ತುಂಬಾ ಧನ್ಯಳಾದೆ'' ಎಂದು ಸನ್ನಿ ಬರೆದುಕೊಂಡಿದ್ದಾಳೆ.
ಈ ಸಂದರ್ಭದಲ್ಲಿ ಮಗುವಿನ ಪೋಷಕರು ಅಲ್ಲೇ ಇದ್ದರು. ಸನ್ನಿ ಹತ್ತಿರವಿದ್ದ ಮಗುವನ್ನು ತೆಗೆದುಕೊಳ್ಳಲು ಹೋದ ವೇಳೆ ಮಗು ಮಾತ್ರ ಸನ್ನಿ ಲಿಯೋಳ್‌‌ನ್ನು ಬಿಟ್ಟು ಹತ್ತಿರ ಬರುತ್ತಲೇ ಇರಲಿಲ್ಲ. ಪದೇ ಪದೇ ಮಗುವಿನ ಪೋಷಕರು ಒತ್ತಾಯ ಮಾಡಿದ್ರೂ ಮಗು ಮಾತ್ರ ಸನ್ನಿಯನ್ನು ಬಿಡಲಿಲ್ಲ. ಒಂದು ಹಂತದಲ್ಲಿ ಸನ್ನಿ ಮಗುವಿನ ಪೋಷಕರಿಗೆ ಬೈ ಬೈ ಹೇಳಿ ಆಚೆ ಹೋಗುವ ದೃಶ್ಯವೂ ವಿಡಿಯೋದಲ್ಲಿದೆ. 
ಆ ಬಳಿಕ ಸನ್ನಿ ಪುಟ್ಟ ಮಗುವನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಸೆಲ್ಫಿ ತೆಗೆಯುವುದು ಹೇಗೆಂದು ಹೇಳಿಕೊಡುವ ಫೋಟೋ ಕೂಡ ಇದೆ. ಈ ಮಗು ದೊಡ್ಡವಳಾದ ಮೇಲೆ ಫೋಟೋ, ವಿಡಿಯೋ ನೋಡಿದರೆ ಖುಷಿಪಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com