ಅಮೀರ್ ಖಾನ್ ಅವರ ರಂಗೀಲಾ ಚಿತ್ರದ ನಿರ್ದೇಶಕರಾಗಿದ್ದ ವರ್ಮಾ, ಟ್ವಿಟರ್ ನಲ್ಲಿ ದಂಗಲ್ ಚಿತ್ರವನ್ನು ಹೊಗಳಿದ್ದು, ತೆರೆಯ ಮೇಲೆ ಚಿರ ಯೌವ್ವನಕ್ಕಾಗಿಯೇ ಪ್ರಾಮುಖ್ಯತೆ ನೀಡುವ ಉಳಿದ ಖಾನ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನ ಉಳಿದ ಖಾನ್ ಗಳು ಯುವಕರ ಪಾತ್ರಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿದರೆ ಅಮೀರ್ ಖಾನ್ ದಂಗಲ್ ಚಿತ್ರದಲ್ಲಿ ಇಬ್ಬರು ಮಕ್ಕಳ ತಂದೆಯ ಪಾತ್ರದಲ್ಲಿ ನಟಿಸುವುದಕ್ಕೂ ಹಿಂಜರಿದಿಲ್ಲ. ಅದ್ಭುತವಾದ ಕತೆಯುಳ್ಳ ಸಿನಿಮಾವನ್ನು ಭಾರತೀಯ ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬ ಅಮೀರ್ ಖಾನ್ ಅವರ ವಿಶ್ವಾಸದ ಬಗ್ಗೆ ನಿಜಕ್ಕೂ ಅಚ್ಚತಿಯಾಗುತ್ತದೆ. ಸೂಪರ್ ಸ್ಟಾರ್ ಗಳು ತೆರೆಯ ಮೇಲೆ ಯುವಕರಾಗಿ ಕಾಣುವ ಸಿಕ್ಸ್ ಪ್ಯಾಕ್ ಗಳ ಹೊರತಾಗಿ ಏನನ್ನೂ ಯೋಚಿಸುವುದಿಲ್ಲ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ. ಅಮೀರ್ ಖಾನ್ ಪ್ರೇಕ್ಷಕರ ಬುದ್ಧಿಮತ್ತೆಯನ್ನು ಗೌರವಿಸಿದ ರೀತಿಯಿಂದ ತಾವು ಆಕರ್ಷಿತರಾಗಿರುವುದಾಗಿ ವರ್ಮಾ ಹೇಳಿದ್ದಾರೆ.